By Election: ಸಿಪಿ ಯೋಗೇಶ್ವರ ಪರ ಬಿಜೆಪಿ ಗಾಳಿ, ಎಚ್‌ಡಿ ಕುಮಾರಸ್ವಾಮಿಗೆ ಮುಳುವು ಗ್ಯಾರೆಂಟಿ!
ಬೆಂಗಳೂರು, ಅಕ್ಟೋಬರ್ 18: ಉಪ ಚುನಾವಣೆ ಘೋಷಣೆ ಆದ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚನ್ನಪಟ್ಟಣ ಪ್ರಮುಖ ರಾಜಕೀಯ ಶಕ್ತಿ ಕೇಂದ್ರವಾಗುವುದರಲ್ಲಿ ಎರಡು ಮಾತಿಲ್ಲ. ಮೊದಲಿನಿಂದಲೂ ಚನ್ನಪಟ್ಟಣ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಬಿಜೆಪಿಯ ಸಿಪಿ ಯೋಗೇಶ್ವರ ಅವರು ಟಿಕೆಟ್ ಪಡೆಯುವಲ್ಲಿ ಭಾರೀ ಪ್ರಭಾವ ಬೀರಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಬಿಜೆಪಿ ಗಾಳಿ ಯೋಗೇಶ್ವರ ಅವರತ್ತ ಬೀಸುತ್ತಿದೆ. ಅಂದರೆ ಅನೇಕ ನಾಯಕರು ಸಿಪಿವೈಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಮಾಡನಾಡುತ್ತಿದ್ದಾರೆ.
ಹೌದು, ಬಿಜೆಪಿ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಬೆನ್ನಲ್ಲೆ, ಸಂಸದ ಜಗದೀಶ್ ಶೆಟ್ಟರ್ ಅವರು, ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಅನ್ನು ಸಿಪಿ ಯೋಗೇಶ್ವರ ಅವರಿಗೆ ನೀಡುವಂತೆ, ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮೈತ್ರಿ ಪಕ್ಷ ಜೆಡಿಎಸ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಆಟ ನಡೆಯದಂತೆ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡತೊಡಗಿದೆ.

ಏಕೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿಗೂ ಮೊದಲು ಕಾಂಗ್ರೆಸ್ ಮಾತ್ರವಲ್ಲದೇ, ಬಿಜೆಪಿಯು ಹಳೇ ಮೈಸೂರು ಭಾಗದಲ್ಲಿ ಕಣ್ಣಿಟ್ಟಿತ್ತು. ಇದೀಗ ಆ ಕನಸು ನನಸು ಮಾಡಿಕೊಳ್ಳಲು ಒಳಗೊಳಗೇ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ ಅಂತಲೂ ವಿಶ್ಲೇಷಣೆ ಕೇಳಿ ಬಂದಿದೆ. ಹಾಗಾದರೆ ಸಿಪಿವೈ ಪರ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಕ್ಷೇತ್ರದಲ್ಲಿ ಯೋಗೇಶ್ವರಗೆ ಹಿಡಿತ ಇದೆ
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ ಅವರು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗೂ ಅವರ ಕೊಡುಗೆ ಇದೆ. ಕ್ಷೇತ್ರದಲ್ಲಿ ಅವರಿಗೆ ಹಿಡಿತ ಇದೆ ಎಂದ ಅವರು, ಈ ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ಇದಷ್ಟೇ ಅಲ್ಲದೇ ಸಿಪಿ ಯೋಗೇಶ್ವರ ಅವರು, ಚೆನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು. ಬಿಜೆಪಿ ಜೆಡಿಎಸ್ ಗೆಲ್ಲಲು ಅವರಿಗೆ ಟಿಕೆಟ್ ನೀಡದರೆ ಅನುಕೂಲವಾಗಲಿದೆ. ಕಾಂಗ್ರೆಸ್ ವಿರುದ್ಧ ಗೆಲ್ಲುವ ಶಕ್ತಿ ಅವರಿಗೆ ಇದೆ. ನಾವು ಏನೇ ಹೇಳಿದರು, ಕೊನೆಗೆ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಮೂರು ಉಪ ಚುನಾವಣೆ ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಶಿಗ್ಗಾವಿ ಟಿಕೆಟ್: ಶೆಟ್ಟರ್ ಪುತ್ರನ ಹೆಸರು ಮುನ್ನೆಲೆಗೆ!
ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಸಹ ಸೂಕ್ತ ಅಭ್ಯರ್ಥಿ ಹಾಕುತ್ತಾರೆ. ಆದರೆ ಸಂಡೂರಿನಲ್ಲಿ ಸಮಬಲ ಫೈಟ್ ಇದ್ದು. ಚನ್ನಪಟ್ಟಣ ಮತ್ತು ಶಿಗ್ಗಾವಿಯಲ್ಲಿ ಗೆಲವು ನಮ್ಮದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರಿನಲ್ಲಿ ಹೆಚ್ಚು ಗಮನ ಹರಿಸಿ, ಒಟ್ಟಾಗಿ ಉಪಚುನಾವಣೆ ಎದುರಿಸುವ ಜೊತೆಗೆ ಮೂರು ಕ್ಷೇತ್ರಗಳನ್ನು ಗೆಲ್ಲಬೇಕು. ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ನನ್ನ ಮಗನ ಹೆಸರು ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು. ಯಾಕೆ ಪುತ್ರನ ಹೆಸರು ಬಂದು ಎಂಬುದು ನನಗೆ ಗೊತ್ತಿಲ್ಲ. ನಾನು ಆ ಬಗ್ಗೆ ಎಲ್ಲಿಯೂ ಚರ್ಚೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೋಶಿಯವರೇ ಉತ್ತರಿಸಬೇಕು: ಶೆಟ್ಟರ್
ಇನ್ನೂ ಟಿಕೆಟ್ ನೀಡುವ ವಿಚಾರದಲ್ಲಿ ಒಂದು ವೇಳೆ ನಾಯಕರಿಗೆ ಅಸಮಾಧಾನವಾದರೆ ಅದನ್ನು ಶಮನ ಮಾಡಲು, ಪಕ್ಷವನ್ನು ಸೂಕ್ತವಾಗಿ ಮುನ್ನಡೆಸಲು ಹೈಕಮಾಂಡ್ ಇದೆ ಎಂದರು. ಇನ್ನೂ ಲೋಕಸಭಾ ಟಿಕೆಟ್ ವಿಚಾರದಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನ ಮೇಲೆ ಕೇಳಿ ಬಂದಿದೆ. ಇದಕ್ಕೆ ಅವರೆ ಉತ್ತರಿಸಬೇಕು ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications