PayCm V/S PayCs: ಕಾಂಗ್ರೆಸ್ ನ PayCM ಅಭಿಮಾನದ ವಿರುದ್ದ Pay CS ದಾಳ ಉರುಳಿಸಿದ ಬಿಜೆಪಿ!
ಬೆಂಗಳೂರು, ಆಗಸ್ಟ್ 10: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಡೆಸಿದ್ದ ಅಸ್ತ್ರಗಳೇ ಇಂದು ಕಾಂಗ್ರೆಸ್ ಸರ್ಕಾರಕ್ಕೆ ತಿರುಗುಬಾಣವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ಮಾಡಿದ್ದ Pay CM ಅಭಿಯಾನಕ್ಕೆ ರಿವರ್ಸ್ ವಾಗಿ ಇದೀಗ ಬಿಜೆಪಿ Pay CS ಅಭಿಮಾನವನ್ನ ನಡೆಸುವ ಮೂಲಕ ಕಾಂಗ್ರೆಸ್ ಠಕ್ಕರ್ ನೀಡಿದೆ.
ಹೌದು, ಈ ಹಿಂದೆ ಪೇ ಸಿಎಂ ಅಭಿಮಾನದ ಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಪೇ ಸಿಎಂ ಅಭಿಮಾನ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪೇ ಸಿಎಂ ಅಭಿಮಾನ ಸಾಕಷ್ಟು ಸದ್ದು ಮಾಡಿತ್ತು.

ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸುಗಳಿಸಿದ್ದು, ಶೇ.40 ಪರ್ಸೆಂಟ್ ಭ್ರಷ್ಟಾಚಾರ ವಿಚಾರವಾಗಿ ರೂಪಿಸಲಾದ 'ಪೇ ಸಿಎಂ' ಅಭಿಯಾನ ಬಿಜೆಪಿ ಸೋಲಿಗೆ ಒಂದು ಭಾಗವೂ ಆಗಿತ್ತು.
ಇದೀಗ ಕಾಂಗ್ರೆಸ್ ನ ಪೇ ಸಿಎಂ ಅಭಿಮಾನದ ರೂಪದಲ್ಲಿಯೇ ಮಂಡ್ಯ ಬಿಜೆಪಿ ಅದೇ ಪೇ ಸಿಎಂ ರೀತಿ ಕಾಂಗ್ರೆಸ್ ವಿರುದ್ಧ ಅಭಿಯಾನ ಶುರು ಮಾಡಿಕೊಂಡಿದ್ದು, ಪೇ ಸಿಎಂ ಮಾದರಿಯಲ್ಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ ಅಭಿಯಾನ ಆರಂಭವಾಗಿದೆ.
ಪೇ ಸಿಎಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಗಳನ್ನ ಬಿಜೆಪಿ ಹಾಕಿದ್ದು, ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ದಾರಾಳವಾಗಿ ಸ್ಕ್ಯಾನ್ ಮಾಡಿ ಲಂಚ ಪಾವತಿ ಮಾಡಿ. ಧನ್ಯವಾದಗಳು, ಇಂತಿ ನಿಮ್ಮ ಭ್ರಷ್ಟ ಚೆಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಟ್ಯಾಗ್ ಲೈನ್ ಹಾಕಲಾಗಿದೆ.












Click it and Unblock the Notifications