BY Vijayendra: ವಿಜಯೇಂದ್ರ ತುಮಕೂರು ಭೇಟಿ, ಪದಗ್ರಹಣ ಸಮಾರಂಭದ ದಿನಾಂಕ, ವಿವರ
ತುಮಕೂರು, ನವೆಂಬರ್ 12: ಕರ್ನಾಟಕ ಬಿಜೆಪಿಯಲ್ಲಿನ ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಸರಿಪಡಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲಾಗುವುದು ಎಂದು ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಬಿ.ವೈ.ವಿಜಯೇಂದ್ರ ಹೇಳಿದರು.
ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸಿದ ಮೇಲೆ ತುಮಕೂರು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು. ದೊಡ್ಡ ಪಕ್ಷದಲ್ಲಿ ಒಂದು ನಿರ್ಣಯ ಕೈಗೊಂಡಾಗ ಸಣ್ಣ ಪುಟ್ಟ ವ್ಯತ್ಯಾಸಗಳು ಆಗುತ್ತವೆ. ಅದೇನೆ ಭಿನ್ನಾಭಿಪ್ರಾಯ ಇದ್ದರೂ ಸಹಿತ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BY Vijayendra: ಚದುರಂಗದಾಟದಲ್ಲಿ ಕೊನೆಗೂ ಗೆದ್ದ 'ರಾಜಾಹುಲಿ': ಬಿಎಲ್ ಸಂತೋಷ್ ಭವಿಷ್ಯವೇನು?
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಧ್ಯಕ್ಷನಾಗಿ ನಾನು ಇದೇ ನವೆಂಬರ್ 15ರಂದು ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಾಗುವುದು. ನಂತರ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು.
ನ.16ರಿಂದ ಶಾಸಕಾಂಗ ಪಕ್ಷ ಸಭೆ
ಸದ್ಯ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಕಾರಣದಿಂದ ರಾಷ್ಟ್ರ ನಾಯಕರು ರಾಜ್ಯಕ್ಕೆ ಆಗಮಿಸುವುದಿಲ್ಲ. ಇನ್ನೂ ನವೆಂಬರ್ 16 ಹಾಗೂ 17ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕೇಂದ್ರದಿಂದ ವೀಕ್ಷಕರು ರಾಜ್ಯಕ್ಕೆ ಬರಲಿದ್ದಾರೆ. ಜವಾಬ್ದಾರಿ ಸ್ವೀಕರಿಸಿದ ನಂತರ ಬರದಿಂದ ತತ್ತರಿಸಿದ ಜನರಿಗೆ ಪರಿಹಾರ ಒದಗಿಸಲಾಗುವುದು ಎಂದು ತಮ್ಮ ಆದ್ಯ ಕೆಲಸ ಕುರಿತು ವಿವರಿಸಿದರು.
ಪಕ್ಷದಲ್ಲಿ ಯಾರನ್ನು ಸೈಡ್‌ಲೈನ್ ಮಾಡಿಲ್ಲ: ಬಿವೈವಿ
ಬಿಜೆಪಿಯಲ್ಲಿ ಯಾರನ್ನು ಕಡೆಗಣನೆ (ಸೈಡ್‌ಲೈನ್) ಮಾಡಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿನ ಬಳಿಕ ಬಿಎಸ್ ಯಡಿಯೂರಪ್ಪನವರು ಮತ್ತಷ್ಟು ಆಕ್ಟಿವ್ ಆಗಿ ಪಕ್ಷ ಸಂಘಟನೆಯಲ್ಲಿ ಅವರು ತೊಡಗಿದ್ದಾರೆ. ಈಗಾಗಲೇ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ವಿಪಕ್ಷ ನಾಯಕ ಆಯ್ಕೆ ನಂತರ ದೆಹಲಿಗೆ ಭೇಟಿ ನೀಡಲಾಗುವುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಮೊದಲ ಬಾರಿಗೆ ಬಿವೈ ವಿಜಯೇಂದ್ರ (47) ಅವರು ಶಾಸಕರಾಗಿ ಆಯ್ಕೆ ಆದರು. ದಕ್ಷಿಣ ಕನ್ನಡದಿಂದ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ್ದು, ಇದೀಗ ಅವರ ಸ್ಥಾನಕ್ಕೆ ಬಿವೈ ವಿಜಯೇಂದ್ರ ಅವರು ಆಯ್ಕೆ ಆಗಿದ್ದಾರೆ. ಚುನಾವಣೆ ಗುರಿಯಾಗಿಟ್ಟುಕೊಂಡು ರಾಜ್ಯಾಧ್ಯಕ್ಷ ಸ್ಥಾನದ ಅವಧಿ ವಿಸ್ತರಣೆ ಮಾಡಲಾಗಿತ್ತು.
ಬಿಜೆಪಿಯಲ್ಲಿ ಅಸಮಾಧಾನ
ಸದ್ಯ ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ಆರು ತಿಂಗಳಾದರೂ ವಿಪಕ್ಷ ಸ್ಥಾನದ್ಲಲಿರುವ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆ ಆಗಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಧಿಕಾರದಿಂದ ಕೆಳಗಿಳಿದ ಪಕ್ಷವು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಇನ್ನೂ ನಿರ್ಧರಿಸಿಲ್ಲ. ಇದಕ್ಕು ಆದಷ್ಟು ಶೀಘ್ರವೇ ತೆರೆ ಬೀಳಲಿದೆ. ಸದ್ಯ ರಾಜ್ಯಾಧ್ಯಕ್ಷನ ಆಯ್ಕೆಯಿಂದಾಗಿ ಬಿಜೆಪಿಯಲ್ಲಿ ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications