ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗೆಲ್ಲಿಸಿ ದೇಶ, ಮಹಿಳೆ ರಕ್ಷಿಸಿ : ಶೋಭಾ

By Mahesh
|
Google Oneindia Kannada News

ತರೀಕೆರೆ, ಮಾ.18: ರಾಷ್ಟ್ರೀಯ ಭದ್ರತೆ, ಮಹಿಳೆಯರ ಸಬಲೀಕರಣ, ಆರ್ಥಿಕ ಪ್ರಗತಿ ಈ ಚುನಾವಣೆಯ ಮುಖ್ಯ ವಿಷಯಗಳಾಗಿವೆ. ಇವುಗಳನ್ನು ಸಾಧ್ಯವಾಗಿಸಬೇಕಾದರೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲೇಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಮಸ್ಯೆಗಳಾದ ಅಡಿಕೆ ಬೆಳೆಗಾರರ ಸಮಸ್ಯೆ, ಮೀನುಗಾರರ ಸಮಸ್ಯೆ, ಕಾಫಿ ಸಮಸ್ಯೆ, ನಕ್ಸಲ್ ಸಮಸ್ಯೆ ಹಾಗೂ ವಿವಿಧ ಭೌಗೋಳಿಕ ಸಮಸ್ಯೆಗಳಿಗೆ ದನಿ ಎತ್ತಬೇಕಾದರೆ ಮೋದಿ ಅವರ ಗೆಲುವು ಅನಿವಾರ್ಯ. ಬಿಜೆಪಿ ಅಧಿಕರಕ್ಕೆ ತರಬೇಕಿದೆ ಎಂದು ಎಂಜಿ ಹಾಲ್ ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಯುಪಿಎನಿಂದ ಅನ್ಯಾಯ: ಕರ್ನಾಟಕಕ್ಕೆ 2000 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಛತ್ತೀಸ್ ಗಢದಲ್ಲಿ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳಿ ಕಲ್ಲಿದ್ದಲು ಪೂರೈಕೆ ಮಾಡದೆ ರಾಜ್ಯಕ್ಕೆ ದ್ರೋಹ ಮಾಡಿದೆ.[ಸಂಸದ ಜೆಪಿ ಹೆಗ್ಡೆ ಪಾದಯಾತ್ರೆ]

ಅಡಿಕೆ ನಿಷೇಧದ ಭೀತಿಯನ್ನು ರೈತರಲ್ಲಿ ತುಂಬಿದ ಸರ್ಕಾರದ ವಿರುದ್ಧ ಜನ ಪ್ರತಿನಿಧಿಗಳು ದನಿ ಎತ್ತದೇ ಸುಮ್ಮನಿರುವುದು ಏಕೆ? ಸುಳ್ಳುಗಳನ್ನು ಹೇಳಿಕೊಂಡು ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳದೆ ಮೀನುಗಾರರ ಸಮಸ್ಯೆಯಾಗಲಿ ನಕ್ಸಲರ ಸಮಸ್ಯೆಯಾಗಲಿ ಬಗರ್ ಹುಕುಂ ಅಕ್ರಮ ಸಾಗುವಳಿ ಮಾಡಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡಿದ್ದು ಸಂಸದರ ಸಾಧನೆ ಎಂದು ಶೋಭಾ ವ್ಯಂಗ್ಯವಾಡಿದರು.

ಗ್ರಾಮೀಣಾಭಿವೃದ್ಧಿಗೆ ವಿಕೇಂದ್ರಿಕರಣ ವ್ಯವಸ್ಥೆ

ಗ್ರಾಮೀಣಾಭಿವೃದ್ಧಿಗೆ ವಿಕೇಂದ್ರಿಕರಣ ವ್ಯವಸ್ಥೆ

ಹೋರಾಟ ಹಿನ್ನೆಲೆಯಿಂದ ಬಂದಿರುವ ನಾನು ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸುವ ಸಂಕಲ್ಪ ಹೊಂದಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ವಿಕೇಂದ್ರಿಕರಣ ವ್ಯವಸ್ಥೆಗೆ ಸಾಕಷ್ಟು ಅನುದಾನ ಬರುವಂತೆ ಕಾಯ್ದೆ ತಂದು ಕ್ರಮ ಕೈಗೊಂಡಿದ್ದೇನೆ.

ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಪರಿಹಾರ

ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಪರಿಹಾರ

ಎಂಡೋ ಸಲ್ಫಾನ್ ನಿಂದ ರಬ್ಬರ್ ಬೆಳೆಯುವ ಪ್ರದೇಶಗಳಲ್ಲಿ ಆದ ಮಕ್ಕಳ ಅಂಗವಿಕಲತೆ ಹೆಣ್ಣು ಮಕ್ಕಳು ಬಂಜೆರಾಗಿದ್ದು ಬದುಕು ಸಾಗಿಸಲು ಸಂಕಷ್ಟದಲ್ಲಿದ್ದಾಗ ಅವರಿಗೆ ಮಾಸಾಶಾನ ಮುಂತಾದ ಆರ್ಥಿಕ ನೆರವು ಒದಗಿಸಲಾಗಿದೆ.

ಮಂಗಳಮುಖಿಯರಿಗೆ ಹಕ್ಕು ನೀಡಲಾಗಿದೆ

ಮಂಗಳಮುಖಿಯರಿಗೆ ಹಕ್ಕು ನೀಡಲಾಗಿದೆ

ಮಂಗಳಮುಖಿಯರು ಯಾವುದೇ ಹಕ್ಕನ್ನು ಪಡೆಯದೇ ಒದ್ದಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಸಮಾಜಮುಖಿಯರನ್ನಾಗಿ ಮಾಡಿ ರೇಷನ್ ಕಾರ್ಡ್ ಹಾಗೂ ಓಟು ಹಾಕುವ ಹಕ್ಕನ್ನು ನೀಡುವಂತೆ ನೋಡಿಕೊಂಡ ಹೆಮ್ಮೆಯಿದೆ.

ರಾಷ್ಟ್ರದ ಹಿತದೃಷ್ಟಿಗಾಗಿ ಚುನಾವಣೆ

ರಾಷ್ಟ್ರದ ಹಿತದೃಷ್ಟಿಗಾಗಿ ಚುನಾವಣೆ

ಈ ಚುನಾವಣೆ ರಾಷ್ಟ್ರದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆ. ಮಹಿಳೆಯರ ಸಬಲೀಕರಣ, ಆರ್ಥಿಕ ಪ್ರಗತಿ ಈ ಚುನಾವಣೆಯ ಮುಖ್ಯ ವಿಷಯಗಳಾಗಿವೆ. ಇವುಗಳನ್ನು ಸಾಧ್ಯವಾಗಿಸಬೇಕಾದರೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲೇಬೇಕು

English summary
Udupi-Chikmagalur BJP candidate Shobha Karandlaje assured women empowerment will be achieved in the constituency. Vote for Narendra Modi to secure the Nation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X