ನನ್ನ ಹೇಳಿಕೆ ತಿದ್ದಿದ ಬಿಜೆಪಿಗೆ ನಾಚಿಕೆ ಆಗಬೇಕು: ಕುಮಾರಸ್ವಾಮಿ ಆಕ್ರೋಶ

Recommended Video

      Surgical Strike 2: ನನ್ನ ಹೇಳಿಕೆ ತಿದ್ದಿದ ಬಿಜೆಪಿಗೆ ನಾಚಿಕೆ ಆಗಬೇಕು: ಕುಮಾರಸ್ವಾಮಿ ಆಕ್ರೋಶ

      ಬೆಂಗಳೂರು, ಮಾರ್ಚ್‌ 02: ಪಾಕಿಸ್ತಾನದ ಉಗ್ರಗಾಮಿ ಅಡ್ಡೆಗಳ ಮೇಲೆ ಭಾರತ ವಾಯುದಾಳಿ ನಡೆಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಬಿಜೆಪಿಗರ ಸಿಟ್ಟು ಕೆರಳಿಸಿದೆ. ಆದರೆ ಇದನ್ನು ಕುಮಾರಸ್ವಾಮಿ ಇದನ್ನು ಅಲ್ಲಗಳೆದಿದ್ದು, ನನ್ನ ಹೇಳಿಕೆಯನ್ನು ತಿದ್ದಲಾಗಿದೆ ಎಂದಿದ್ದಾರೆ.

      ಪಾಕಿಸ್ತಾನದ ಮೇಲೆ ಬಾಂಬ್ ಹಾಕಿದ್ದನ್ನು ಸಿಹಿ ಹಂಚಿ ಸಂಭ್ರಮಿಸುವ ಕಾರ್ಯ ಎರಡು ಕೋಮುಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಬಹುದು, ಈ ಅವಕಾಶವನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

      ನನ್ನ ವಿಡಿಯೋವನ್ನು ತಿದ್ದಿ, ಜನರಿಗೆ ತಪ್ಪು ಸಂದೇಶ ನೀಡಲು ಹೊರಟಿರುವ ರಾಜ್ಯ ಬಿಜೆಪಿಗೆ ನಾಚಿಕೆ ಆಗಬೇಕು, ನಾನು ಮಾತನಾಡಿರುವ ವಿಡಿಯೋವನ್ನು ತಿದ್ದಿ, ತಿರುಚಿ ಪ್ರಕಟಿಸಲಾಗಿದೆ. ನಾನು ಹೇಳಿದ್ದು 'ಬಿಜೆಪಿಯ ಮುಖಂಡರು ತಾವೇ ದಾಳಿ ಮಾಡಿದಂತೆ ಹೇಳುತ್ತಿದ್ದಾರೆ, ಸೈನಿಕರ ಶೌರ್ಯವನ್ನು ಅವರು ಬದಿಗೆ ಸರಿಸಿದ್ದಾರೆ' ಎಂದಿದ್ದೆ, ಎಂದು ಎಚ್‌ಡಿಕೆ ಸ್ಪಷ್ಟನೆ ನೀಡಿದ್ದಾರೆ.

      'ರಾಜ್ಯ ಬಿಜೆಪಿ ಮತ್ತು ಪಾಕಿಸ್ತಾನ ಒಂದೇ'

      ಈ ಘಟನೆ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಹೇಳಿಕೆಗಳನ್ನು ತಿರುಚಿ ಜನರ ಮುಂದೆ ಇಡುವುದು ಬಹಳ ಅಪಾಯಕಾರಿ, ನೀವು ಮಾಡಿರುವ ಕಾರ್ಯ ಪಾಕಿಸ್ತಾನದ ಮಾಡಿರುವ ಕೆಲಸಕ್ಕೆ ಹೋಲಿಕೆ ಆಗುತ್ತಿದೆ. ಅವರೂ ನಿಮ್ಮಂತೆ ಅಭಿನಂದನ್ ಅವರ ವಿಡಿಯೋ ಮಾಡಿ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ. ಎಂದು ಬಿಜೆಪಿಯ ಕಾಲೆಳೆದಿದ್ದಾರೆ.

      Array

      'ಬಿಜೆಪಿಯ ಕೆಟ್ಟ ರಾಜಕಾರಣದ ಬಗ್ಗೆ ಹೇಳಿದ್ದೇನೆ'

      ನಾನು ಬಿಜೆಪಿಯ ಕೆಟ್ಟ ರಾಜಕಾರಣದ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಭಾರತೀಯ ಸೇನೆಯ ಬಗ್ಗೆಯಾಗಲಿ ಅವರು ಉಗ್ರರ ಮೇಲೆ ನಡೆಸಿದ ಕಾರ್ಯಾಚರಣೆಯ ಬಗ್ಗೆ ಆಗಲಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಹೇಳಿಕೆಯನ್ನು ತಿದ್ದಿ, ಸಂದರ್ಭವನ್ನು ತಿರುಚಿ ಜನರ ಮುಂದೆ ಬಿಜೆಪಿ ಇಟ್ಟಿದೆ. ಪಾಕಿಸ್ತಾನವೂ ಅದೇ ಕೆಲಸ ಮಾಡುತ್ತಿದ್ದು, ಬಿಜೆಪಿಗೂ ಪಾಕಿಸ್ತಾನಕ್ಕೂ ಹೆಚ್ಚೇನು ವ್ಯತ್ಯಾಸವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

      ಬಿಜೆಪಿ ಮುಖಂಡರ ತೀವ್ರ ವಿರೋಧ

      ಕುಮಾರಸ್ವಾಮಿ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿಯ ಹಲವು ಮುಖಂಡರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಅವರುಗಳು ಈ ಬಗ್ಗೆ ತಮ್ಮ ಫೇಸ್‌ಬುಕ್ ಟ್ವಿಟ್ಟರ್ ಖಾತೆಗಳನ್ನು ಅಭಿಪ್ರಾಯ ದಾಖಲಿಸಿದ್ದಾರೆ.

      ಸಾಮಾಜಿಕ ಜಾಲತಾಣದಲ್ಲಿ ವಿರೋಧ

      ಕುಮಾರಸ್ವಾಮಿ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದ್ದು, ಹಲವರು ಹಲವು ಬಗೆಯ ಕಮೆಂಟ್ ಮಾಡಿದ್ದಾರೆ. ಆದರೆ ಅದು ತಿದ್ದಿದ ಹಾಗೂ ತಿರುಚಿದ ವಿಡಿಯೋ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+