ವಿದೇಶದಲ್ಲಿ ಭಾರತವನ್ನು ಅವಮಾನಿಸಿರುವ ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರೇ? ಬಿಜೆಪಿ ಪ್ರಶ್ನೆ
ವಿದೇಶದಲ್ಲಿ ರಾಹುಲ್ ಗಾಂಧಿ ಭಾಷಣವನ್ನ ಖಂಡಿಸಿ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಬೆಂಗಳೂರು,ಮಾರ್ಚ್ 9: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದು. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುವಷ್ಟರ ಮಟ್ಟಿಗೆ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ವಿದೇಶದಲ್ಲಿ ಭಾರತವನ್ನು ಅವಮಾನಿಸಿರುವ ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಆರು ದಶಕಗಳ ಕಾಲ ಸರ್ವಾಧಿಕಾರಿ ಕಾಂಗ್ರೆಸ್ ಕೈಗೆ ಸಿಲುಕಿದ್ದ ಭಾರತ ಬಡ ದೇಶವಾಗಿಯೇ ಉಳಿದುಕೊಂಡಿತ್ತು. ಇಂದು ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಇಟ್ಟಿದೆ. ಭಾರತ ಮುಂದೆಯೂ ಪರಕೀಯರ ಅಧೀನದಲ್ಲಿ ಇರಬೇಕು ಎನ್ನುವ ಧೋರಣೆ ರಾಹುಲ್ ಗಾಂಧಿ ಅವರ ರಕ್ತದಲ್ಲಿದ್ದ ಹಾಗಿದೆ ಎಂದು ಬಿಜೆಪಿ ಟೀಕಿಸಿದೆ.

ವಿದೇಶಿ ನೆಲದಲ್ಲಿ ದೇಶದ್ರೋಹಿ ಹೇಳಿಕೆ ಕೊಟ್ಟಿರುವ ರಾಹುಲ್ ಗಾಂಧಿ ವಿರುದ್ಧ ಶಿಸ್ತು ಕ್ರಮಕೈಗೊಂಡು ರಾಜೀನಾಮೆ ಪಡೆಯುವ ಸಾಮರ್ಥ್ಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗಿದೆಯೇ? ಅಥವಾ ಸೋನಿಯಾ ಗಾಂಧಿ ಆ ಸ್ವಾತಂತ್ರ್ಯವನ್ನೇ ಕೊಟ್ಟಿಲ್ಲವೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದು. ಅಧಿಕಾರ ಕಳೆದುಕೊಂಡಿರುವ @INCIndia ನಾಯಕರು ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುವಷ್ಟರ ಮಟ್ಟಿಗೆ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ವಿದೇಶದಲ್ಲಿ ಭಾರತವನ್ನು ಅವಮಾನಿಸಿರುವ @RahulGandhi ಮಾನಸಿಕ ಅಸ್ವಸ್ಥರೇ?#VideshiKaiGombe
— BJP Karnataka (@BJP4Karnataka) March 9, 2023
1/5 pic.twitter.com/QklHRIjfPz
ಭಾರತ ಕೋವಿಡ್‌ನ ಕಠಿಣ ಪರಿಸ್ಥಿತಿ ಎದುರಿಸಿಯೂ ಆರ್ಥಿಕವಾಗಿ ಸದೃಢಗೊಂಡು ವಿಶ್ವಕ್ಕೇ ಮಾದರಿಯಾಗಿದೆ. ಆತ್ಮನಿರ್ಭರದ ಮೂಲಕ ಭಾರತ ಸ್ವಾವಲಂಬಿಯಾಗುತ್ತಿದೆ. ಇಂತಹ ಸಮಯದಲ್ಲಿ ಭಾರತದ ಮೇಲೆ ಯುರೋಪ್, ಅಮೆರಿಕ ಯುದ್ಧ ಸಾರಬೇಕೆನ್ನುವ ರೀತಿಯಲ್ಲಿ ರಾಹುಲ್ ಗಾಂಧಿ ಪ್ರಚೋದಿಸುತ್ತಾರೆ. ಇದು ದೇಶದ್ರೋಹಕ್ಕಿಂತಲೂ ಘೋರ ಅಪರಾಧ ಎಂದು ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಕಿಡಿಕಾರಿದೆ.

ಭಾರತದಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿರುವ ಕಾಂಗ್ರೆಸ್ ಹಿಂದೆಂದಿಗಿಂತಲೂ ದೇಶಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿಯಾಗಿ ಬದಲಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ವಿದೇಶದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಮಾಧ್ಯಮ ಮತ್ತು ನ್ಯಾಯಾಂಗದ ಮೇಲೆ ಹಿಡಿತ ಹಾಗೂ ನಿಯಂತ್ರಣ ಸಾಧಿಸಿರುವುದು, ಬೇಹುಗಾರಿಕೆ ಮತ್ತು ಬೆದರಿಕೆ, ಅಲ್ಪ ಸಂಖ್ಯಾತರು, ದಲಿತರು ಹಾಗೂ ಬುಡಕಟ್ಟು ಸಮುದಾಯಗಳ ಮೇಲೆ ದಾಳಿಗಳು ಹಾಗೂ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮೂಲಕ ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿರುವುದಾಗಿ ಪ್ರಸ್ತಾಪಿಸಿದ್ದರು.











Click it and Unblock the Notifications