ವಿಜಯೇಂದ್ರಗೆ ಹೊರಗಡೆ ಯಡಿಯೂರಪ್ಪ ಪೂಜ್ಯ ತಂದೆ, ಮನೇಲಿ ಮುದಿಯಾ: ಹೀಗಂದಿದ್ಯಾರು?
ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತಮ್ಮ ಪುತ್ರ ವಿಜಯೇಂದ್ರ ಅವರು ಹೊರಗಡೆ ಬಂದಾಗ ಪೂಜ್ಯ ತಂದೆ ಅಂತಾನೆ, ಮನೆಯಲ್ಲಿದ್ದರೆ ಮುದಿಯಾ ಎನ್ನುತ್ತಾನೆ ಎಂದು ಯತ್ನಾಳ್ ಏಕವಚನದಲ್ಲೇ ಮಾತನಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತೇ ಇಲ್ಲ. ಮೊದಲು ಯಡಿಯೂರಪ್ಪ ಪುತ್ರನ ಮೇಲಿರುವ ವ್ಯಾಮೋಹ ಬಿಡಬೇಕು. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ ಜೈಲು ಸೇರಬೇಕಾಯ್ತು. ಇನ್ನು ವಿಜಯೇಂದ್ರ ತನ್ನ ತಂದೆಯನ್ನು ಹೊರಗಡೆ ಪೂಜ್ಯ ತಂದೆ ಎಂದು ಕರೆದರೆ, ಮನೆಯಲ್ಲಿದ್ದರೆ ಮುದಿಯಾ ಎಂದು ಕರೆಯುತ್ತಾನೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಎಷ್ಟು ಜನರಿಗೆ ಮೋಸ ಮಾಡಿಲ್ಲ? ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕರಿಗೆ ಅನ್ಯಾಯ ಮಾಡಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಅನೇಕರ ಜೀವನ ಹಾಳು ಮಾಡಿದ್ದಾರೆ. ಅವರು ಈಗ ಸುಮ್ಮನೆ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಇರಲಿ. ನಮ್ಮ ವಿರುದ್ಧ ಒಂದೆರಡು ಹಂದಿಗಳನ್ನ ಬಿಟ್ಟರೆ ಬೇರೆ ಯಾರೂ ಮಾತನಾಡೋಲ್ಲ. ಆ ಹಂದಿಗಳಿಗೆ ನಾವೂ ತಲೆಕೆಡಿಸಿಕೊಳ್ಳಲ್ಲ. ಇನ್ನು ವಿಜಯೇಂದ್ರನ ಪರ ಯಾರೋ ಹೊಗಳು ಭಟ್ಟರಷ್ಟೇ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಸಮರ್ಥನಲ್ಲ. ಅವನನ್ನು ನಾವು ಯಾರೂ ಕೂಡ ಒಪ್ಪುವುದಿಲ್ಲ. ವಿಜಯೇಂದ್ರ ರಾಜೀನಾಮೆ ಕೊಡಲೇಬೇಕು. ನಾನು ಎಂದಿಗೂ ರಮೇಶ್ ಜಾರಕಿಹೊಳಿ ಪರವಾಗಿಯೇ ಇದ್ದೇನೆ. ಇನ್ನು ವಿಜಯೇಂದ್ರನಿಂದಲೇ ಪಾಪ ಸುನೀಲ್ ಕುಮಾರ್ ಕೂಡ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದಾರೆ ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪು ಇಲ್ಲ. ನಾವು ಯಾರಿಗೂ ಹೆದರುವುದಿಲ್ಲ, ಉತ್ತರ ಕರ್ನಾಟಕದ ಮಂದಿ ಹಾಗೇನೇ ಎಂದು ಯತ್ನಾಳ್ ಬೆನ್ನುತಟ್ಟಿಕೊಂಡಿದ್ದಾರೆ.

ದರೋಡೆಕೋರರನ್ನು ಗುಂಡಿಕ್ಕಿ ಕೊಲ್ಲಲಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್ ದರೋಡೆ ಪ್ರಕರಣದ ಬಗ್ಗೆ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರ ಬ್ಯಾಂಕ್ ದರೋಡೆಕಾರರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಲಿ ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರ, ಹೂಡಿಕೆದಾರರ, ಸಂಘ, ಸಂಸ್ಥೆಗಳ ಹಣವು ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಇಡುತ್ತಾರೆ. ಈ ಹಣವನ್ನು ದರೋಡೆ ಮಾಡಿದರೆ ಸಾರ್ವಜನಿಕರ ಹಣವನ್ನೇ ದೋಚಿದಂತಾಗುತ್ತದೆ. ದರೋಡೆಕಾರರು, ಅಪಹರಣಕಾರರು, ಕೊಲೆ-ಸುಲಿಗೆ ಮಾಡುವವರ ಮೇಲೆ ಸರ್ಕಾರ ಜೀರೋ ಟಾಲರೆನ್ಸ್ ನಿಯಮ ಅನುಸರಿಸಿ, ಅವರ ಗುರುತು ಪತ್ತೆಹಚ್ಚಿ ಶರಣಾಗದಿದ್ದರೆ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅತಿ ಹೆಚ್ಚು ನಗದು ವಹಿವಾಟು ನಡೆಯುವ ಬ್ಯಾಂಕ್‌ಗಳಿಗೆ ಪೊಲೀಸರು ಸಾರ್ವಜನಿಕರ, ಬ್ಯಾಂಕ್ ಗ್ರಾಹಕರ ಹಾಗೂ ಬ್ಯಾಂಕ್ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಗೆ ಪೊಲೀಸ್ ರಕ್ಷಣೆ ನೀಡಬೇಕು. ಕರೆನ್ಸಿ ಸಾಗಿಸುವ ವಾಹನಗಳಲ್ಲಿ ಕನಿಷ್ಠ ಇಬ್ಬರು ಗಾರ್ಡ್‌ಗಳು ಇರಬೇಕು ಹಾಗೂ ಅತಿ ಹೆಚ್ಚು ನಗದು ಸಾಗಿಸುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಾಹನ ಹೊರಡಬೇಕು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್‌ಗಳು ತಮ್ಮ ಎಟಿಎಂಗಳಲ್ಲಿ ಸುರಕ್ಷತೆ, ಸಿ.ಸಿ.ಕ್ಯಾಮೆರಾ, ಸಶಸ್ತ್ರ ಗಾರ್ಡ್ ಕಡ್ಡಾಯವಾಗಿ ನೇಮಿಸಬೇಕು. ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬ್ಯಾಂಕ್ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ ಎಂದು ಗೊತ್ತಾಗಿದೆ. ಈ ರೀತಿ ವೈಫಲ್ಯಗಳು ಆಗದೆ ಮುಂಜಾಗ್ರತಾ ಕ್ರಮ ವಹಿಸಿದರೆ ಮಾತ್ರ ಈ ರೀತಿ ಕೃತ್ಯಗಳನ್ನು ತಡೆಯಬಹುದು ಎಂದಿದ್ದಾರೆ.












Click it and Unblock the Notifications