ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ಹರಿಸಿ KRS ಖಾಲಿ ಮಾಡಿದ...
ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರವಾಗಿ ಬಿಜೆಪಿ ಗಂಭೀರ ಆರೋಪ ಮಾಡ್ತಿದೆ. ಅದ್ರಲ್ಲೂ ಕಾಂಗ್ರೆಸ್ ಇತರ ಪಕ್ಷಗಳ ಜೊತೆ ಸೇರಿ ಕಟ್ಟಿರುವ ವಿಪಕ್ಷಗಳ ಒಕ್ಕೂಟ 'INDIA' ಬಗ್ಗೆ ಪ್ರಸ್ತಾಪ ಮಾಡಿ, ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಈಗಲೂ ಅಷ್ಟೇ ಅದೇ ಅಸ್ತ್ರವನ್ನು ಕರ್ನಾಟಕ ಬಿಜೆಪಿ ಮತ್ತೆ ಪ್ರಯೋಗ ಮಾಡಿದೆ. ಹಾಗಾದರೆ ಈ ಬಾರಿ ಕರ್ನಾಟಕ ಬಿಜೆಪಿ ಘಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿದ್ದರೆ ಇತ್ತ ಕರ್ನಾಟಕದ ಜಲಾಶಯಗಳು ಖಾಲಿ ಆಗುತ್ತಿವೆ. ಅದರಲ್ಲೂ ಭೀಕರ ಬರದ ಛಾಯೆ ಮಧ್ಯೆ ಕನ್ನಡಿಗರು ನರಳುತ್ತಿರುವ ಈ ಸಂದರ್ಭದಲ್ಲಿ, ತಮಿಳುನಾಡಿಗೆ ಹೆಚ್ಚು ನೀರು ಬಿಡಬೇಕು ಎಂಬ ಆಘಾತವು ಎದುರಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಕಾಂಗ್ರೆಸ್ ಸರ್ಕಾರ ನೀರು ಬಿಡಲು ಡಿಎಂಕೆ ಜೊತೆ ಇರುವ ಮೈತ್ರಿ ಕಾರಣವಾಯ್ತಾ? ಹಾಗಾದರೆ ಈ ಕುರಿತು ಬಿಜೆಪಿ ಏನೆಂದು ಆರೋಪ ಮಾಡುತ್ತಿದೆ? ಮುಂದೆ ಓದಿ.

ಸ್ಟಾಲಿನ್ ಸರ್ಕಾರಕ್ಕೆ ಪೂರ್ಣ ಸಹಕಾರ?
ಹೌದು ಬೆಳಗ್ಗೆಯಿಂದ ಸರಣಿ ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ಇದೇ ರೀತಿ ಈಗ ಮತ್ತೊಂದು ಟ್ವೀಟ್ ಮಾಡಿದ ಬಿಜೆಪಿ, 'ಕದ್ದುಮುಚ್ಚಿ ಕಾವೇರಿಯನ್ನ ತಮಿಳುನಾಡಿಗೆ ಹರಿಸಿ ಕೆಆರ್‌ಎಸ್ ಅನ್ನು ಬರಿದು ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಬೇಕಾಬಿಟ್ಟಿಯಾಗಿ ನೀರು ಬಿಟ್ಟು, ಈಗ ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದೆ' ಎಂದು ಆರೋಪ ಮಾಡಿದೆ ಬಿಜೆಪಿ.
ಹಾಗೇ ಮತ್ತೊಂದು ಗಂಭೀರ ಆರೋಪ ಮಾಡಿರುವ ಕರ್ನಾಟಕ ಬಿಜೆಪಿ, 'ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ, ಸ್ಟಾಲಿನ್ ಸರ್ಕಾರಕ್ಕೆ ಪೂರ್ಣ ಸಹಕಾರವನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸದಿದ್ದರೆ, ರಾಜ್ಯಾದ್ಯಂತ ಬೀದಿಗಿಳಿದು ಬಿಜೆಪಿ ಹೋರಾಟ ಮುಂದುವರಿಸಲಿದೆ.' ಎಂದು ಗಂಭೀರ ಆರೋಪ ಮಾಡಿದೆ. ಈ ಮೂಲಕ ಕಾವೇರಿ ಕಾವಿನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಿಚ್ಚು ಹೊತ್ತಿದೆ.
ಕದ್ದುಮುಚ್ಚಿ ಕಾವೇರಿಯನ್ನು ತಮಿಳುನಾಡಿಗೆ ಹರಿಸಿ, ಕೆ.ಆರ್.ಎಸ್ ಅನ್ನು ಬರಿದು ಮಾಡಿರುವ @INCKarnataka ಸರ್ಕಾರ, ಈಗ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ.
— BJP Karnataka (@BJP4Karnataka) September 24, 2023
ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಬೇಕಾಬಿಟ್ಟಿಯಾಗಿ ನೀರು ಬಿಟ್ಟು, ಈಗ ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದೆ.
ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ,… pic.twitter.com/gUU1lQPhaA
ಬೆಳಗ್ಗೆ ಕೂಡ ಆರೋಪ ಮಾಡಿತ್ತು!
ಕಾವೇರಿ ವಿಚಾರದಲ್ಲಿ ಬಿಜೆಪಿ ಬೆಳಗ್ಗೆಯು ಒಂದು ಆರೋಪ ಮಾಡಿತ್ತು. ಮಂಡ್ಯ ಕಾವೇರಿ ಹೋರಾಟದ ಬಗ್ಗೆ ಮಾತನಾಡಿದ್ದ ಬಿಜೆಪಿ, 'ಈಗಾಗಲೇ ವರ್ಗಾವಣೆ ದಂಧೆಗೆ ಸಿಲುಕಿ ಹೈರಾಣಾಗಿರುವ ವೇತನ ವಿಳಂಬದಿಂದ ಬೇಸತ್ತಿರುವ, ಸಮಾಜಘಾತುಕರನ್ನು ರಕ್ಷಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿರುವ ಪೊಲೀಸರಿಗೆ ಈಗ ಮತ್ತೂ ಒಂದು ಸಂಕಷ್ಟ ಎದುರಾಗಿದೆ' ಎಂದು ಆರೋಪಿಸಿತ್ತು ಕಮಲ ಪಾಳಯ.

ಹೀಗೆ ತನ್ನ ಆರೋಪ ಮುಂದುವರಿಸಿ, 'ನಿಮ್ಮ ಮೈತ್ರಿಕೂಟದ ರಾಜಕೀಯ ಹಿತಾಸಕ್ತಿಗಾಗಿ ಸ್ಟಾಲಿನ್ ನಾಡಿಗೆ ನೀರು ಹರಿಸಿದ್ದರ ಬಿಸಿಯನ್ನು ಪೊಲೀಸರು ನಡುರಸ್ತೆಯಲ್ಲಿ ಅನುಭವಿಸಬೇಕಿದೆ. ಅನ್ನದಾತ ಮತ್ತು ಆರಕ್ಷಕರಿಬ್ಬರನ್ನೂ ಬೀದಿಯಲ್ಲಿ ಬಡಿದಾಡಿಕೊಳ್ಳಲು ಬಿಟ್ಟು ಕಾಂಗ್ರೆಸ್ ಸರ್ಕಾರ ಮಜಾ ನೋಡುತ್ತಿದೆ' ಎಂದು ಗಂಭೀರ ಆರೋಪ ಮಾಡಿತ್ತು ಕರ್ನಾಟಕ ಬಿಜೆಪಿ ಘಟಕ. ಅಲ್ಲದೆ, 'ಪ್ರಜ್ಞಾವಂತಿಕೆ ಮೆರೆಯಬೇಕಾದ ಸ್ಥಾನದಲ್ಲಿ ಕೂತ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನೇ ಪ್ರಜ್ಞಾಹೀನ ಸ್ಥಿತಿಗೆ ತಳ್ಳುತ್ತಿದೆ' ಎಂದು ಆರೋಪಿಸಿತ್ತು ಬಿಜೆಪಿ. ಈಗ ಮತ್ತೊಂದು ಆರೋಪ ಮಾಡಿದೆ.
ಈಗಾಗಲೇ ವರ್ಗಾವಣೆ ದಂಧೆಗೆ ಸಿಲುಕಿ ಹೈರಾಣಾಗಿರುವ, ವೇತನ ವಿಳಂಬದಿಂದ ಬೇಸತ್ತಿರುವ, ಸಮಾಜಘಾತುಕರನ್ನು ರಕ್ಷಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿರುವ ಪೊಲೀಸರಿಗೆ ಈಗ ಮತ್ತೂ ಒಂದು ಸಂಕಷ್ಟ ಎದುರಾಗಿದೆ.
— BJP Karnataka (@BJP4Karnataka) September 24, 2023
ನಿಮ್ಮ ಮೈತ್ರಿಕೂಟದ ರಾಜಕೀಯ ಹಿತಾಸಕ್ತಿಗಾಗಿ ಸ್ಟಾಲಿನ್ ನಾಡಿಗೆ ನೀರು ಹರಿಸಿದ್ದರ ಬಿಸಿಯನ್ನು ಪೊಲೀಸರು ನಡುರಸ್ತೆಯಲ್ಲಿ… https://t.co/Ok1CgtqM7r












Click it and Unblock the Notifications