ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದರಾಜ ನಗರ : ಪ್ರಿಯಕೃಷ್ಣ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ನಡೆಯುವ ಕ್ಷೇತ್ರ ಗೋವಿಂದರಾಜನಗರ. ಪಕ್ಕದ ವಿಜಯನಗರ ಕ್ಷೇತ್ರದ ರಾಜಕೀಯ ಈ ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತದೆ. ಹಾಲಿ ಶಾಸಕರು ಕಾಂಗ್ರೆಸ್‌ನ ಪ್ರಿಯಕೃಷ್ಣ.

ಎರಡು ಬಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ ಪ್ರಿಯಕೃಷ್ಣ. ಪ್ರಿಯಕೃಷ್ಣ ತಂದೆ ಎಂ.ಕೃಷ್ಣಪ್ಪ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರು. ಈ ಬಾರಿಯೂ ಪ್ರಿಯಕೃಷ್ಣ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.

ವಿಜಯನಗರದಲ್ಲಿ ವಿ.ಸೋಮಣ್ಣ v/s ಎಂ.ಕೃಷ್ಣಪ್ಪ ಕದನ!ವಿಜಯನಗರದಲ್ಲಿ ವಿ.ಸೋಮಣ್ಣ v/s ಎಂ.ಕೃಷ್ಣಪ್ಪ ಕದನ!

2008ರಲ್ಲಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ವಿ.ಸೋಮಣ್ಣ ಜಯಗಳಿಸಿದ್ದರು. ನಂತರ ಪಕ್ಷ ಬದಲಾಯಿಸಿ ಬಿಜೆಪಿಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ವಿ.ಸೋಮಣ್ಣ ಕಾಂಗ್ರೆಸ್‌ನ ಪ್ರಿಯಕೃಷ್ಣ ವಿರುದ್ಧ ಸೋತಿದ್ದರು. ನಂತರ ಪರಿಷತ್ ಸದಸ್ಯರಾದರು.

ಮಹದೇವಪುರದಲ್ಲಿ ಲಿಂಬಾವಳಿ ಹ್ಯಾಟ್ರಿಕ್ ಬಾರಿಸುವರೇ?ಮಹದೇವಪುರದಲ್ಲಿ ಲಿಂಬಾವಳಿ ಹ್ಯಾಟ್ರಿಕ್ ಬಾರಿಸುವರೇ?

2008, 2013ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಎಂ.ರಂಗೇಗೌಡ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಆದರೆ, ನೇರ ಹಣಾಹಣಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎನ್ನುವುದು ಸದ್ಯದ ಸುದ್ದಿ...

ಕಾಂಗ್ರೆಸ್‌ನಿಂದ ಪ್ರಿಯ ಕೃಷ್ಣ

ಕಾಂಗ್ರೆಸ್‌ನಿಂದ ಪ್ರಿಯ ಕೃಷ್ಣ

2013ರ ಚುನಾವಣೆಯಲ್ಲಿ ಪ್ರಿಯ ಕೃಷ್ಣ ಅವರು ಸುಮಾರು 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಗುವುದು ಖಚಿತ.

ಎಚ್.ರವೀಂದ್ರ ಸೋತಿದ್ದರು

ಎಚ್.ರವೀಂದ್ರ ಸೋತಿದ್ದರು

2013ರ ಚುನಾವಣೆಯಲ್ಲಿ ಬಿಬಿಎಂಪಿಯ ಮಾಜಿ ಸದಸ್ಯ ಎಚ್.ರವೀಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಿಯಕೃಷ್ಣ ವಿರುದ್ಧ ಸೋತಿದ್ದರು. ಈ ಬಾರಿ ಅವರಿಗೆ ಟಿಕೆಟ್ ಸಿಗಲಿದೆಯೇ?.

ಹಲವು ಆಕಾಂಕ್ಷಿಗಳು

ಹಲವು ಆಕಾಂಕ್ಷಿಗಳು

ಈ ಬಾರಿ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದೆ. ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ, ಮಾಜಿ ಮೇಯರ್ ಶಾಂತ ಕುಮಾರಿ ಅವರು ಸಹ ಟಕೆಟ್ ಆಕಾಂಕ್ಷಿಗಳು.

ಯೋಗಿ ಆದಿತ್ಯನಾಥ್ ಬಂದಿದ್ದರು

ಯೋಗಿ ಆದಿತ್ಯನಾಥ್ ಬಂದಿದ್ದರು

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಬೃಹತ್ ಸಮಾವೇಶ ನಡೆಸಿತ್ತು. ಸಾವಿರಾರು ಜನರು ಇದರದಲ್ಲಿ ಪಾಲ್ಗೊಂಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಕ್ಷ ಪ್ರಚಾರ ಆರಂಭಿಸಿದರೂ ಅಭ್ಯರ್ಥಿ ಯಾರು? ಎಂಬುದು ನಿಗೂಢವಾಗಿದೆ.

ಜೆಡಿಎಸ್ ಅಭ್ಯರ್ಥಿ ಯಾರು?

ಜೆಡಿಎಸ್ ಅಭ್ಯರ್ಥಿ ಯಾರು?

ಟಿ.ಎಂ.ರಂಗೇಗೌಡ 2008 ಚುನಾವಣೆಯಲ್ಲಿ19,155, 2013ರ ಚುನಾವಣೆಯಲ್ಲಿ 20,662 ಮತಗಳನ್ನು ಪಡೆದಿದ್ದರು. ಈ ಬಾರಿಯು ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

2013ರಲ್ಲಿ ಗೆದ್ದವರು, ಸೋತವರು?

2013ರಲ್ಲಿ ಗೆದ್ದವರು, ಸೋತವರು?

2013ರ ಚುನಾವಣೆಯಲ್ಲಿ ಪ್ರಿಯಕೃಷ್ಣ 72,654 ಮತಗಳನ್ನು ಪಡೆದಿದ್ದರು. ಬಿಜೆಪಿಯ ರವೀಂದ್ರ ಅವರು 30,194 ಮತ, ಜೆಡಿಎಸ್‌ನ ಟಿ.ಎಂ.ರಂಗೇಗೌಡ 20,662 ಮತಗಳನ್ನು ಪಡೆದಿದ್ದರು.

English summary
BJP ans Congress direct fight in Govindarajnagar assembly constituency, Bengaluru. Congress leader Priyakrishna sitting MLA of the constituency. Umesh Shetty and Shantha Kumari aspirants for BJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X