ಬೆಂಗಳೂರಿನ ಬಿಜೆಪಿ ಹಾಲಿ ಶಾಸಕರಿಗೆ ಸಿಗುತ್ತಾ ಟಿಕೆಟ್? ಇಲ್ಲಿದೆ ರಾಜ್ಯ ಬಿಜೆಪಿ ಫೈನಲ್‌ ಮಾಡಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ?

ಬೆಂಗಳೂರು, ಏಪ್ರಿಲ್3:‌ ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಆಡಳಿತರೂಢ ಬಿಜೆಪಿ ಪಕ್ಷ ಈ ಬಾರೀ ಹೊಸ ಪ್ರಯೋಗದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ.

ಇದೀಗ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಭರ್ಜರಿ ಕಸರತ್ತು ನಡೆಸಿದ್ದು, ಈಗಾಗಲೇ ಶುಕ್ರವಾರ ಎಲ್ಲ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರಿಂದ ಮತದಾನ ವ್ಯವಸ್ಥೆ ಮೂಲಕ ಅಭ್ಯರ್ಥಿಗಳ ಹೆಸರುಗಳನ್ನು ಸಂಗ್ರಹಿಸಿದ್ದ ರಾಜ್ಯ ನಾಯಕರು ಕ್ಷೇತ್ರವಾರು ಅಭ್ಯರ್ಥಿಗಳ ಫೈನಲ್ ಮಾಡಲು ಸಭೆ ನಡೆಸಿದ್ದು, ಕೋರ್‌ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಹೆಸರನ್ನು ಅಳೆದು ತೂಗಿ ಸಿದ್ದಪಡಿಸಿದೆ.

BJP Has Finalized The List Of Bengaluru Potential Candidates

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸಿದ್ದು, ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಗೆ ಬೆಂಗಳೂರು ನಗರ ವ್ಯಾಪ್ತಿಯ ಮೇಲೆ ಹೆಚ್ಚಿನ ಒತ್ತು ನೀಡಿವೆ.

ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ರಾಜಧಾನಿ ಬೆಂಗಳೂರು ಬಿಬಿಎಂಪಿ ಚುನಾವಣೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿಯಲ್ಲಿ ಸಾಕಷ್ಟು ರೂಪರೇಷೆಯನ್ನ ಸಿದ್ದಪಡಿಸಿರುವ ಬಿಜೆಪಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಅಳೆದುತೂಗಿ ಬೆಂಗಳೂರು ಭಾಗದ ಅಭ್ಯರ್ಥಿಗಳನ್ನ ಫೈನಲ್‌ ಮಾಡಿದೆ.

BJP Has Finalized The List Of Bengaluru Potential Candidates

ಬೆಂಗಳೂರು ನಗರದ 28 ಕ್ಷೇತ್ರಗಳ ಫೈಕಿ ಬಿಜೆಪಿ 15 ಶಾಸಕರನ್ನ ಹೊಂದಿದ್ದು, ಈ ಬಾರಿ ಈಗಾಗಲೇ ಇರುವಂತಹ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದ್ದು, ಕಳೆದುಕೊಂಡ ಕ್ಷೇತ್ರಗಳನ್ನ ಯಾವ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು, ಕ್ಷೇತ್ರ ಮರಳಿ ಪಡೆಯಲು ಯಾವ ತಯಾರಿ ಅನಿವಾರ್ಯ ಎಂಬ ಲೆಕ್ಕಾಚಾರವನ್ನ ಬಿಜೆಪಿ ಹಾಕಿಕೊಂಡಿದೆ.

ಬೆಂಗಳೂರು ನಗರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ

ಕ್ಷೇತ್ರ ಅಭ್ಯರ್ಥಿ
ಯಲಹಂಕ ಎಸ್.ಆರ್‌ ವಿಶ್ವನಾಥ್
ಯಶವಂತಪುರ ಎಸ್.ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ ಮುನಿರತ್ನ
ಪದ್ಮನಾಭನಗರ ಆರ್ ಅಶೋಕ್
ಬೆಂಗಳೂರು ದಕ್ಷಿಣ ಎಂ ಕೃಷ್ಣಪ್ಪ
ಬೊಮ್ಮನಹಳ್ಳಿ ಸತೀಶ್ ರೆಡ್ಡಿ
ಕೆ.ಆರ್ ಪುರ ಬೈರತಿ ಬಸವರಾಜ್
ಮಹದೇವಪುರ ಅರವಿಂದ್ ಲಿಂಬಾವಳಿ
ಸಿ.ವಿ ರಾಮನ್ ನಗರ ಎಸ್ ರಘು
ರಾಜಾಜಿ ನಗರ ಸುರೇಶ್ ಕುಮಾರ್
ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ
ಮಲ್ಲೇಶ್ವರ ಅಶ್ವಥ್ ನಾರಾಯಣ್
ಗೋವಿಂದರಾಜನಗರ ಸೋಮಣ್ಣ / ಉಮೇಶ್ ಶೆಟ್ಟಿ
ವಿಜಯನಗರ ರವೀಂದ್ರ / ಉಮೇಶ್ ಶೆಟ್ಟಿ
ಬಸವನಗುಡಿ ರವಿಸುಬ್ರಹ್ಮಣ್ಯ / ತೇಜಸ್ವಿನಿ ಅನಂತ್ ಕುಮಾರ್
ಜಯನಗರ ಸಿ.ಕೆ ರಾಮಮೂರ್ತಿ/ ಎನ್.ಆರ್ ರಮೇಶ್/ ಎಸ್.ಕೆ ನಟರಾಜ್
ಚಿಕ್ಕಪೇಟೆ ಉದಯ್ ಗರುಡಾಚಾರ್/ ಹೇಮಚಂದ್ರ ಸಾಗರ್
ಹೆಬ್ಬಾಳ ಕಟ್ಟಾ ಸುಬ್ರಹ್ಮಣ್ಯ ನಾಯ್ಡು/ ನಾರಾಯಣಸ್ವಾಮಿ
ಶಿವಾಜಿನಗರ ರುಮಾನ್ ಬೇಗ್ / ನಿರ್ಮಲ್ ಕುಮಾರ್ ಸುರಾನಾ/ ಸರವಣ
ಬ್ಯಾಟರಾಯನಪುರ ನಿರಂತರ್ ಗಣೇಶ್, ತಮ್ಮೇಶ್ ಗೌಡ/ ಎ ರವಿ/ ಮುನೀಂದ್ರ ಕುಮಾರ್
ಶಾಂತಿನಗರ ಗೌತಮ್ ಕುಮಾರ್/ ವಾಸುದೇವ ಮೂರ್ತಿ
ಗಾಂಧಿನಗರ ಸಪ್ತಗಿರಿ ಗೌಡ/ ಶಿವಕುಮಾರ್
ದಾಸರಹಳ್ಳಿ ಮುನಿರಾಜು/ ಲೋಕೇಶ್
ಚಾಮರಾಜಪೇಟೆ ಬಾಸ್ಕರ್ ರಾವ್/ ಬಿ.ವಿ ಗಣೇಶ್/ ಲಹರಿ ವೇಲು
ಬಿಟಿಎಂ ಲೇಔಟ್ ಅನಿಲ್ ಶೆಟ್ಟಿ/ ವಿವೇಕ್ ರೆಡ್ಡಿ
ಆನೇಕಲ್ ಶಿವರಾಮ್/ ಶ್ರೀನಿವಾಸ್/ ಡಾ. ಸಂದೀಪ್
ಸರ್ವಜ್ಞ ನಗರ ಪದ್ಮನಾಭ ರೆಡ್ಡಿ/ಥಾಮಸ್ ಚೆರಿಯನ್ ನೀಲಿಯಾರ
ಪುಲಕೇಶಿ ನಗರ ಸುಶೀಲಾ ದೇವರಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+