ಕರ್ನಾಟಕ ಬಿಜೆಪಿ ಜಿಲ್ಲೆಗಳ ಪ್ರಭಾರಿಗಳ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 17 : ಕರ್ನಾಟಕ ರಾಜ್ಯ ಬಿಜೆಪಿ ಘಟಕ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿದೆ. ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರನ್ನು ಸಹ ನೇಮಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನಾತ್ಮಕ ಜಿಲ್ಲೆಗಳ ಪ್ರಭಾರಿಗಳು ಮತ್ತು ಸಹ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪಕ್ಷ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಂಸದರು, ಹಾಲಿ ಶಾಸಕರು, ಮಾಜಿ ಶಾಸಕರಿಗೆ ಪಕ್ಷ ಸಂಘಟನೆಯಲ್ಲಿ ಅವಕಾಶ ನೀಡಲಾಗಿದೆ. ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪ್ರಭಾರಿಗಳ ಜೊತೆಗೆ ಪ್ರಕೋಷ್ಠಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಲಾಗಿದೆ.
ಮಾಜಿ ಸಚಿವ ಎ. ಮಂಜು ಅವರನ್ನು ಮಂಡ್ಯ ಜಿಲ್ಲೆಯ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ. ಎನ್. ಜೀವರಾಜ್ ಅವರನ್ನು ಶಿವಮೊಗ್ಗಕ್ಕೆ ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಭಾರಿಗಳ ಪಟ್ಟಿ
* ಬಾಗಲಕೋಟೆ - ಶಾಸಕ ಅಭಯ ಪಾಟೀಲ
* ಉಡುಪಿ - ಉಮಾನಾಥ ಕೋಟ್ಯಾನ್
* ಯಾದಗಿರಿ - ಭಗವಂತ ಖೂಬಾ
* ತುಮಕೂರು - ಪ್ರತಾಪ್ ಸಿಂಹ

ಯಾವ ಜಿಲ್ಲೆಗೆ ಯಾರು ಪ್ರಭಾರಿ
* ಬೆಂಗಳೂರು ಗ್ರಾಮಾಂತರ - ಪಿ. ಸಿ. ಮೋಹನ್
* ಬೀದರ್ - ಮಾಲೀಕಯ್ಯ ಗುತ್ತೇದಾರ್
* ಚಿತ್ರದುರ್ಗ - ತುಳಸಿ ಮುನಿರಾಜು ಗೌಡ
* ಕೋಲಾರ - ಜಯಶಂಕರ ರೆಡ್ಡಿ
Recommended Video

ಸಂಘಟನಾತ್ಮಕ ಜಿಲ್ಲೆಗಳು
* ಬೆಂಗಳೂರು ಉತ್ತರ- ವಿನಯ ಬಿದರೆ
* ಬೆಂಗಳೂರು ಕೇಂದ್ರ - ಕೆ. ಎಸ್. ನವೀನ್
* ಬೆಂಗಳೂರು ದಕ್ಷಿಣ - ಸಂಜೀವ ಮಠಂದೂರು
* ರಾಮನಗರ - ಸತೀಶ್ ರೆಡ್ಡಿ
|
ಸಂಪೂರ್ಣ ಪಟ್ಟಿ ಇಲ್ಲಿದೆ
ಬಿಜೆಪಿ ಕರ್ನಾಟಕ ಬಿಡುಗಡೆ ಮಾಡಿರುವ ಸಂಘಟನಾತ್ಮಕ ಜಿಲ್ಲೆಗಳ ಪ್ರಭಾರಿಗಳು / ಸಹ ಪ್ರಭಾರಿಗಳ ಪಟ್ಟಿ ಇಲ್ಲಿದೆ.












Click it and Unblock the Notifications