ಬಿಜೆಪಿ ನಾಯಕರ ವಿರುದ್ಧ ಕೇಂದ್ರ ನಾಯಕರು ಗರಂ ಆಗಿದ್ದೇಕೆ?

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 2 : ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಕೇಂದ್ರ ನಾಯಕರು ಗರಂ ಆಗಿದ್ದಾರೆ. 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ' ಆಯೋಜನೆ ಸಂದರ್ಭದಲ್ಲಿ ಹಲವು ಯಡವಟ್ಟುಗಳಾಗಿದ್ದು, ರಾಜ್ಯ ನಾಯಕರು ಮುಜುಗರ ಅನುಭವಿಸಿದರು.

ಸಿದ್ದರಾಮಯ್ಯ ಸರ್ಕಾರ ತೊಲಗಿಸಲು ಕೈ ಜೋಡಿಸಿ : ಬಿಎಸ್‌ವೈ ಕರೆ

ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಗುರುವಾರ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು. ಆದರೆ, ಕಾರ್ಯಕ್ರಮದಲ್ಲಿ ಹಲವು ಯಡವಟ್ಟುಗಳಾಯಿತು.

BJP High command upset with state leaders

* ಟ್ರಾಫಿಕ್ ಸಂಕಟ : ನಗರದ ಹೊರವಲಯದ ಮದಾವರ ಬಳಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಸಾವಿರಾರು ಜನರು ಪರದಾಡಿದರು. ಆಂಬ್ಯುಲೆನ್ಸ್‌ಗಳು ಸಿಕ್ಕಿಹಾಕಿಕೊಂಡಿತು. ಇದರಿಂದ ಜನರು ಅಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಕೊಟ್ಟ ಅನುದಾನದ ಬಗ್ಗೆ ಸಿದ್ದರಾಮಯ್ಯ ಪ್ರಶ್ನಿಸಿದ ಅಮಿತ್ ಶಾ

* ಅಮಿತ್ ಶಾಗೆ ತಟ್ಟಿದ ಟ್ರಾಫಿಕ್ ಬಿಸಿ : ಅಮಿತ್ ಶಾ ಅವರು ಯಾತ್ರೆ ಉದ್ಘಾಟನೆ ಮಾಡಲು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಬರಬೇಕಿತ್ತು. ಆದರೆ, ಭಾರೀ ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ಅವರು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಆಗಮಿಸಿದರು.

* ತಡವಾದ ಕಾರ್ಯಕ್ರಮ : ನಿಗದಿಯಂತೆ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ' ಕಾರ್ಯಕ್ರಮಕ್ಕೆ 11.30ಕ್ಕೆ ಚಾಲನೆ ಸಿಗಬೇಕಿತ್ತು. ಆದರೆ, ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. 2 ಗಂಟೆ ವೇಳೆಗೆ ಅಮಿತ್ ಶಾ ಆಗಮಿಸಿದರು.

* ಖಾಲಿ ಕುರ್ಚಿಗಳ ಸ್ವಾಗತ : ಅಮಿತ್ ಶಾ ಆಗಮಿಸುವ ಸಂದರ್ಭದಲ್ಲಿ ಸಮಾವೇಶದಲ್ಲಿ ಖಾಲಿ ಕುರ್ಚಿಗಳಿದ್ದವು. ಇದರಿಂದ ಅವರು ಅಸಮಾಧಾನಗೊಂಡು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್ ಬಳಿ ಮಾತುಕತೆ ನಡೆಸಿದರು. ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

* ರಸ್ತೆಗೆ ಬಂದ ಸಚಿವ ಗೋಯಲ್ : ಖಾಲಿ ಕುರ್ಚಿಗಳನ್ನು ಕಂಡು ಹಿಂಬಂದಿ ಇರುವ ಜನರನ್ನು ಕರೆತಂದು ಮುಂದೆ ಕೂರಿಸಿ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪಿಯೂಷ್ ಗೋಯೆಲ್ ಅರವಿಂದ ಲಿಂಬಾವಳಿ, ಆರ್.ಅಶೋಕ್ ಅವರಿಗೆ ಸೂಚಿಸಿದರು. ಆದರೆ, ನಾಯಕರು ಅತ್ತ ಗಮನ ಹರಿಸಲಿಲ್ಲ. ಆದ್ದರಿಂದ, ಸ್ವತಃ ಗೋಯೆಲ್ ವೇದಿಕೆ ಬಿಟ್ಟು ಸಮಾವೇಶದ ಆಗಮನದ ರಸ್ತೆಗೆ ಬಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP National president Amit Shah launched Karnataka BJP 2018 assembly elections campaign in Bengaluru on November 2, 2017. party high command upset with state leaders during rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ