DK Shivakumar: ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಇಂಟ್ರಸ್ಟೇ ಇಲ್ಲ : ಡಿ ಕೆ ಶಿವಕುಮಾರ್‌

ಹುಬ್ಬಳ್ಳಿ, ಡಿಸೆಂಬರ್‌ 15: ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಇಂಟ್ರಸ್ಟೇ ಇಲ್ಲ. ಬಿಜೆಪಿಯವರಿಗೆ ರಾಜಕಾರಣ ಬಿಟ್ಟರೆ ಮತ್ತೇನೂ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದರು.

ಈ ಕುರಿತು ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತಾನಾಡಿದ ಅವರು, ಉತ್ತರ ಕರ್ನಾಟಕದ ಸರ್ವ ಸಮಸ್ಯೆ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನೀರಾವರಿ ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ, ಮಹದಾಯಿ ಯೋಜನೆ ಅನುಷ್ಠಾನ ವಿಚಾರಕ್ಕೆ ಇತ್ತೀಚೆಗೆ ಕೇಂದ್ರ ಫಾರೆಸ್ಟ ಮಿನಿಸ್ಟರನ್ನೂ ಭೇಟಿ ಮಾಡಿದೆ , ಕೇಂದ್ರ ಫಾರೆಸ್ಟ್ ಮಿನಿಸ್ಟರ್‌ಗೆ ಜೋಶಿಯವರು ಮಹದಾಯಿ ಕುರಿತು ವಿಷಯ ತಿಳಿಸಿದ್ದಾರೆ, ನಾನು ಕೂಡ ವಿಷಯ ತಿಳಿಸಿದ್ದೇನೆ ಎಂದು ಹೇಳಿದರು.

BJP has no interest in discussing the North Karnataka issue Says DK Shivakumar

ಇನ್ನು ಮಹದಾಯಿ ವಿಜಯೋತ್ಸವವನ್ನು ಬಿಜೆಪಿಯವರು ಮಾಡಿದ್ದರು, ಅವರು ವಿಜೋತ್ಸವ ಮಾಡೋರು ನಾವು ಕೆಲಸಾ ಮಾಡೋರು, ಚಿಕ್ಕ‌ ಫಾರೆಸ್ಟ್ ಕ್ಲೇಯರೆನ್ಸ್ ಕೊಡಿಸುವ ಜವಾಬ್ದಾರಿ ಜೋಶಿಯವರ ಮೇಲಿದೆ. ಫಾರೆಸ್ಟ್ ಕ್ಲೇಯರೆನ್ಸ್ ಸಿಗುವ ಭರವಸೆ ಕಾಣುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಮಹದಾಯಿ ಯೋಜನೆಗೆ ತಾರ್ಕಿಕ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗಷ್ಟೇ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದೆ. ಅವರು ಕೂಡ ಅರಣ್ಯ ಸಚಿವರ ಜತೆ ಚರ್ಚೆ ಮಾಡಿರುವ ಬಗ್ಗೆ ತಿಳಿಸಿದರು. ಮಹದಾಯಿ ಯೋಜನೆ ಕಾಮಗಾರಿಗಳ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೇಂದ್ರದ ಅನುಮತಿ ದೊರೆತ ತಕ್ಷಣ ಕೆಲಸ ಆರಂಭವಾಗುತ್ತದೆ. ಮೇಕೆದಾಟು ಯೋಜನೆ ವಿಚಾರವಾಗಿ ಸಂಭ್ರಮಾಚರಣೆ ಮಾಡಿದ್ದು ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿ. ಹೀಗಾಗಿ ಅವರೇ ನೇತೃತ್ವ ವಹಿಸಿ ಈ ಯೋಜನೆಗೆ ಅನುಮತಿ ಕೊಡಿಸಬೇಕು. ಅವರು ಅರಣ್ಯ ಇಲಾಖೆ ಅನುಮತಿ ಕೊಡಿಸಲಿ ನಾವು ಕೆಲಸ ಆರಂಭಿಸುತ್ತೇವೆ. ಅನುಮತಿ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಕೋವಿಡ್ ಅಕ್ರಮದ ಬಗ್ಗೆ ಎಫ್ಐಆರ್ ದಾಖಲಾಗಿದ್ದು ಬಿಜೆಪಿ ನಾಯಕರ ಹೆಸರಿಲ್ಲ ಎಂಬ ಬಗ್ಗೆ ಕೇಳಿದಾಗ, "ನ್ಯಾ.ಕುನ್ಹಾ ಅವರ ಸಮಿತಿ ವರದಿ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಬಿಜೆಪಿ ಅವರ ಮೇಲೆ ಕೇಸು ದಾಖಲಿಸಲು ನಾವು ತನಿಖೆ ಮಾಡುತ್ತಿಲ್ಲ. ವರದಿ ಶಿಫಾರಸ್ಸಿನಂತೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಅವರು ಅವರ ಕೆಲಸ ಮಾಡುತ್ತಾರೆ ನೋಡೋಣ" ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ನೀರಾವರಿ ವಿಚಾರವಾಗಿ ಚರ್ಚೆಯಾಗಬೇಕು ಎಂಬ ಪ್ರಶ್ನೆ ಕುರಿತು ಉತ್ತರಿಸಿದ್ದು, ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ನಾನು ಸಿದ್ಧ. ನೀರಾವರಿ ಜತೆಗೆ ಬೇರೆ ವಿಚಾರಗಳೂ ಚರ್ಚೆಯಾಗಲಿ ಎಂದು ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+