BJP Candidates 3rd List: ಬಿಜೆಪಿಯಿಂದ 3ನೇ ಪಟ್ಟಿ ಬಿಡುಗಡೆ, 10 ಮಂದಿಗೆ ಟಿಕೆಟ್, ಯಾರವರು? ತಿಳಿಯಿರಿ
ಬೆಂಗಳೂರು, ಏಪ್ರಿಲ್ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಬಹುನಿರೀಕ್ಷೆಯ ಬಿಜೆಪಿಯಿಂದ ಮೂರನೇ ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಪ್ರಮುಖ ಕ್ಷೇತ್ರಗಳಿಗೆ ಘಟಾನುಘಟಿಗಳಿಗೆ ಟಿಕೆಟ್ ಘೋಷಣೆ ಆಗಿದೆ.
ಇದುವರೆಗೆ ಬಿಜೆಪಿ ಎರಡು ಪಟ್ಟಿ ಬಿಡುಗಡೆ ಆಗಿತ್ತು. ಇದೀಗ ಸೋಮವಾರ ಮೂರನೇ ಪಟ್ಟಿಯಲ್ಲಿ ಒಟ್ಟು 10 ಮಂದಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಂಗಳೂರಿನ ಗೋವಿಂದರಾಜನಗರ ಉಮೇಶ್ ಶೆಟ್ಟಿಗೆ ಬಿಜೆಪಿ ಟಿಕೆಟ್ ನೀಡಿದೆ. ಅರವಿಂದ ಲಿಂಬಾವಳಿ ಪತ್ನಿಗೂ ಟಿಕೆಟ್ ಲಭಿಸಿದೆ.

ಟಿಕೆಟ್ ಸಿಕ್ಕ 10 ಅಭ್ಯರ್ಥಿಗಳ ಪಟ್ಟಿ-ಕ್ಷೇತ್ರ
| ಸಂಖ್ಯೆ | ಕ್ಷೇತ್ರ | ಅಭ್ಯರ್ಥಿ |
| 1 | ನಾಗಠಾಣ | ಸಂಜಯ ಐಹೊಳೆ |
| 2 | ಸೇಡಂ | ರಾಜಕುಮಾರ್ ಪಾಟೀಲ್ |
| 3 | ಕೊಪ್ಪಳ | ಮಂಜುಳಾ ಅಮರೇಶ್ |
| 4 | ರೋಣ | ಕಳಕಪ್ಪ ಬಂಡಿ |
| 5 | ಗೋವಿಂದರಾಜನಗರ | ಉಮೇಶ್ ಶೆಟ್ಟಿ |
| 6 | ಹಗರಿಬೊಮ್ಮನಹಳ್ಳಿ | ಆರ್.ರಾಮಣ್ಣ |
| 7 | ಹುಬ್ಬಳ್ಳಿ ಧಾರವಾಡ ಕೇಂದ್ರ | ಮಹೇಶ್ ಟೆಂಗಿನಕಾಯಿ |
| 8 | ಮಹಾದೇವಪುರ | ಮಂಜುಳಾ ಅರವಿಂದ ಲಿಂಬಾವಳಿ |
| 9 | ಕೃಷ್ಣರಾಜ | ಶ್ರಿವಸ್ತ |
ಕೊನೆಗೂ ಬೆಂಗಳೂರಿನ 3 ಕ್ಷೇತ್ರ ಫೈನಲ್
ವರುಣಾ ಕ್ಷೇತ್ರವನ್ನು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದ್ದರಿಂದ ಆ ಕ್ಷೇತ್ರವು ಸೇರಿದಂತೆ ಬೆಂಗಳೂರಿನ ಮೂರು ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿದಿತ್ತು. ಆ ಕ್ಷೇತ್ರಗಳಿಗೆ ಬಿಜೆಪಿ ಯಾರಿಗೆ ನೀಡುತ್ತದೆ ಎಂಬ ಕುತೂಹಲ ಇತ್ತು. ಇದೀಗ ಅದಕ್ಕೆಲ್ಲ ತೆರೆ ಬಿದ್ದಿದೆ. ಗೋವಿಂದರಾಜನಗರದ ಟಿಕೆಟ್ ಅನ್ನು ಉಮೇಶ್ ಶೆಟ್ಟಿ ಅವರಿಗೆ ನೀಡಲಾಗಿದೆ.
ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪ್ರತಿನಿಧಿಸುತ್ತಿದ್ದ ಮಹಾದೇವಪುರ ಕ್ಷೇತ್ರದ ಟಿಕೆಟ್ ಅನ್ನು ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಘೋಷಿಸಲಾಗಿದೆ. ಇದರಿಂದ ಮಾಜಿ ಸಚಿವರಿಗೆ ಈ ಸಲ ಟಿಕೆಟ್ ಕೈ ತಪ್ಪಿದಂತಾಗಿದೆ.
ಇದರೊಂದಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಈ ಹಿಂದಿನ ಅಭ್ಯರ್ಥಿ ಕಟ್ಟಸುಬ್ರಹ್ಮಣ್ಯ ಬದಲಾಗಿ ಕಟ್ಟ ಜಗದೀಶ್ ಅವರಿಗೆ ನೀಡುವ ಮೂಲಕ ಗೊಂದಲಗಳಿಗೆ ಬಿಜೆಪಿ ತೆರೆ ಎಳೆದಿದೆ.
ಶೆಟ್ಟರ್‌ಗೆ ಸಿಗದ ಟಿಕೆಟ್ ಟೆಂಗಿನಕಾಯಿಗೆ
ಅಲ್ಲದೇ ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಪ್ರತಿನಿಧಿಸುತ್ತಿದ್ದ ಬಿಜೆಪಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈ ತಪ್ಪಿತು. ಇದರಿಂದ ಅವರಿಗಾದ ಅಸಮಧಾನ, ಮನವೊಲಿಕೆ ಯತ್ನ ವಿಫಲ ಇದೆಲ್ಲವು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

ನಂತರ ಬಿಜೆಪಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್ ಒಂದು ದಿನದ ನಂತರ ಕಾಂಗ್ರೆಸ್ ಪಕ್ಷವನ್ನು ಸೋಮವಾರ ಸೇರಿದರು. ಅಲ್ಲದೇ ಬಿಜೆಪಿಯಲ್ಲಿ ತಮಗೆ ಅಗೌರವ ಆಗಿದೆ ಎಂದು ಹೇಳಿ ಹಲವು ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು.
ಇದೀಗ ಬಿಜೆಪಿ ಮೂರನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಕಾಂಗ್ರೆಸ್‌ನಿಂದ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಜಗದೀಶ್ ಶೆಟ್ಟರ್ ವಿರುದ್ಧ ತೊಡೆ ತಟ್ಟಲಿದ್ದಾರೆ. ಜಗದೀಶ್ ಶೆಟ್ಟರ್ ಸೋಮವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಂದ ಬಿ.ಫಾರ್ಮ್ ಪಡೆದರು.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications