ಸಿದ್ದರಾಮಯ್ಯ Vs ಶೋಭಾ ಕರಂದ್ಲಾಜೆ: ಟ್ವಿಟ್ಟರ್ ನಲ್ಲಿ 'ಕೋ-ಜಾ' ಸಮರ

Recommended Video

      ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಶೋಭಾ ಕರಂದ್ಲಾಜೆ. | Oneindia Kannada

      ಬೆಂಗಳೂರು, ಜೂನ್ 15: ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರದಲ್ಲಿ, ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿಯ ವೇಳೆ, ಉಡುಪಿ-ಚಿಕ್ಕಮಗಳೂರು ಸಂಸದೆ, ಲೋಕಸಭೆಯ ಸಚೇತಕಿಯಾಗಿ ನೇಮಕವಾಗಿರುವ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

      ಟೀಕಿಸುವ ಭರದಲ್ಲಿ ಶೋಭಾ ಬಳಸಿದ ಪದ, ಸಿದ್ದರಾಮಯ್ಯ ಅವರನ್ನು ಕೆರಳಿಸಿದ್ದು, ಅದಕ್ಕೆ ಅವರು ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಟ್ವೀಟಿಗೆ ಶೋಭಾ ಮತ್ತೆ ತಿರುಗೇಟು ನೀಡಿದ್ದಾರೆ.

      'ಕೋ-ಜಾ' ಸರಕಾರದ 3,667 ಎಕರೆ ಕಬ್ಬಿಣದ ಅದಿರು ಹೊಂದಿರುವ ಶ್ರೀಮಂತ ಜಮೀನನ್ನು ಬಿಡಿಗಾಸಿಗೆ ಮಾರಾಟ ಮಾಡುವ ನಿರ್ಧಾರವನ್ನು ಪ್ರತಿಭಟಿಸಿ, ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣೆಯಲ್ಲಿ ಭಾಗವಹಿಸಿದ್ದೇನೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು.

      BJP overnight protest against government decision to handing over the property to Jindal: Shobha Vs Siddaramaiah twitter war

      ಸಿದ್ದರಾಮಯ್ಯ ಮತ್ತು ಮಾನ್ಯ ಕುಮಾರಸ್ವಾಮಿಯವರೇ ನಿಮ್ಮ ಈ ದಿವ್ಯಮೌನದ ಹಿಂದಿನ ಕಾರಣವೇನು ಎಂದು ರಾಜ್ಯದ ಜನತೆ ತಿಳಿಯಲು ಬಯಸುತ್ತದೆ ಎಂದು ಶೋಭಾ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

      ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಶೋಭಾ ಅವರೇ ನೀವು ಬಳಸುವ ಪದ, ನಿಮ್ಮ ಕೌಶಲ್ಯ ರೂಪಿಸುವ ಶಕ್ತಿಯನ್ನು ತೋರಿಸುತ್ತದೆ. ಅದೇನೇ ಇರಲಿ, ಇಂತಹ ಅಸಂವಿಧಾನಿಕ ಪದ ಬಳಕೆಯನ್ನು ಕಮ್ಮಿ ಮಾಡಿ. ಇದು ಒಂದು ವರ್ಗದ ಜನರಿಗೆ ನೋವುಂಟು ಮಾಡಿದೆ' ಎಂದು ಶೋಭಾ ಟ್ವೀಟಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.

      Co-Ja (Congress, Janatadal) ಸರಕಾರದ ವಿರುದ್ದ ಯಡಿಯೂರಪ್ಪ ಮತ್ತು ಹಿರಿಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ನಾವು ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಮತ್ತು ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು ಎನ್ನುವುದು ನಮ್ಮ ಒತ್ತಾಯ ಎಂದು ಶೋಭಾ ಕರಂದ್ಲಾಜೆ ಮತ್ತೆ ಸಿದ್ದರಾಮಯ್ಯ ಟ್ವೀಟಿಗೆ ಪ್ರತ್ಯುತ್ತರ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+