ಬಿಜೆಪಿ ಪ್ರಾಯೋಜಿತ ಗುಂಪಿನಿಂದ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ: ಎಚ್‌ಡಿಕೆ
Recommended Video
ಬೆಂಗಳೂರು, ಜೂನ್ 26: ಇಂದು ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದಾಗ ಗುಂಪೊಂದು ಬಿಜೆಪಿ ಧ್ವಜ ಹಿಡಿದು ಬಂದು, 'ಮೋದಿ, ಮೋದಿ' ಘೋಷಣೆಗಳನ್ನು ಕೂಗಿತ್ತು, ಇದರಿಂದ ಕುಮಾರಸ್ವಾಮಿ ಅವರು ಗರಂ ಆಗಿದ್ದರು. ಈಗ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಇಂದು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆಂದು ತೆರಳುತ್ತಿರುವ ಸಂದರ್ಭ ಬಿಜೆಪಿ ಬಾವುಟ ಹಿಡಿದ ಗುಂಪೊಂದು ಬಸ್ ಅನ್ನು ತಡೆಯಿತು.
ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಬಿಜೆಪಿ ಪ್ರಾಯೋಜಿತ ಗುಂಪುಗಳು ನನ್ನ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಅಡ್ಡಿಯುಂಟು ಮಾಡುವ ಪ್ರಯತ್ನ ನಿರಂತವಾಗಿ ಮಾಡುತ್ತಿವೆ ಎಂದು ಹೇಳಿದ್ದಾರೆ.
ಇಂತಹ ಪ್ರಯತ್ನಗಳಿಂದ ನನ್ನ ಸ್ಥೈರ್ಯ ಕುಂದದು; ಜನರೊಂದಿಗೆ ಬೆರೆಯುವ, ಅರಿತುಕೊಳ್ಳುವ, ಸ್ಪಂದಿಸುವ ನನ್ನ ಕಾಯಕ ಹೀಗೆ ಮುಂದುವರಿಯುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

'ಮೋದಿ, ಮೋದಿ' ಘೋಷಣೆ ಕೂಗಿದ ಗುಂಪು
ಕುಮಾರಸ್ವಾಮಿ ಅವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆಗುಡ್ಡ ಗ್ರಾಮಕ್ಕೆ ತೆರಳುತ್ತಿರುವ ವೇಳೆ ಕೆಲವರು ಬಿಜೆಪಿ ಧ್ವಜಗಳನ್ನು ಹಿಡಿದು ಬಂದು, 'ಮೋದಿ, ಮೋದಿ' ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ಕುಮಾರಸ್ವಾಮಿ ಗುಂಪಿನೊಂದಿಗೆ ವಾಗ್ವಾದವನ್ನೂ ಮಾಡಿದರು.

ಪ್ರತಿಭಟನಾಕಾರ ಮೇಲೆ ಸಿಟ್ಟು ಪ್ರದರ್ಶಿಸಿದ ಎಚ್‌ಡಿಕೆ
ಇದರ ನಂತರ ಕೆಲವು ಪ್ರತಿಭಟನಾ ಕಾರರು ಕುಮಾರಸ್ವಾಮಿ ಅವರ ಗಾಡಿ ತಡೆದರು, ಅಲ್ಲಿಯೂ ಸಿಟ್ಟು ಪ್ರದರ್ಶಿಸಿದ ಕುಮಾರಸ್ವಾಮಿ, 'ಮೋದಿಗೆ ಮತ ಹಾಕಿ ನನ್ನನ್ನು ಸಮಸ್ಯೆ ಪರಿಹರಿಸುವಂತೆ ಕೇಳುತ್ತಿದ್ದೀರಾ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಪ್ರತಿಭಟನಾಕಾರರೊಂದಿಗೆ ಹಾಗೆ ಮಾತನಾಡಬಾರದಿತ್ತು'
ಆದರೆ ರಾಯಚೂರಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರತಿಭಟನಾಕಾರರೊಂದಿಗೆ ಹಾಗೆ ವರ್ತಿಸಬಾರದಿತ್ತು, ಮುಂದೆ ಹೀಗೆ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾಡಿದ ಟ್ವೀಟ್ ಅಲ್ಲ
ಆದರೆ ಕುಮಾರಸ್ವಾಮಿ ಅವರು ಟ್ವಿಟ್ಟರ್‌ನಲ್ಲಿ ನೀಡಿರುವ ಪ್ರತಿಕ್ರಿಯೆ ತಮ್ಮನ್ನು ಬೆಳಿಗ್ಗೆ ತಡೆದ ಪ್ರತಿಭಟನಾಕಾರರಿಗೆ ಅಲ್ಲದೆ, 'ಮೋದಿ, ಮೋದಿ' ಘೋಷಣೆ ಕೂಗಿದ ಗುಂಪಿಗೆ ಎಂಬುದು ಸ್ಪಷ್ಟ.












Click it and Unblock the Notifications