Channapatna: ಸಿಪಿ ಯೋಗೇಶ್ವರ ಬಗ್ಗೆ ಕುಮಾರಸ್ವಾಮಿ ಸ್ಪಷ್ಟ ನಿರ್ಧಾರ: ಅರವಿಂದ್ ಬೆಲ್ಲದ್
ಹುಬ್ಬಳ್ಳಿ, ಅಕ್ಟೋಬರ್ 20: ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ರಣ ಕಣ ರಂಗೇರುತ್ತಿದ್ದು, ಟಿಕೆಟ್ ಲಾಭಿ, ಅಸಮಾಧಾನ, ಕುಟುಂಬ ರಾಜಕಾರಣದ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಚನ್ನಪಟ್ಟಣ ಉಪ ಚುನಾವಣೆಗೆ ಮೈತ್ರಿ ಅಭ್ಯರ್ಥಿ ನಿರ್ಧಾರವನ್ನು ಬಿಜೆಪಿಯು ಜೆಡಿಎಸ್ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಬಿಡುವಂತಹ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಭಾನುವಾರ ಮಾತನಾಡಿದ ಶಾಸಕ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಅವರು, ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಕಗ್ಗಂಟು ಆಗಿಲ್ಲ. ಚೆನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ ಗೆ ಟಿಕೆಟ್ ನೀಡಬೇಕು. ಅವರನ್ನೇ ಎನ್‌ಡಿಎ ಅಭ್ಯರ್ಥಿಯಾಗಿಸಿದರೆ ಗೆಲುವು ನಿಶ್ಚಿತ ಎಂದು, ಜಗದೀಶ್ ಶೆಟ್ಟರ್ ಹಾಗೂ ಇತರ ನಾಯಕರಂತೆ ಇವರು ನೈನಿಕನ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಕುಮಾರಸ್ವಾಮಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ
ಈ ನಿಟ್ಟಿನಲ್ಲಿ ಪಕ್ಷದಲ್ಲಿ ಚರ್ಚೆ ಆಗುತ್ತಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕುಮಾರಸ್ವಾಮಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎನ್ನವು ಮೂಲಕ ಎಲ್ಲವನ್ನು ಕುಮಾರಸ್ವಾಮಿ ಅವರ ಮೇಲೆ ಕೈ ಬಿಡಲಾಗಿದೆ.
ಉಪಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಚುನಾವಣೆಯಲ್ಲಿ ಗೆಲ್ಲುವುದು ಮಹತ್ವವಾಗಿದೆ. ಎರಡೂ ಪಕ್ಷಗಳಿಂದ ಚುನಾವಣೆಯಲ್ಲಿಕಾರ್ಯಕರ್ತರು ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಶಿಗ್ಗಾವಿಗೆ ಬೊಮ್ಮಾಯಿ ಪುತ್ರ ಭರತ್ ಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಪಕ್ಷದ ನಡೆ ಸಮರ್ಥಿಸಿಕೊಂಡರು. ಇದು ಕುಟುಂಬ ರಾಜಕಾರಣಕ್ಕೆ ಮನ್ನಣೆ ಎಂದು ಪರಿಗಣಿಸಬಾರದು. ಕ್ಷೇತ್ರದ ಜನರ ಅಭಿಪ್ರಾಯದ ಮೇರೆಗೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಸಮರ್ಥನೆ ಕೊಟ್ಟರು.
ಡಿಸೆಂಬರ್ 9 ರಿಂದ ಬೆಳಗಾವಿ ಅಧಿವೇಶನ
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಂದಿನ ಡಿಸೆಂಬರ್ 9 ರಂದು ಆರಂಭವಾಗಲಿದೆ ಎಂದು ಅರವಿಂದ್ ಬೆಲ್ಲದ್ ಅವರು, ಸದನದಲ್ಲಿ ಸುಮ್ಮನೆ ಮಾತನಾಡಿಕೊಂಡು ಹೋಗುವುದು ಆಗಬಾರದು. ಅಲ್ಲಿ ಚರ್ಚೆಯಾದ ಮಾಡಿದ ವಿಷಯಗಳು ಕಾರ್ಯಗತವಾಗಬೇಕು. ಕಳೆದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಆದ ವಿಷಯಗಳ ಬಗ್ಗೆ ಪಟ್ಟಿ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.
ಕಳೆದ ಭಾರಿ ಸರ್ಕಾರ ನಡೆಸಿದ ಅಧಿವೇಶನದಲ್ಲಿ ಕೊಟ್ಟ ಭರವಸೆ/ಯೋಜನೆಗಲಳ್ಲಿ ಎಷ್ಟು ಕೆಲಸಗಳಾಗಿವೆ ಎಂಬುದನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೇ ಬೇಕಾದರೂ ಹೋರಾಟ ಮಾಡಿ ಪಡೆಯುವ ಸ್ಥಿತಿ ಇದೆ. ಎಫ್‌ಎಮ್‌ಎಸ್‌ಜಿ ಕ್ಲಸ್ಟರ್‌ಗೆ ಈ ಸರ್ಕಾರ ಬಂದ ಮೇಲೆ ಕೊಕ್ಕೆ ಬಿದ್ದಿದೆ ಎಂದು ಅವರು ದೂರಿದರು.
ಕಾಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭೂಮಿ ಬೆಲೆ ದುಪ್ಪಟ್ಟು ಮಾಡಲಾಗಿದೆ. ಕಾರಣಕ್ಕಾಗಿ ಎಫ್‌ಎಮ್‌ಸಿಜಿ ಕಂಪನಿಗಳು ಬಂದಿಲ್ಲ. ಒಂದು ಎಕರೆಗೆ 1 ಕೋಟಿ 25 ಲಕ್ಷ ಭೂಮಿ ಬೆಲೆ ಮಾಡಿದ್ದಾರೆ. ಭೂಮಿ ಬೆಲೆ ಹೆಚ್ಚಳ ಮಾಡಿ ಉತ್ತರ ಕರ್ನಾಟಕಕ್ಕೆ ಕಂಪನಿಗಳು ಬಾರದಂತೆ ಎಳ್ಳು ನೀರು ಉಣಿಸುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಇನ್ಫೋಸಿಸ್ ಕಂಪನಿ ಹುಬ್ಬಳ್ಳಿಯಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ಅವರು ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಇಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದರು.












Click it and Unblock the Notifications