ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಮುಂದುವರೆಸಿದ ಬಿಜೆಪಿ: 'ಉಡ್ತಾ ಬೆಂಗಳೂರು'

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದರೂ ಸಹ ರಾಜಕೀಯ ಪಕ್ಷಗಳ ಕೆಸರೆರಚಾಟ ಇನ್ನು ನಿಂತಿಲ್ಲ. ಕಾಂಗ್ರೆಸ್‌ ಪಕ್ಷವನ್ನು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಇಷ್ಟು ದಿನ ತಣ್ಣಾಗಿದ್ದಂತೆ ಕಾಣುತ್ತಿದ್ದ ವಿರೋಧ ಪಕ್ಷಗಳು ಈಗ ಫುಲ್‌ ಎಕ್ಟಿವ್‌ ಆಗಿವೆ. ಈಗೇನಿದ್ದರೂ ಸಾಮಾಜಿಕ ತಾಣದಲ್ಲಿ ಪೋಸ್ಟರ್‌ ವಾರ್‌ ಬಿರುಸು ಪಡೆದಿದೆ.

ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್‌ ವಿರುದ್ಧವೂ ಸಹ ಒಟ್ಟಾಗಿ ಮುಗಿ ಬೀಳುತ್ತಿವೆ. ಜೆಡಿಎಸ್‌ ಪಕ್ಷ ನಿನ್ನೆ ಸಿಡಿ ಶಿವು ಎಂಬ ಹೆಸರಿನ ಎರಡು ಪೋಸ್ಟರ್‌ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೆ ಬಿಜೆಪಿ ಸಹ ಪೋಸ್ಟರ್‌ ವಾರ್‌ ಮುಂದುವರೆಸಿದೆ.

BJP continues poster war against state government Udta Bangalore

ಸರ್ಕಾರದ ವಿರುದ್ಧ ಆಕ್ರೋಶ

ಜೆಡಿಎಸ್‌ ಪಕ್ಷ ಸರ್ಕಾರದಲ್ಲಿರುವ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್‌ ಮಾಡಿ ಪೋಸ್ಟ್ ವಾರ್‌ ನಡೆಸಿದರೆ, ಬಿಜೆಪಿ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದೆ. ಅಸಲಿಗೆ ಬಿಜೆಪಿ ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಮೂಲಕ ಬಿಜೆಪಿ ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆಕ್ರೋಶವನ್ನು ಹೊರ ಹಾಕಿದೆ.

ಉಡ್ತಾ ಬೆಂಗಳೂರು

ರಾಜ್ಯದಲ್ಲಿ ಇರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಈ ಪೋಸ್ಟರ್‌ ಬಿಂಬಿಸುವಂತಿದೆ. ಈ ಪೋಸ್ಟರ್‌ನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ತೋರಿಸಲಾಗಿದೆ.

BJP continues poster war against state government Udta Bangalore

ಬೆಂಗಳೂರಿನ ಹೊರ ಒಲಯದಲ್ಲಿ ಇತ್ತೀಚಿಗೆ ನಡೆದಿದ್ದ ರೇವ್‌ ಪಾರ್ಟಿ, ಸಖತ್‌ ಸದ್ದು ಮಾಡಿತ್ತು. ಇದನ್ನೇ ಗುರಿಯಾಗಿಸಿ ಬಿಜೆಪಿ ತನ್ನ ಆಕ್ರೋಶವನ್ನು ಹೊರ ಹಾಕಿದೆ. ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ತೆಲುಗು ನಟಿಯರು ಭಾಗೀಯಾಗಿದ್ದಾರೆ ಎಂಬ ಬಗ್ಗೆ ವರದಿಗಳು ಆಗಿದ್ದವು. ಇದರ ಬೆನ್ನಲ್ಲೆ ಬಿಜೆಪಿ ಪೋಸ್ಟರ್‌ ಜನರ ಚಿತ್ತ ಕದ್ದಿದೆ.

ಜಾಹೀರಾತು ವಾರ್

ಚುನಾವಣೆಗಳು ಆರಂಭಕ್ಕೂ ಮುನ್ನವೆ ಕಾಂಗ್ರೆಸ್‌ ಸಹ ಇದೇ ತಂತ್ರವನ್ನು ಅನುಸರಿಸಿ ಜಾಹೀರಾತು ವಾರ್‌ ಆರಂಭಿಸಿತ್ತು. ಅಲ್ಲದೆ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಆರಂಭದಲ್ಲಿ ಕಾಂಗ್ರೆಸ್‌ ಚೊಬ್ಬಿನ ಜಾಹೀರಾತನ್ನು ನೀಡಿತ್ತು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿದ್ದು ಬರೀ ಚೊಂಬಿ ಎಂಬತೆ ಈ ಜಾಹೀರಾತನ್ನು ಬಿಂಬಿಸಲಾಗಿತ್ತು. ಅಲ್ಲದೆ ಇದೇ ಜಾಹೀರಾತಿನ ಮುಂದುವರೆದ ಭಾಗವಾಗಿ ಖಾಲಿ ಚಿಪ್ಪನ್ನು ಜಾಹೀರಾತಿನಲ್ಲಿ ನೀಡಿತ್ತು. ಕಾಂಗ್ರೆಸ್ ಸರ್ಕಾರದ ಈ ಪ್ರಯತ್ನವೂ ಸಹ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿಲ್ಲ ಎಂಬುದನ್ನು ಸೂಚಿಸಲು ಆಗಿತ್ತು.

ಕಾಂಗ್ರೆಸ್ ಮಾಡಿದ ತಂತ್ರವನ್ನೇ ಬಿಜೆಪಿ ಸಹ ಅನುಸರಿಸಿ ಚುನಾವಣೆಗಳಿಗೆ ಮುನ್ನ ಹಲವು ಜಾಹೀರಾತನ್ನು ನೀಡಿತ್ತು. ಎರಡನೇ ಹಂತದ ಚುನಾವಣೆಗಳು ಆರಂಭವಾಗುವ ಹೊತ್ತಗೆ ಪೆನ್‌ ಡ್ರೈವ್‌ ಪ್ರಕರಣ ರಾಜ್ಯದ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ವೈದ್ಯರು ಪರದಾಡುತ್ತಿರುವ ಫೋಟೋವನ್ನು ಸಹ ಬಿಜೆಪಿ ಪೋಸ್ಟ್ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+