ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೈರ್ಯ ಇದ್ದರೆ ಈ 10 ಪ್ರಶ್ನೆಗೆ ಉತ್ತರಿಸಿ: ರಾಹುಲ್‌ಗೆ ಬಿಜೆಪಿ ಸವಾಲು

|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಕರ್ನಾಟಕ ಬಿಜೆಪಿ ಕೇಳಿದ 10 ಪ್ರಶ್ನೆಗಳು | Oneindia Kannada

ಬೆಂಗಳೂರು, ಮೇ 3: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ನಡುವಣ ಮಾತಿನ ಸಮರ ತೀವ್ರವಾಗುತ್ತಿದೆ. ಪರಸ್ಪರ ಪ್ರಶ್ನೆಗಳನ್ನು ಎಸೆಯುವ ಟ್ವಿಟ್ಟರ್ ವಾರ್ ಮತ್ತಷ್ಟು ರಂಗು ಪಡೆದುಕೊಳ್ಳುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪಂಚಪ್ರಶ್ನೆಗಳನ್ನು ಎಸೆದಿದ್ದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿಯ ಕರ್ನಾಟಕ ಘಟಕ ರಾಹುಲ್ ಗಾಂಧಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಧೈರ್ಯವಿದ್ದರೆ ಅವುಗಳಿಗೆ ಉತ್ತರಿಸಿ ಎಂಬ ಸವಾಲನ್ನೂ ಒಡ್ಡಿದೆ.

ಮೋದಿ ಸರ್ಕಾರದ ಕೃಷಿ ರಿಪೋರ್ಟ್ ಕಾರ್ಡ್ ಕೊಟ್ಟ ರಾಹುಲ್ಮೋದಿ ಸರ್ಕಾರದ ಕೃಷಿ ರಿಪೋರ್ಟ್ ಕಾರ್ಡ್ ಕೊಟ್ಟ ರಾಹುಲ್

'ರಾಹುಲ್ ಭಾಷಣದ ಪ್ರತಿ ಇಟ್ಟುಕೊಂಡು ಓದುವ ನಿಮ್ಮ ಸಾಮರ್ಥ್ಯ ಚರ್ಚೆಯ ಆಚೆಯದ್ದು. ಆದರೆ ಅದರಾಚೆಗೆ ನಿಮಗೆ ಕನ್ನಡಿಗರ ಗಂಭೀರ ಪ್ರಶ್ನೆಗಳಿವೆ. ಕರ್ನಾಟಕಕ್ಕೆ ಒಂದೂ ಹನಿ ಮಹಾದಾಯಿ ನೀರು ಬಿಡಲು ಅವಕಾಶ ನೀಡುವುದಿಲ್ಲ ಎಂದು ಸೋನಿಯಾ ಗಾಂಧಿ ಅವರು ಗೋವಾಕ್ಕೆ ಭರವಸೆ ನೀಡಿದ್ದಿರಬಹುದು ಅಥವಾ ನಿಮ್ಮ ಮುಖ್ಯಮಂತ್ರಿ ಭ್ರಷ್ಟಾಚಾರದ 67 ಆರೋಪಗಳನ್ನು ಹೊತ್ತಿರುವುದು ಇರಬಹುದು. ಅವುಗಳಿಗೆ ತಾಕತ್ತಿದ್ದರೆ ಉತ್ತರಿಸಿ' ಎಂದಿರುವ ಬಿಜೆಪಿ #ಆರ್‌ಜಿಮಸ್ಟ್ಆನ್ಸರ್ ಎಂಬ ಹ್ಯಾಷ್‌ಟ್ಯಾಗ್ ಸೃಷ್ಟಿಸಿದೆ.

ರಾಹುಲ್‌ಗೆ ಬಿಜೆಪಿ ಕೇಳಿರುವ ಹತ್ತು ಪ್ರಶ್ನೆಗಳು

* ಮಹಾದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈ ಕರ್ನಾಟಕ ವಿರೋಧಿ ಹೇಳಿಕೆಯನ್ನು ಖಂಡಿಸುತ್ತೀರಾ?

* ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರ ಮನವೊಲಿಸಿದ್ದಾರೆ. ಬಿಎಸ್‌ವೈ-ಪರ್ರೀಕರ್ ಅವರ ಪ್ರಯತ್ನಕ್ಕೆ ಗೋವಾ ಕಾಂಗ್ರೆಸ್‌ನಿಂದ ವಿರೋಧವೇಕೆ. ನೀವು ಗೋವಾ ಕಾಂಗ್ರೆಸ್‌ನ ಮನವೊಲಿಸುತ್ತೀರಾ?

* ದಾದ್ರಿಯಲ್ಲಿ ಮೊಹಮದ್ ಅಖ್ಲಾಕ್ ಸತ್ತ ಕೂಡಲೇ ಆತನ ಮನೆಗೆ ಭೇಟಿ ನೀಡಿದ್ದಿರಿ. ಕರ್ನಾಟಕದಲ್ಲಿ ದಲಿತರು ಸೇರಿದಂತೆ 24 ಹಿಂದೂಗಳು ಹತ್ಯೆಯಾಗಿದ್ದಾರೆ. ಇದುವರೆಗೂ ಒಂದು ಕುಟುಂಬವನ್ನೂ ನೀವು ಭೇಟಿ ಮಾಡಿಲ್ಲ ಏಕೆ?

* ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ 67ಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಭ್ರಷ್ಟಾಚಾರವನ್ನು ಉತ್ತೇಜಿಸಲು ನಿಮ್ಮ ಸರ್ಕಾರ ಲೋಕಾಯುಕ್ತವನ್ನು ನಾಶಪಡಿಸಿತು. ದೇಶದಲ್ಲಿ ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂಬುದು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ.

ಎಂದಿನಂತೆ ಈ ಬಾರಿಯೂ ಪಾರದರ್ಶಕ ಮತ್ತು ಸ್ವಚ್ಛ ಸರ್ಕಾರ ನೀಡುವಲ್ಲಿ ನೀವು ವಿಫಲರಾಗಿರುವುದು ಸ್ಪಷ್ಟವಲ್ಲವೇ?

* ಬೆಂಗಳೂರಿನಲ್ಲಿ 15 ಸಾವಿರಕ್ಕೂ ಅಧಿಕ ರಸ್ತೆಗುಂಡಿಗಳಿವೆ. ಅತಿಯಾದ ಸಂಚಾರ ದಟ್ಟಣೆ, ರಸ್ತೆಗಳಲ್ಲಿಯೇ ಕಸ ಎಸೆಯುವುದು, ಕೆರೆಗಳಲ್ಲಿ ಬೆಂಕಿ ಉರಿಯುವುದು ಮತ್ತು ಮನೆಗಳಿಗೆ ನೀರು ನುಗ್ಗುವುದು ಮುಂತಾದವುಗಳನ್ನು ಬೆಂಗಳೂರಿಗರು ಅನುಭವಿಸುತ್ತಿದ್ದಾರೆ. ಸೂಕ್ತ ಸೂಲಸೌಕರ್ಯದ ಕೊರತೆಯಿಂದಾಗಿ ಕಂಪೆನಿಗಳು ಬೆಂಗಳೂರು ತೊರೆಯುತ್ತಿವೆ.

ನಿಮ್ಮ ಸರ್ಕಾರ ಬೆಂಗಳೂರನ್ನು ಅಕ್ಷರಶಃ ಕೊಂದು ಹಾಕಿದೆ. ನಿಮ್ಮ ಸರ್ಕಾರವು ಬ್ರ್ಯಾಂಡ್ ಬೆಂಗಳೂರನ್ನು ಬರ್ಬಾದ್ ಬೆಂಗಳೂರನ್ನಾಗಿ ಮಾಡಿರುವುದು ಸ್ಪಷ್ಟವಾಗಿದೆಯಲ್ಲವೇ?

* ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕಳೆದ 5 ವರ್ಷದಲ್ಲಿ 3,500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವು ಕನ್ನಡಿಗರು ಹೆಮ್ಮೆ ಪಟ್ಟುಕೊಳ್ಳುವಂತಹ ದಾಖಲೆಗಳಲ್ಲ. ಕನ್ನಡಿಗ ರೈತರಿಗೆ ನಿಮ್ಮ ಸರ್ಕಾರ ಏನನ್ನೂ ಮಾಡಿಲ್ಲ ಎನ್ನುವುದು ಸ್ಪಷ್ಟವಲ್ಲವೇ?

* ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರ್ಕಾರಗಳು ರೈತರ ತಲಾ 30,000 ಕೋಟಿ ಮತ್ತು 36,000 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ನೀಡಿದ ಸಾಲವೂ ಸೇರಿದೆ.

ಸಿದ್ದರಾಮಯ್ಯ ಅವರು 8,000 ಕೋಟಿ ರೂಪಾಯಿವರೆಗೆ ಮಾತ್ರ ಸಾಲಮನ್ನಾ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡುವುದಕ್ಕೆ ನಿಮ್ಮ ಸರ್ಕಾರವನ್ನು ತಡೆದಿದ್ದು ಏನು?

* ಬಿಜೆಪಿ ಆಡಳಿತದ ಸರ್ಕಾರಗಳಿಗೆ ಹೋಲಿಸಿದರೆ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸುವಲ್ಲಿ ನಿಮ್ಮ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದಿದ್ದರೆ ಈ ಯೋಜನೆಗಳ ಪ್ರಯೋಜನ ಕನ್ನಡಿಗರಿಗೆ ದಕ್ಕುತ್ತಿತ್ತು ಎನ್ನುವುದು ಸ್ಪಷ್ಟವಲ್ಲವೇ?

* ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಕಿರುಕುಳ ನೀಡಿ ಕರ್ನಾಟಕದ ಮೂಲೆ ಮೂಲೆ ವರ್ಗಾವಣೆ ಮಾಡಲಾಗುತ್ತಿದೆ. ಕೆಲವು ನತದೃಷ್ಟರು ಅನುಮಾನಾಸ್ಪದ ರೀತಿಯಲ್ಲಿ ಹೆಣವಾಗಿಯೂ ಪತ್ತೆಯಾಗಿದ್ದಾರೆ.

ಸಿದ್ದರಾಮಯ್ಯ ಅವರ ಕರ್ನಾಟಕದಲ್ಲಿ ಪ್ರಮಾಣಿಕತೆ ಮತ್ತು ಸಮಗ್ರತೆಗೆ ಜಾಗವೇ ಇಲ್ಲ ಎನ್ನುವುದು ಸ್ಪಷ್ಟವಾಗಿದೆಯಲ್ಲವೇ? ನಿಮ್ಮ ಸರ್ಕಾರ ಕರ್ನಾಟಕವನ್ನು ಮಾಫಿಯಾದ ಕೈಗಳಿಗೆ ನೂಕಿಲ್ಲವೇ?

* ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಇತರೆ ನಾಯಕರಾದ ದಿನೇಶ್ ಗುಂಡೂರಾವ್ ಹಾಗೂ ಕೆ.ಸಿ. ವೇಣುಗೋಪಾಲ್ ಅವರಂತಹವರು ಪಿಎಫ್‌ಐ ಮತ್ತು ಎಸ್‌ಡಿಪಿಐಗಳನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅದರ ಬದಲು ಅವರು ಬಿಜೆಪಿಯನ್ನು ನಿಷೇಧಿಸಲು ಹೇಳುತ್ತಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷವನ್ನು ನಿಷೇಧಿಸುವಂತೆ ಹೇಳುವುದು ಕಾಂಗ್ರೆಸ್‌ನ ತುರ್ತುಪರಿಸ್ಥಿತಿಯ ಧೋರಣೆಯನ್ನು ಬಿಂಬಿಸುತ್ತದೆ. ಈ ದೃಷ್ಟಿಕೋನವನ್ನು ಒಪ್ಪುತ್ತೀರಾ? ಇಲ್ಲದಿದ್ದರೆ ಕ್ಷಮೆ ಕೇಳುವಂತೆ ನಿಮ್ಮ ನಾಯಕರಿಗೆ ಸೂಚಿಸುತ್ತೀರಾ?

English summary
Bjp's Karnataka wing has asked 10 questions to congress president Rahul Gandhi in twitter. It challenged him to answer to all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X