ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ಬಿಜೆಪಿ ಮುಖಂಡನ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್‌ 14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೊಲೆ ಬೆದರಿಕೆ ಹಾಕಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸ್ಥಳೀಯ ಬಿಜೆಪಿ ಮುಖಂಡ ಬೊಮ್ಮಾಯಿ ಮಣಿಕಾಂತ್ ರಾಥೋಡ್ ಅವರನ್ನು ಭಾನುವಾರ ತಡರಾತ್ರಿ ತೆಲಂಗಾಣದ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

ನಾನು ಬಿಜೆಪಿಯವರಿಗೆ ಉತ್ತರ ನೀಡುವ ಪರಿಸ್ಥಿತಿ ಬಂದಿಲ್ಲ: ಪ್ರಿಯಾಂಕ್ ಖರ್ಗೆನಾನು ಬಿಜೆಪಿಯವರಿಗೆ ಉತ್ತರ ನೀಡುವ ಪರಿಸ್ಥಿತಿ ಬಂದಿಲ್ಲ: ಪ್ರಿಯಾಂಕ್ ಖರ್ಗೆ

ಸುಮಾರು 8000 ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಗೆ ಆಗಮಿಸುವ ಮುನ್ನ ಈ ಘಟನೆ ನಡೆದಿದೆ. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅವರು ನೀಡಿದ ದೂರಿನ ಮೇರೆಗೆ ಕಲಬುರಗಿ ನಗರದ ಬ್ರಹ್ಮಾಪುರ ಪೊಲೀಸರು ಶನಿವಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

BJP leader Arrest who threatened Priyank Kharge

ಪ್ರಕರಣ ದಾಖಲಾದ ಕೂಡಲೇ ಆರೋಪಿ ಪರಾರಿಯಾಗಿದ್ದನು. ಆತನ ಪತ್ತೆಗೆ ಐವರು ಸದಸ್ಯರ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಹೈದರಾಬಾದ್‌ಗೆ ತೆರಳಿದ ತಂಡ ಆತನನ್ನು ವಶಕ್ಕೆ ಪಡೆದು ಕಲಬುರಗಿಗೆ ಕರೆತಂದಿದೆ.

BJP leader Arrest who threatened Priyank Kharge

ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಹಾಕಿದ್ದ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿವಿಧ ಸಮಾಜದ ಮುಖಂಡರಾದ ಸಂಜಯ ಮಾಕಾಲ, ರಾಜಗೋಪಾಲರೆಡ್ಡಿ, ಮಹಾಂತೇಶ ಕೌಲಗಿ, ರಾಜೇಶ ಗುತ್ತೇದಾರ್, ಲಾಲ್ ಅಹ್ಮದ್, ಮಲ್ಲಪ್ಪ ಇಂಗನಕಲ್, ಮಲ್ಲಿಕಾರ್ಜುನ ಪೂಜಾರಿ, ರವಿ ಚೌಹಾಣ್, ಕಾಂಗ್ರೆಸ್‌ನ ಲಿಂಗರಾಜ್ ತರ್ಫೈಲೆ ಭಾನುವಾರ ಆರೋಪಿಯನ್ನು ಬಂಧಿಸದಿದ್ದಲ್ಲಿ ಸೋಮವಾರ ಕಲಬುರಗಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಪ್ರಿಯಾಂಕ್‌ಗೆ ಝಡ್‌+ ಭದ್ರತೆ ನೀಡುವಂತೆ ಒತ್ತಾಯಿಸಿದ್ದರು.

English summary
Manikanth Rathore, a local BJP leader of Chittapur in Kalaburagi district, who threatened to kill Karnataka Pradesh Congress Committee (KPCC) spokesperson and Chittapur MLA Priyank Kharge during a press conference on Friday, was arrested in Hyderabad, Telangana late on Sunday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X