ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷ ಉಚ್ಚಾಟನೆ ಮಾಡಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಮೇ 2: ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಪಕ್ಷದ 15 ಸದಸ್ಯರನ್ನು ಬಿಜೆಪಿ ಉಚ್ಚಾಟಿಸಿದೆ.

ಈ 15 ಬಂಡಾಯ ಅಭ್ಯರ್ಥಿಗಳನ್ನೂ ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಆರು ವರ್ಷ ಕಾಲ ಉಚ್ಚಾಟಿಸಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲ ಬಂಡಾಯ ಅಭ್ಯರ್ಥಿಗಳಿಗೆ ಅಮಾನತಿನ ಆದೇಶವನ್ನು ಮಂಗಳವಾರ ರವಾನಿಸಿದ್ದಾರೆ.

ಗೌಡರನ್ನು ಮೋದಿ ಹೊಗಳಿದ್ದಕ್ಕೆ ವಿಶೇಷ ಅರ್ಥವಿಲ್ಲ: ಅನಂತ ಕುಮಾರ್ಗೌಡರನ್ನು ಮೋದಿ ಹೊಗಳಿದ್ದಕ್ಕೆ ವಿಶೇಷ ಅರ್ಥವಿಲ್ಲ: ಅನಂತ ಕುಮಾರ್

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಹೇಳಲಾಗಿದೆ.

Bjp expelled 15 rebel candidates from the party

ಅಮಾನತುಗೊಂಡವರು ಯಾರಾರು?
* ಸಂಗಮೇಶ ನಿರಾಣಿ- ಜಮಖಂಡಿ ವಿಧಾನಸಭೆ ಕ್ಷೇತ್ರ, ಬಾಗಲಕೋಟೆ
* ನವಲಗಿ ಹಿರೇಮಠ- ಹುನಗುಂದ ವಿಧಾನಸಭೆ ಕ್ಷೇತ್ರ, ಬಾಗಲಕೋಟೆ
* ದಿಲೀಪ್ ಕುಮಾರ್- ಗುಬ್ಬಿ ವಿಧಾನಸಭೆ ಕ್ಷೇತ್ರ, ತುಮಕೂರು
* ಹನುಮಕ್ಕ- ಹೊಳಲ್ಕೆರೆ ವಿಧಾನಸಭೆ ಕ್ಷೇತ್ರ, ಚಿತ್ರದುರ್ಗ
* ಗೋಪಿಕೃಷ್ಣ- ತರೀಕೆರೆ ವಿಧಾನಸಭೆ ಕ್ಷೇತ್ರ, ಚಿಕ್ಕಮಗಳೂರು
* ಸೋಮಣ್ಣ ಬೇವಿನಮರದ- ಶಿಗ್ಗಾಂವ್ ವಿಧಾನಸಭೆ ಕ್ಷೇತ್ರ, ಹಾವೇರಿ
* ಬಂಗಾರಿ ಹನುಮಂತ- ಸಂಡೂರು ವಿಧಾನಸಭೆ ಕ್ಷೇತ್ರ, ಬಳ್ಳಾರಿ
* ಓದೊಗಂಗಪ್ಪ- ಹೂವಿನ ಹಡಗಲಿ ವಿಧಾನಸಭೆ ಕ್ಷೇತ್ರ, ಬಳ್ಳಾರಿ
* ವಿ.ಸಿ. ಪಾಟೀಲ್- ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರ, ಹಾವೇರಿ
* ಮಹಾದೇವ- ಮಳವಳ್ಳಿ ವಿಧಾನಸಭೆ ಕ್ಷೇತ್ರ, ಮಂಡ್ಯ
* ರಮೇಶ್ ಪಂಚಗಟ್ಟಿ- ರಾಮದುರ್ಗ ವಿಧಾನಸಭೆ ಕ್ಷೇತ್ರ, ಬೆಳಗಾವಿ
* ಸೂರಜ್ ನಾಯ್ಕ- ಕುಮಟಾ ವಿಧಾನಸಭೆ ಕ್ಷೇತ್ರ, ಉತ್ತರ ಕನ್ನಡ
* ಜಗದೀಶ ಮೆಟಗುಡ್ಡ- ಬೈಲಹೊಂಗಲ ವಿಧಾನಸಭೆ ಕ್ಷೇತ್ರ, ಬೆಳಗಾವಿ
* ಗಜಾನನ ರೆಹಮಾನಿ- ಖಾನಾಪುರ ವಿಧಾನಸಭೆ ಕ್ಷೇತ್ರ, ಬೆಳಗಾವಿ
* ತಿಪ್ಪೇಸ್ವಾಮಿ- ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರ, ಚಿತ್ರದುರ್ಗ

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಅವರಿಗೆ ಜಮಖಂಡಿ ಕ್ಷೇತ್ರದಲ್ಲಿ ಟಿಕೆಟ್ ನಿರೀಕ್ಷಿಸಲಾಗಿತ್ತು. ಆದರೆ ಪಕ್ಷ ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡ ಸಂಗಮೇಶ ನಿರಾಣಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಖಚಿತ ಎನ್ನಲಾಗಿತ್ತು. ಆದರೆ, ಸಂಸದ ಶ್ರೀರಾಮುಲು ಅವರಿಗೆ ವರಿಷ್ಠರು ಮಣೆ ಹಾಕಿರುವುದು ತಿಪ್ಪೇಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಶಿಗ್ಗಾಂವ್ ಕ್ಷೇತ್ರವನ್ನು ಹತ್ತು ವರ್ಷದ ಬಳಿಕ ಬಿಟ್ಟುಕೊಡುವುದಾಗಿ ಶಾಸಕ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ನಡುವೆ ಒಪ್ಪಂದವಾಗಿತ್ತು. ಮಾಜಿ ಶಾಸಕ ರಾಜಶೇಖರ ಸಿಂಧೂರ, ಶ್ರೀಕಾಂತ ದುಂಡಿಗೌಡರ ಮತ್ತು ಶಶಿಧರ ಎಲಿಗಾರ ಕೂಡ ಇಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಬೊಮ್ಮಾಯಿ ಅವರಿಗೇ ಮತ್ತೆ ಟಿಕೆಟ್ ನೀಡಿದ್ದರಿಂದ ಸಿಟ್ಟಿಗೆದ್ದ ಸೋಮಣ್ಣ ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

English summary
Karnataka Bjp expelled its 15 members from the party's all responsibilities for the next year as they are contesting against party's candidates as independents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X