ಕೊನೆಗೂ ಮಣಿದ ಬಿಎಸ್ ವೈ, 3 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ

ಬೆಂಗಳೂರು, ಮಾರ್ಚ್. 08 : ಕೊನೆಗೂ ಬಿಎಸ್ ಯಡಿಯೂರಪ್ಪ ಅತೃಪ್ತರ ಏಟಿಗೆ ಮಣಿದಿದ್ದಾರೆ. ಪಕ್ಷದ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕು ಎಂಬ ಭಿನ್ನಮತೀಯ ನಾಯಕರ ಪಟ್ಟಿಗೆ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ನಿರ್ಧರಿಸಲಾಗಿದೆ. ಬಳ್ಳಾರಿ, ಬೆಳಗಾವಿ ಮತ್ತು ಕೊಡಗು ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗಲಿದೆ.[ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?]

BJP state president BS Yeddyurappa changes three BJP district unit chiefs

ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರಾದ ಬಳಿಕ ಕೊಡಗಿಗೆ ಮನು ಮುತ್ತಪ್ಪ, ಬೆಳಗಾವಿ ನಗರ ಘಟಕಕ್ಕೆ ಅನಿಲ್ ಬೆನಕೆ ಮತ್ತು ಬಳ್ಳಾರಿಗೆ ಎಸ್.ಗುರುಲಿಂಗನಗೌಡ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದರು.

ಪಕ್ಷದ ಪದಾಧಿಕಾರಿಗಳನ್ನು ಮಾರ್ಚ್ 15ರೊಳಗೆ ಬದಲಾವಣೆ ಮಾಡದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ದೂರು ನೀಡಲಾಗುತ್ತದೆ ಎಂದು ಭಿನ್ನಮತೀಯರು ಎಚ್ಚರಿಕೆ ನೀಡಿದ್ದರು. ಆದ್ದರಿಂದ, ಪದಾಧಿಕಾರಿಗಳ ಬದಲಾವಣೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ನೋಟಿಸ್ ವಾಪಸ್ : ತಮಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸೊಗಡು ಶಿವಣ್ಣ, ಶಿವಯೋಗಿ ಸ್ವಾಮಿ, ರವೀಂದ್ರನಾಥ್ ಹಾಗೂ ನೇಮಿರಾಜ ನಾಯ್ಕ್ ಮಾಡಿರುವ ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ. ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+