ಭಾಸ್ಕರರಾವ್ ರಾಜೀನಾಮೆ ಒತ್ತಾಯಿಸಿ'ಸಹಿ ಸಂಗ್ರಹಣಾ ಅಭಿಯಾನ'
ಹುಬ್ಬಳ್ಳಿ, ನವೆಂಬರ್, 04 : ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಬಿಜೆಪಿ ಪಕ್ಷವು ಬುಧವಾರ ಹುಬ್ಬಳ್ಳಿಯಲ್ಲಿ 'ಸಹಿ ಸಂಗ್ರಹಣಾ ಅಭಿಯಾನ' ಆರಂಭಿಸಿದೆ.
ಸಹಿ ಸಂಗ್ರಹಣಾ ಅಭಿಯಾನ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, 'ಈ ಸಹಿ ಸಂಗ್ರಹಣಾ ಕಾರ್ಯಕ್ಕೆ ಜಾತ್ಯತೀತ ಜನತಾ ದಳದ ನಾಯಕರು ಬೆಂಬಲಿಸುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು, ಹಾಗೂ ಕಾರ್ಯಕರ್ತರೂ ಈ ಸಹಿ ಸಂಗ್ರಹಣಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಲೋಕಾಯುಕ್ತರ ಪದಚ್ಯುತಿಗೆ ಸಹಕರಿಸಬೇಕು ಎಂದು ಕೇಳಿದ್ದಾರೆ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: 5 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್]

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪಕ್ಷಬೇಧ ಮರೆತು ಒಗ್ಗಟ್ಟಾಗಿ ಕಾರ್ಯಪ್ರವೃತ್ತರಾದರೆ ಲೋಕಾಯುಕ್ತ ಸಂಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಜನರು ಲೋಕಾಯುಕ್ತ ಸಂಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಜಗದೀಶ್ ಶೆಟ್ಟರ್ ಕಿವಿಮಾತು ಹೇಳಿದರು.[ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ]
ಮುಖ್ಯಮಂತ್ರಿ ಹೇಳಿಕೆ ಖಂಡನೀಯ :
ಗೋಮಾಂಸ ಸೇವಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಾವೇ ಸೃಷ್ಟಿಸಿದ ವಿವಾದಕ್ಕೆ ಅಂತ್ಯ ಹಾಡಬೇಕು. ಧರ್ಮ ಮತ್ತು ನಂಬಿಕೆಯ ವಿಷಯಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ತೀರ ಹಗುರವಾಗಿ ಮಾತನಾಡಿದ್ದಾರೆ. ಇದರಿಂದ ಧರ್ಮ ಧರ್ಮದ ನಡುವೆ ಸಂಘರ್ಷ ಆರಂಭವಾಗುತ್ತದೆ.['ಸಿದ್ದು ಅವರೆ, ಎಲ್ಲರೂ ಸೈ ಅನ್ನುವಂತೆ ಆಡಳಿತ ನಡೆಸಿ']
ಕಾನೂನು ಸುವ್ಯವಸ್ಥೆ ಕಾಪಾಡುವ ಮುಖ್ಯಮಂತ್ರಿಯವರೇ ಈ ರೀತಿ ಹೇಳಿಕೆ ನೀಡಿದರೆ ಮುಂದೆ ವ್ಯವಸ್ಥೆ ಹದಗೆಡುವ ಸಂಭವ ಇದೆ. ಅಂತಹ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರೇ ಹೊರಬೇಕಾಗುತ್ತದೆ. ಹಾಹಾಗಿ ಮಾತನಾಡುವಾಗ ಸ್ವಲ್ಪ ಎಚ್ಚರದಿಂದ ಮಾತನಾಡಬೇಕು ಎಂಬ ಸಲಹೆ ನೀಡಿದ್ದಾರೆ.












Click it and Unblock the Notifications