D.K.Shivakumar: ಡಿ.ಕೆ.ಶಿವಕುಮಾರ್ ಜೈಲಿಗೆ ಹೋದ್ಮೇಲೆ ಸಿಎಂ ಆಗ್ತಾರೆ, ಇದೇ ನಿಜವಾಗುತ್ತೆ: ಭವಿಷ್ಯ ನುಡಿದ ರಾಜಕಾರಣಿ
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆಗಳು ಚಾಲ್ತಿಯಲ್ಲಿವೆ. ಇತ್ತೀಚೆಗೂ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ, ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದೆಲ್ಲ ಚರ್ಚೆಯಾಗುತ್ತಲೇ ಇದೆ. ಇದೀಗ ಬಿಜೆಪಿ ನಾಯಕ ಕೂಡ ಡಿಕೆಶಿ ಸಿಎಂ ಕನಸಿನ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಇಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಹಿಂದೆ ಹೇಳಿರುವಂತೆ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋದ ನಂತರ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಮೂಲಕ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಗಮನ ಸೆಳೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಖಂಡಿತವಾಗಿಯೂ ಮುಂದಿನ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರು ಹಲವು ವರ್ಷಗಳ ಹಿಂದೆಯೇ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಭವಿಷ್ಯ ನುಡಿದಿದ್ದರು. ಡಿ.ಕೆ.ಶಿವಕುಮಾರ್ ಅವರು ಮುಂದೆ ಜೈಲಿಗೆ ಹೋಗುತ್ತಾರೆ. ಬಳಿಕ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಶಿವಕುಮಾರ್ ಈಗಾಗಲೇ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಈಗ ಅವರು ಹೇಳಿದಂತೆ ಮುಂದಿನ ಸಿಎಂ ಆಗುತ್ತಾರೆ ಎನ್ನುವ ವಿಶ್ವಾಸ ನನಗೂ ಇದೆ ಎಂದು ಬ್ಯಾಟಿಂಗ್ ಬೀಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳ ಬಗ್ಗೆ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ. ಮೊದಲು ಯತ್ನಾಳ್ ಅವರು ತಮ್ಮದು ನೋಡಿಕೊಳ್ಳಲಿ. ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಯತ್ನಾಳ್ ಕನಕಪುರದಲ್ಲಿ ಕೇಸ್ ಹಾಕಿದ್ದಾರೆ. ಇಷ್ಟಕ್ಕೂ ಯತ್ನಾಳ್‌ಗೂ ಡಿ.ಕೆ.ಶಿವಕುಮಾರ್ ಅವರಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಯತ್ನಾಳ್ ಅವರು ಮೊದಲು ಆ ಕೇಸ್ ಅಟೆಂಡ್ ಮಾಡೋದನ್ನು ನೋಡಲಿ. ಮೊದಲು ನಿನ್ನದೇ ನೂರೆಂಟಿವೆ. ಡಿ.ಕೆ.ಶಿವಕುಮಾರ್ ಅವರನು ಟೀಕೆ ಮಾಡುವ ಬದಲು ಮೊದಲು ಅದನ್ನು ನೋಡಿಕೊಳ್ಳುವುದು ಒಳ್ಳೇಯದು ಎಂದು ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.
ಬಿಜೆಪಿಯಲ್ಲೇ ವಕ್ಫ್ ಹಾಗೂ ವಿಜಯೇಂದ್ರ ಅವರ ಬಗ್ಗೆ ಏನೋನೋ ಮಾಡ್ತಾ ಇದ್ದೀಯಲ್ಲ? ಅದನ್ನಾದ್ರೂ ನೆಮ್ಮದಿಯಾಗಿ ಮಾಡು. ಅದು ಬಿಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಹೊಗಳುವ ಅಥವಾ ತೆಗಳುವ ಕೆಲಸ ನಿನ್ನದಲ್ಲ. ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕಾದ್ರೂ ಹೋಗ್ತಾರೆ. ಜ್ಯೋತಿಷಿ ಬಳಿಯಾದ್ರೂ ಹೋಗ್ತಾರೆ, ಅದು ಅವರ ಇಷ್ಟ. ನೀನು ಯಾಕೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ತಲೆಕೆಡಿಸಿಕೊಳ್ಳುವೆ? ಎಂದು ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ.
ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಹೈಕಮಾಂಡ್ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮಾಡಿದೆ. ಹಾಗಾಗಿ ಎಲ್ಲರೂ ಅವರಿಗೆ ಗೌರವ ಕೊಡಬೇಕು. ಹೈಕಮಾಂಡ್ ಅವರೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದ ಮೇಲೆ ಅದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
ವಿಜಯೇಂದ್ರ ಅವರು ಹೋರಾಟಗಾರರು, ಅದನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೇನೆ. ಉಪಚುನಾವಣೆಯಲ್ಲಿ ಅವರಿಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ವಿಜಯೇಂದ್ರ ಎಲ್ಲಿಯೂ ದ್ವೇಷ ರಾಜಕಾರಣ ಮಾಡಿರುವುದು ನನಗೆ ಕಂಡಿಲ್ಲ. ಹಾಗೆಯೇ ಯಾರನ್ನೂ ಎತ್ತಿ ಕಟ್ಟುವ ಕೆಲಸ ಕೂಡ ಮಾಡಿಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಜಯೇಂದ್ರ ಒಬ್ಬ ಹುಟ್ಟು ಹೋರಾಟಗಾರ. ಅವರನ್ನು ತುಂಬಾ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲೆಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅಲ್ಲೆಲ್ಲ ಗೆಲ್ಲಿಸಿಕೊಂಡು ಬಂದಿದ್ದಾರೆ. ವಿಜಯೇಂದ್ರ ಎಲ್ಲೂ ದ್ವೇಷದ ರಾಜಕಾರಣ ಮಾಡಿರುವುದು ನಾನು ನೋಡಿಲ್ಲ. ಯಾರ ಮೇಲೂ ಎತ್ತಿ ಕಟ್ಟುವ ದ್ವೇಷದ ರಾಜಕಾರಣ ಮಾಡಿರುವುದನ್ನು ನೋಡಿಲ್ಲ ಎಂದರು.












Click it and Unblock the Notifications