ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಬಿಗ್‌ ಶಾಕ್‌

ಗುತ್ತಿಗೆದಾರನಿಗೆ ಬೆದರಿಕೆ, ಜಾತಿ ನಿಂದನೆ ಹಾಗೂ ಮಹಿಳೆ ಮೇಲಿನ ಅತ್ಯಾಚಾರ ಆರೋಪಗಳಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಅವರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾಮೀನು ಪಡೆದು ರಿಲೀಫ್‌ ಆಗಿದ್ದ ಮುನಿರತ್ನ ಅವರಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ.

ಈ ಹಿಂದೆ ಮುನಿರತ್ನ ಅವರ ವಿರುದ್ಧ ಜಾತಿ ನಿಂದನೆಯ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಪೊಲೀಸರು ಮುನಿರತ್ನ ಅವರ ಬೆನ್ನತ್ತಿ ಬಂಧಿಸಿದ್ದರು. ಗುತ್ತಿಗೆದಾರರೊಬ್ಬರು ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಆಡಿಯೋ ರಿಲೀಸ್‌ ಮಾಡಿದ್ದರು. ಇದನ್ನು ಸ್ವೀಕರಿಸಿದ್ದ ಪೊಲೀಸರು ಇದರ ಅಸಲಿಯತ್ತು ತಿಳಿಯಲು ಎಫ್‌ಎಸ್‌ಎಲ್‌ಗೆ ಕಳಿಸಿದ್ದರು. ಈಗ ವರದಿ ಹೊರಬಂದಿದ್ದು, ಆ ಆಡಿಯೋದಲ್ಲಿರುವುದು ಮುನಿರತ್ನ ಅವರದ್ದೇ ಧ್ವನಿ ಎಂದು ದೃಢಪಟ್ಟಿದೆ ಎಂದು ವರದಿಯಾಗಿದೆ.

BJP MLA Munirathna Voice In Caste Abuse Audio Confirmed In FSL Report

ದೂರಿನ ಮೇರೆಗೆ ಮುನಿರತ್ನ ಅವರದ್ದು ಎನ್ನಲಾದ ಆಡಿಯೋವನ್ನು ಅಧಿಕಾರಿಗಳು ಪಡೆದುಕೊಂಡಿದ್ದರು. ಇಬ್ಬರ ಧ್ವನಿ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದರು. ಆ ಆಡಿಯೋದಲ್ಲಿ ಮುನಿರತ್ನ ಅವರು ಗುತ್ತಿಗೆದಾರ ಚಲುವರಾಜು ಅವರೊಂದಿಗೆ ಮಾತನಾಡಿರುವುದು ನಿಜ ಹಾಗೂ ಜಾತಿ ನಿಂದನೆ ಕೂಡ ಮಾಡಿರುವುದು ದೃಢವಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಬೆನ್ನಲ್ಲೇ ಮುನಿರತ್ನ ಅವರಿಗೆ ಆತಂಕ ಶುರುವಾಗಿದೆ. ಈ ಆಡಿಯೋ ಮುನಿರತ್ನ ಮೇಲಿನ ಕೇಸ್‌ಗೆ ಪ್ರಬಲವಾದ ಸಾಕ್ಷಿ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಾಮೀನು ಪಡೆದು ರಿಲೀಫ್‌ ಆಗಿರುವ ಶಾಸಕ ಮುನಿರತ್ನ ಅವರಿಗೆ ಈ ಆಡಿಯೋ ಮತ್ತೆ ದೊಡ್ಡ ಸಂಕಷ್ಟ ತಂದೊಡ್ಡುವ ಸಾಧ್ಯತೆಯೂ ಇದೆ.

BJP MLA Munirathna Voice In Caste Abuse Audio Confirmed In FSL Report

ಏನಿದು ಆಡಿಯೋ?: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಜಾತಿ ನಿಂದನೆ ವಿಚಾರವಾಗಿ ಒಕ್ಕಲಿಗರು ಹಾಗೂ ದಲಿತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಕೂಡ ಮಾಡಿದ್ದರು. ಗುತ್ತಿಗೆದಾರ ಚೆಲುವರಾಜು ತಮಗೆ ಮುನಿರತ್ನ ಜೀವಬೆದರಿಕೆ ಹಾಕಿದ್ದರು ಎಂದು ಆರೋಪಿಸಿ, ಇದಕ್ಕೆ ಸಂಬಂಧಿಸಿದಂತೆ ಆಡಿಯೋ ರಿಲೀಸ್‌ ಮಾಡಿದ್ದರು. ಇದರಲ್ಲಿ ಮುನಿರತ್ನ ಅವರೇ ಅವಾಚ್ಯವಾಗಿ ನಿಂದಿಸಿದ್ದಾರೆ. ಒಕ್ಕಲಿಗರು ಹಾಗೂ ದಲಿತರ ಬಗ್ಗೆ ಕೆಟ್ಟ ಪದಗಳಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು.

ಬಳಿಕ ಆ ಆಡಿಯೋವನ್ನು ಎಸ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಒಂದು ವೇಳೆ ಈ ಸಂಭಾಷಣೆ ಮುನಿರತ್ನ ಅವರದ್ದೇ ಎಂದು ಸಾಬೀತಾದರೆ, ಈ ಕೇಸ್‌ ಮತ್ತೊಂದು ತಿರುವು ಪಡೆದುಕೊಳ್ಳಲಿದ್ದು, ಅಲ್ಲ ಎಂದಾದರೆ ರಿಲೀಫ್‌ ಸಿಗಲಿದೆ ಎಂದು ಹೇಳಲಾಗಿತ್ತು. ಶಾಸಕ ಮುನಿರತ್ನ ವಿರುದ್ಧದ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್‌ಗೆ ಸಂಬಂಧ ಆಡಿಯೋವನ್ನು ಈಗಾಗಲೇ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದ್ದು ಮುನಿರತ್ನ ಅವರ ವಾಯ್ಸ್ ಮ್ಯಾಚ್ ಆಗದಿದ್ರೆ ಅವರ ಮೇಲೆ ಈ ಕೇಸ್‌​ ಮುಂದುವರಿಯುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಕೂಡ ಹೇಳಿದ್ದರು. ಈಗ ಆ ಧ್ವನಿ ಮುನಿರತ್ನ ಅವರದ್ದೇ ಎಂದು ಹೇಳಲಾಗುತ್ತಿದ್ದು, ಮತ್ತೆ ಈ ಕೇಸ್‌ ರೀ ಓಪನ್‌ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+