ಬಿಜೆಪಿ ಭಿನ್ನಮತ: ಶಶೀಲ್ ನಮೋಶಿ, ಬೇಳೂರು ಬೆಂಬಲಿಗರಿಂದ ಪ್ರತಿಭಟನೆ

Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಕಳೆದ 24 ಗಂಟೆಗಳಲ್ಲಿ ಕಾಂಗ್ರೆಸ್ ಬಂಡಾಯ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಕರ್ನಾಟಕದ ಜನರು ಈಗ ಬಿಜೆಪಿ ನಾಯಕರ ಪ್ರತಿಭಟನೆಗಳನ್ನು ನೋಡುತ್ತಿದ್ದಾರೆ. ಇದೀಗ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಒಂದಷ್ಟು ಬಿಜೆಪಿ ನಾಯಕರ ಬೆಂಬಲಿಗರು ಬೀದಿಗೆ ಇಳಿದಿದ್ದಾರೆ.

ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಶಶೀಲ್ ಜಿ ನಮೋಜಿ ಇಂದು ಪತ್ರಿಕಾಗೋಷ್ಠಿಯಲ್ಲಿ ಗಳಗಳನೆ ಅತ್ತ ಪ್ರಸಂಗ ನಡೆದಿತ್ತು. ಇದೀಗ ಇಂದು ರಾತ್ರಿ ಕಲಬುರಗಿಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

BJP dissidents: Shashil Namoshi, Beluru Gopalakrishna supporters starts protest

ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಂಚಿ ಟಿಕೆಟ್ ಕೈತಪ್ಪಿದ್ದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕಲಬುರಗಿ ದಕ್ಷಿಣದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಶೀಲ್ ನಮೋಶಿ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಖಮರುಲ್ ಇಸ್ಲಾಂ ಪ್ರತಿನಿಧಿಸುತ್ತಿದ್ದ ಕಲಬುರಗಿ ಉತ್ತರದಿಂದ ಟಿಕೆಟ್ ಕೇಳಿದ್ದರು.

"ನಾನು ಪಕ್ಷಕ್ಕಾಗಿ ಬಹಳ ದೀರ್ಘ ಕಾಲದಿಂದ ಕೆಲಸ ಮಾಡಿದ್ದೇನೆ. ನನ್ನ ಹೆಸರು ಇಲ್ಲದಿರುವುದು ನೋಡಿ ನನಗೆ ಆಘಾತವಾಯಿತು. ಏನಾಯಿತು ನನಗೆ ಗೊತ್ತಿಲ್ಲ. ಆದರೆ ಇದರಿಂದ ನನಗರ ಬಹಳ ನೋವಾಗಿದೆ," ಎಂದು ಅವರು ಹೇಳಿದ್ದಾರೆ.

ಬೇಳೂರು ಬೆಂಬಲಿಗರಿಂದ ದಾಂಧಲೆ

ಇನ್ನೊಂದು ಕಡೆ ಇಂದು ಬಿಡುಗಡೆಯಾದ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಸಾಗರ ಕ್ಷೇತ್ರದಲ್ಲಿ ಹರತಾಳು ಹಾಲಪ್ಪನವರಿಗೆ ಟಿಕೆಟ್ ದೊರೆತ ಹಿನ್ನಲೆಯಲ್ಲಿ ಬೇಳೂರು ಗೋಪಾಲಕೃಷ್ಣ ಬೆಂಬಲಿಗರ ಆಕ್ರೋಶ ಮುಗಿಲು ಮುಟ್ಟಿದೆ.

ಹಾಲಪ್ಪನವರ ಬೆಂಬಲಿಗ ವಿನಾಯಕ್ (35) ಎಂಬುವರ ಮೇಲೆ ಸಾಗರದ ಹೋಟೆಲ್ ಒಂದರ ಬಳಿ ಕೊಲೆ ಯತ್ನ ಕೂಡ ನಡೆದಿದೆ.

BJP dissidents: Shashil Namoshi, Beluru Gopalakrishna supporters starts protest

ಕಳೆದ ಚುನಾವಣೆಯಲ್ಲಿ ಹಾಲಪ್ಪ ಸೊರಬದಿಂದ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಇಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದಿದ್ದು ಟೆಕೆಟ್ ಪಡೆದಿದ್ದಾರೆ. ಹಾಗಿ ಹಾಲಪ್ಪ ಸೊರಬಕ್ಕೆ ವಲಸೆ ಬಂದಿದ್ದಾರೆ.
ಹೀಗಾಗಿ ಬೇಳೂರು ಗೋಪಾಲಕೃಷ್ಣ ಟಿಕೆಟ್ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಆಕ್ರೋಶಿತರಾಗಿದ್ದಾರೆ.

ಸಾಗರದ ಹೋಟೆಲ್ ಒಂದರ ಬಳಿ ವಿನಾಯಕ್ (55) ಬೈಕ್ ನಲ್ಲಿ ತೆರಳುವಾಗ ಬೇಳೂರು ಗೋಪಾಲಕೃಷ್ಣನವರ ಬೆಂಬಲಿಗರು ಅಡ್ಡಕಟ್ಟಿ ಕಲ್ಲಿನಿಂದ ಜಜ್ಜಿ ಕೊಲೆಯತ್ನಕ್ಕೆ ಮುಂದಾಗಿರುವುದಾಗಿ ತಿಳಿದುಬಂದಿದೆ. ತಲೆ ಹಾಗೂ ತುಟಿಗೆ ತೀವ್ರ ಪೆಟ್ಟಾಗಿರುವುದರಿಂದ ಅವರನ್ನ ಸಾಗರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Elections: Supporters of BJP's Shashil Namoshi staged protest after he was not given a ticket in Kalaburagi Uttar. Belur Gopalakrishna supporters also attacked Haratalu Halappa supporter in Sagara despite of not getting BJP ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ