ಯಡಿಯೂರು ಸಿದ್ಧಲಿಂಗೇಶ್ವರನ ಮರೆತರೇ ಬಿಎಸ್ವೈ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 8: ಯಡಿಯೂರು ಸಿದ್ಧಲಿಂಗೇಶ್ವರ ಎಂದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆನಪಾಗುತ್ತಾರೆ. ಅವರ ಮನೆ ದೇವರಾದ ಪವಾಡ ಪುರುಷ ಸಿದ್ಧಲಿಂಗೇಶ್ವರರ ಜನ್ಮ ಸ್ಥಳ ವಿರುವ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಮಾತ್ರ ಅಭಿವೃದ್ದಿಯಾಗಿಲ್ಲ.

ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿತ್ತು. ಅವತ್ತು ಎರಡು ಕೋಟಿ ರೂ. ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಸೂಚನೆ ನೀಡಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಚಾಮರಾಜನಗರದಿಂದ ಕೇವಲ 5 ಕಿ.ಲೋ ಮೀಟರ್ ದೂರದಲ್ಲಿ ಹರದನಹಳ್ಳಿದ್ದು ಇದೇ 16ನೇ ಗುರುಗಳಾದ ಸಿದ್ದಲಿಂಗೇಶ್ವರರ ಜನ್ಮ ಸ್ಥಳವಾಗಿದೆ.

BJP President BS Yeddyurappa fears curse God Siddalingeshwara

ಚನ್ನಬಸವಯ್ಯ ಅವರ ಶಿಷ್ಯರಾದ ಇವರು ಹೆಸರಿನಲ್ಲಿ ತುಮಕೂರಿನ ಯಡಿಯೂರಿನಲ್ಲಿ ದೇಗುಲ ಇದೆ. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿರುವ ಮೂಲ ದೇಗುಲ ಹಳೆಯ ಮನೆಯಂತಿದ್ದ ಸಿದ್ಧಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಯಡಿಯೂರಪ್ಪ ಮುಂದಾಗಿದ್ದರು. ಎರಡು ಕೋಟಿ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿಯನ್ನು ಕರ್ನಾಟಕ ಭೂಸೇನಾ ನಿಗಮಕ್ಕೆ ವಹಿಸಿಕೊಡಲಾಗಿತ್ತು.

ದೇವಸ್ಥಾನವನ್ನು ಕಲ್ಲಿನಿಂದಲೇ ನಿರ್ಮಿಸಿದ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಕಾಮಗಾರಿಯನ್ನು ಒಂದು ಹಂತಕ್ಕೆ ತಂದು, ಅರ್ಧಕ್ಕೆ ನಿಲ್ಲಿಸಿ, ಸರ್ಕಾರದಿಂದ ಬಂದ ಹಣ ಖಾಲಿಯಾಗಿದೆ ಎಂದು ಷರಾ ಬರೆದಿದ್ದಾರೆ.

BJP President BS Yeddyurappa fears curse God Siddalingeshwara

ಉಪಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿದ್ದ ಯಡಿಯೂರಪ್ಪ ಅವರು ಬಳಿಕ ಮುಖ್ಯಮಂತ್ರಿಯಾದರು ಆ ಸಂದರ್ಭ ಈ ಕ್ಷೇತ್ರದ ಬಗ್ಗೆ ಗಮನಹರಿಸಲೇ ಇಲ್ಲ. ಬಹುಶಃ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಇದನ್ನು ಪೂರ್ಣಗೊಳಿಸಬಹುದಿತ್ತು. ಆದರೆ ಒತ್ತಡದಲ್ಲಿ ಮರೆತು ಬಿಟ್ಟರೇನೋ?

ದೇವಾಲಯದ ಕೆಲಸ ಪೂರ್ಣಗೊಳ್ಳಲೇ ಇಲ್ಲ. ಕರ್ನಾಟಕ ಭೂಸೇನಾ ನಿಗಮ ಇರುವ ಹಣದಲ್ಲಿ ಕೆಲಸ ಮಾಡಿ ಕೈತೊಳೆದುಕೊಂಡಿದೆ. ಪರಿಣಾಮ ಇಂದು ಸಿದ್ದಲಿಂಗೇಶ್ವರ ಜನ್ಮಸ್ಥಳದ ಕಟ್ಟಡ ಹೇಗಿದೆ ಎಂದರೆ ಮಳೆ ಬಂದರೆ ಸೋರುವಂತಾಗಿದೆ.

God Siddalingeshwara

ಇದೀಗ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಆಸಕ್ತಿ ವಹಿಸಿದರೆ ಅಭಿವೃದ್ಧಿ ಮಾಡಬಹುದು. ಪ್ರಸ್ತುತ ಇರುವ ಸರ್ಕಾರವೂ ಗಮನಹರಿಸುವ ಲಕ್ಷಣ ಕಂಡು ಬರುತ್ತಿಲ್ಲ. ಸರ್ಕಾರ ಯಾವುದೇ ಇರಲಿ, ಪವಾಡ ಪುರುಷ ಯಡಿಯೂರು ಸಿದ್ದಲಿಂಗೇಶ್ವರ ಜನ್ಮ ಸ್ಥಳದ ಅಭಿವೃದ್ದಿಗೆ ರಾಜಕಾರಣ ಬಿಟ್ಟು ಕಾರ್ಯನಿರ್ವಹಿಸಲಿ ಎನ್ನುವುದು ಜನರ ಆಶಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP President BS Yeddyurappa fears curse by his 'Mane devaru' God Siddalingeshwara of Yediyur.Birth place of Seer Siddalingeshwara is at Chamarajanagar district Haradanahalli. BS Yeddyurappa had issued Rs 2 Cr grant when he was DCM of Karnataka but, work is still under progress.
Please Wait while comments are loading...