‘ನಾನ್ ವೆಜ್’ ತಿಂದು ನಾಗಬನಕ್ಕೆ ಹೋದ ಸಿಟಿ ರವಿ- ಸಾಮಾಜಿಕ ಮಾಧ್ಯಮಗಳಲ್ಲಿ ಭಯಂಕರ ಟ್ರೋಲ್
ಬಿಜೆಪಿ ಶಾಸಕ ಸಿಟಿ ರವಿ ಮಾಂಸಾಹಾರ ಸೇವಿಸಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ರವಿ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಯಂಕರವಾಗಿ ಟ್ರೋಲ್ ಮಾಡಲಾಗುತ್ತಿದೆ. ವರದಿಯಲ್ಲಿ ಟ್ರೋಲ್‌ಗಳಿವೆ ಇವೆ ಓದಿ.
ಬೆಂಗಳೂರು, ಫೆಬ್ರವರಿ 23: ಬಿಜೆಪಿಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿಟಿ ರವಿ ಅವರು ಮಾಂಸಾಹಾರ ಸೇವಿಸಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವಿ ಅವರನ್ನು ಭಯಂಕರವಾಗಿ ಟ್ರೋಲ್ ಮಾಡಲಾಗುತ್ತಿದೆ.
ಸಿ ಟಿ ರವಿ ಅವರು ಫೆ.19ರಂದು ಶಿರಾಲಿಯಲ್ಲಿರುವ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರ ಮನೆಯಲ್ಲಿ ಮಾಂಸಾಹಾರ ಸೇವಿಸಿದ್ದಾರೆ. ಆ ನಂತರ ಪಟ್ಟಣದ ರಾಜಾಂಗಣ ನಾಗಬನ ಹಾಗೂ ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆಗ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿದ್ದರು. ಇದೀಗ ಸಿಟಿ ರವಿ ಕೂಡ ಇಂತಹದ್ದೇ ಆರೋಪಕ್ಕೆ ತುತ್ತಾಗಿದ್ದಾರೆ.
ಜೈನ ಸಮುದಾಯದವರು ಪೂಜಿಸುವ ರಾಜಾಂಗಣ ನಾಗಬನ ಮತ್ತು ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ಸಿಟಿ ರವಿ ಅವರನ್ನು ಸ್ಥಳೀಯ ಭಕ್ತರು ಟ್ರೋಲ್ ಮಾಡುತ್ತಿದ್ದಾರೆ. ಇದೇ ವೇಳೆ ಮಂಡ್ಯದಲ್ಲಿ ರವಿ ಸ್ಪಷ್ಟನೆ ನೀಡಿದ್ದು, ತಾವು ನಾಗಬನದ ಆವರಣಕ್ಕೆ ಭೇಟಿ ನೀಡಿಲ್ಲ, ಹೊರಗಿನಿಂದಲೇ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

'ನಾನು ಮಾಂಸಾಹಾರ ಸೇವಿಸುವ ಸಮುದಾಯದಲ್ಲಿ ಹುಟ್ಟಿದ್ದೇನೆ. ನಾನು ಮಾಂಸಾಹಾರ ತಿನ್ನುತ್ತೇನೆ. ಆದರೆ ನನಗೆ ಸಂಪ್ರದಾಯ ತಿಳಿದಿದೆ ಮತ್ತು ನಾನು ಅದನ್ನು ಎಂದಿಗೂ ಗೌರವಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಈ ವಿಚಾರದ ಕುರಿತು ವಿಡಿಯೊ ಟ್ವೀಟ್ ಮಾಡಿರುವ ದೀಪು ಗೌಡ್ರು ಹೆಸರಿನ ಟ್ವೀಟಿಗರು, 'ಸಿ ಟಿ ರವಿ ಹೇಳ್ತಿರೋದಕ್ಕೂ ವಿಡಿಯೋದಲ್ಲಿರೋದಕ್ಕೂ ಸ್ವಲ್ಪನಾದ್ರು ಸರಿ ಹೊಂದುತ್ತಾ ನೋಡಿ. ಗೇಟ್ ಬೀಗ ಹಾಕಿತ್ತು ಅಂತಾರೆ. ಹಾಗಾದ್ರೆ ಒಳಗೆ ಹೇಗೆ ಹೋದ್ರು?' ಎಂದು ಪ್ರಶ್ನಿಸಿದ್ದಾರೆ.
ಸಿ.ಟಿ.ರವಿ ಹೇಳ್ತಿರೋದಕ್ಕೂ ವಿಡಿಯೋದಲ್ಲಿರೋದಕ್ಕೂ ಸ್ವಲ್ಪನಾದ್ರು ಸರಿ ಹೊಂದುತ್ತಾ ನೋಡಿ.
— DEEPU GOWDRU (@DEEPUVAJRAMUNI) February 23, 2023
ಗೇಟ್ ಬೀಗ ಹಾಕಿತ್ತು ಅಂತಾನೆ..
ಹಾಗಾದ್ರೆ ಒಳಗೆ ಹೇಗೆ ಹೋದ??#CTRavi #Temple #HinduRashtra pic.twitter.com/HoO7mXnAlx
'ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಸಿಟಿ ರವಿ ಅವರು ಯಾವಾಗಲೂ ಹೇಳಿಕೆಗಳನ್ನು ನೀಡುತ್ತಿದ್ದರು. ಆಹಾರ ಪದ್ಧತಿಯ ಮೇಲೆ ಸಿಟಿ ರವಿ ತಮ್ಮನ್ನು ಸಸ್ಯಾಹಾರಿಯಾಗಿ ಪರಿವರ್ತಿಸಿಕೊಂಡಿದ್ದಾರೆ ಎಂಬ ಊಹೆಯಲ್ಲಿದ್ದೆ ನಾನಿದ್ದೆ. ಅವರು ಹಲಾಲ್ ಕಟ್ ಬಗ್ಗೆ ಧ್ವನಿ ಎತ್ತಿದ್ದರು. ಈಗ ಅವರು ತಿಂದಿದ್ದು ಹಲಾಲ್ ಅಥವಾ ಜಟಕಾ ಎಂಬುದರ ಬಗ್ಗೆ ತಿಳಿಯುವ ಕುತೂಹಲ. ಉತ್ತರ ಕೊಡಿ ರವಿ' ಎಂದು ಭೂಷನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
When @CTRavi_BJP was making statements on Shri @siddaramaiah on eating habits I was under the assumption CT Ravi has converted himself into VEGETARIAN and he was vocal about Halal meet. Now curious to know what kind of meet he ate Halal or Jataka. #AnswerMadi Ravi 😂 pic.twitter.com/psFPWayuSE
— Bhushan (@bhushannag) February 22, 2023
'ಅವತ್ತು ಸಿದ್ದು ಮಾಂಸ ತಿಂದಿರಲಿಲ್ಲ ಅಂತ ವೀಣಾ ಅವರೇ ಹೇಳಿದ್ದರು. ಆದ್ರೂ ಸಂಘಿಗಳು ಸಿದ್ದು ತಲೆ ದಂಡ ಕೇಳ್ತಾ ಇದ್ರು. ಇವತ್ತು ಸಿಟಿ ರವಿ ಮಾಂಸ ತಿಂದು ಹೋಗಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೆ. ಆದ್ರೂ ಸಂಘಿಗಳು ಬಾಯಿಗೆ ಕಡುಬು ಹಾಕಂಡವ್ರೇ. ಥೂ ಇದೂ ಒಂದು ಬಾಳ?' ಎಂದು ಟ್ವೀಟಿಗರೊಬ್ಬರು ಬರೆದುಕೊಂಡಿದ್ದಾರೆ.
ಅವತ್ತು ಸಿದ್ದು ಮಾಂಸ ತಿಂದಿರಲಿಲ್ಲ ಅಂತ ವೀಣಾ ಅವರೇ ಹೇಳಿದ್ದರು ಆದ್ರೂ ಸಂಘಿ ಗಳು ಸಿದ್ದು ತಲೆ ದಂಡ ಕೇಳ್ತಾ ಇದ್ರು.
— 🚩Sri Sri Sri Srimad Jagatmindri MahaswamigaLu 🛕 (@jagatmindri) February 22, 2023
ಇವತ್ತು ಶೀಟಿ ಮಾಂಸ ತಿಂದು ಹೋಗಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೆ ಆದ್ರೂ ಸಂಗಿ ಗಳು ಬಾಯಿಗೆ ಕಡುಬು ಹಾಕಂಡ ವ್ರೇ..
ಥೂ ಇದೂ ಒಂದು ಬಾಳ?
ಈ ಕುರಿತು ಟ್ವೀಟ್ ಮಾಡಿರುವ ಸಹನಾ ಎಂಬುವವರು, 'ಪಾಪವನ್ನೆಲ್ಲಾ ತೊಳೆದುಕೊಳ್ಳುವ ಪಕ್ಷದಲ್ಲಿ ಸಿ ಟಿ ರವಿ ಇದ್ದಾರೆ. ಕೊಲೆ ಮಾಡಿದ ರೌಡಿಗಳೂ ಪಕ್ಷದಿಂದ ಸಮಾಜಸೇವಕರಾಗಿರುವುದು ನಿಮಗೆ ಗೊತ್ತಿಲ್ಲವೇ? ಸಿದ್ದು ಅವರನ್ನೂ ಕೂಡ ಬಿಜೆಪಿಗೆ ಸೇರಲು ಹೇಳಿ, ಅವನ ಕಾರ್ಯಗಳು ಸಹ ಪವಿತ್ರವಾಗುತ್ತವೆ' ಎಂದು ವ್ಯಂಗ್ಯವಾಡಿದ್ದಾರೆ.
CT Ravi is in a party where all sins are washed away. Don't you know even rowdies who have murdered have become "Social workers" because of the party. Ask Siddhu also to join,even his actions will become sanctified.🤷 https://t.co/jKjjUIfGx8
— Sahana (@Sahanasatianaat) February 22, 2023












Click it and Unblock the Notifications