Karnataka Election: ಲಿಂಗಾಯತ ನಾಯಕರು-ಮತಗಳು ಕೈತಪ್ಪದಂತೆ ಬಿಜೆಪಿ ತಂತ್ರ, ಇನ್‌ಸೈಡ್ ಸ್ಟೋರಿ

ಬೆಂಗಳೂರು, ಏಪ್ರಿಲ್ 20: ಬಿಜೆಪಿಯ ಪಕ್ಷ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಲಿಂಗಾಯತ ಸಮುದಾಯಗಳ ಪಾತ್ರ ಮಹತ್ವದ್ದು. ಆದರೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಲಿಂಗಾಯತ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಬಿಜೆಪಿ ಮಾಸ್ಕರ್ ಪ್ಲಾನ್ ಮಾಡಿದೆ.

ಲಿಂಗಾಯತದಲ್ಲಿ ಹಲವು ಉಪಪಂಗಡಗಳು ಇವೆ. ಲಿಂಗಾಯತ ಸಮುದಾಯದ ನಾಯಕರು ಪಕ್ಷ ಬಿಡದಂತೆ ಮತ್ತು ಆ ಸಮುದಾಯಗಳ ಮತಗಳನ್ನು ಕಳೆದುಕೊಳ್ಳದಂತೆ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಅವರು ಲಿಂಗಾಯತ ಉಪ-ಪಂಗಡಗಳಿಗೆ ಸೇರಿದ ಮಠಾಧೀಶರನ್ನು ಸಂಪರ್ಕಿಸಲು ಯೋಜಿಸಿದ್ದಾರೆ. ಇದು ಪ್ರಬಲ ಸಮುದಾಯದ ನಾಯಕರು ಪಕ್ಷ ತೊರೆಯದಂತೆ ತಡೆಯಲು ಸಾಧ್ಯವಾಗುತ್ತದೆ ಎಂಬುದು ಬಿಜೆಪಿ ಅಭಿಪ್ರಾಯ.

BJP Active With Small-Medium Sized Lingayat Maths: A Strategy To Capture Communitys votes

ಟಿಕೆಟ್ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದಾರೆ. ಹೀಗಾಗಿ ಲಿಂಗಾಯತಗಳ ಬಣಜಿಗ ಉಪಪಂಗಡದ ನಾಯಕರು, ಕಾರ್ಯಕರ್ತರು, ಮತಗಳು ಯಾರ ಪರ, ಅವರ ಒಲವು ಯಾರ ಬಳಿ ಎಂಬುದನ್ನು ಬಿಜೆಪಿ ಖಚಿತ ಪಡಿಸಿಕೊಳ್ಳುತ್ತಿದೆ.

ಲಿಂಗಾಯತ ಮಠಗಳ ಜೊತೆಗೆ ಬಿಜೆಪಿ ಸಂಪರ್ಕ

ಬುಧವಾರ ಕರ್ನಾಟಕಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಬುಧವಾರ ಭೇಟಿ ನೀಡಿದರು. ಅದಾದ ಬಳಿಕ ಅವರು ಸಿದ್ಧಾರೂಢ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹಿಂದಿನಿಂದಲೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಸಾಕಷ್ಟು ಮಠಗಳ ಜೊತೆಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಮಠ-ಮಠಾಧೀಶರ ಭೇಟಿ ಲಾಭವಾಗಬಹುದು ಎಂದು ಬಿಜೆಪಿ ಲೆಕ್ಕಚಾರ ಮಾಡಿದೆ.

BJP Active With Small-Medium Sized Lingayat Maths: A Strategy To Capture Communitys votes

ಬಿಜೆಪಿಯ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಬಿ.ಎಸ್. ಯಡಿಯೂರಪ್ಪ ಅವರು ಅತ್ಯಂತ ಪ್ರಭಾವಿ ಬಣಜಿಗ ನಾಯಕ ಮತ್ತು ಲಿಂಗಾಯತ ಪ್ರಬಲ ವ್ಯಕ್ತಿ ಆಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತ ಸಮುದಾಯದ ನಾಯಕರೇ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ಜಗದೀಶ್ ಶೆಟ್ಟರ್ ಪಕ್ಷಾಂತರದಿಂದ ಸಮುದಾಯಗಳು ಅವರ ಹಿಂದೆ ಹೋಗದಂತೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಲಿಂಗಾಯ ಸೇರಿದಂತೆ ವಿವಿಧ ಸಮುದಾಯದ ಮೇಲೆ ಪ್ರಭಾವ ಬೀರುವ 3,500 ಸಣ್ಣ ಮತ್ತು ಮಧ್ಯಮ ಗಾತ್ರದ ಮಠಗಳಿವೆ. ಯಡಿಯೂರಪ್ಪ ಮತ್ತು ವಸತಿ ಸಚಿವ ವಿ ಸೋಮಣ್ಣ ಅವರ ನಂತರ ಲಿಂಗಾಯತ ಮಠಗಳೊಂದಿಗೆ 2012ರಿಂದ ಆರ್‌ಎಸ್‌ಎಸ್ ಕೂಡ ರಾಜ್ಯಾದ್ಯಂತ ಮಠಾಧೀಶರೊಂದಿಗೆ ತನ್ನದೇ ಆದ ಜಾಲವನ್ನು ವ್ಯಾಪಿಸಿಕೊಂಡಿದೆ.

ಮೀಸಲಾತಿ ಘೋಷಣೆ ಬೆನ್ನಲ್ಲೆ ಬಿಜೆಪಿ ಸಕ್ರಿಯವಾಗಬೇಕಿತ್ತು

ಇತ್ತೀಚೆಗೆ ಬಿಜೆಪಿ ಸರ್ಕಾರವು ಲಿಂಗಾಯತ ಮೀಸಲಾತಿಯನ್ನು ಶೇಕಡಾವಾರು ಹೆಚ್ಚಿಸಿದ ನಂತರ ಕೂಡಲೇ ಸಣ್ಣ-ಮಧ್ಯಮ ಮಟ್ಟದ ಮಠಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಅದು ಶುರುವಾಗಲಿಲ್ಲ. ಬಳಿಕ ಟಿಕೆಟ್ ಘೋಷಣೆ ಬಳಿಕ ಬಂಡಾಯವೆದ್ದು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯುನೂರು ಮಂಜುನಾಥ್ ಪಕ್ಷಾಂತರ ಬಳಿಕ ಹಾನಿ ಕಡಿಮೆಗೆ ಬಿಜೆಪಿ ಮುಂದಾಗಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಣಜಿಗ ಸಮುದಾಯಕ್ಕೆ ಸೇರಿದವರು. ಸವದಿ ಗಾಣಿಗ ಲಿಂಗಾಯತ ಸಮುದಾಯದವರು. ಇವರಿಂದಾಗಿ ಯಡಿಯೂರಪ್ಪನವರು ಲಿಂಗಾಯತ ಪ್ರಮುಖ ನಾಯಕರಾದರೂ ಸಹ ಚುನಾವಣೆ ವೇಳೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ.
ಕಿತ್ತೂರು ಕರ್ನಾಟಕದಲ್ಲಿ ಗೆಲ್ಲುವ ಗುರಿಯಿಟ್ಟುಕೊಂಡಿರುವ ಬಿಜೆಪಿ ಅಲ್ಲಿ ಜಾರಕಿಹೊಳಿ ಅವರ ಪ್ರಭಾವವನ್ನು ತುಸು ನೆಚ್ಚಿಕೊಂಡಿದೆ. ಮೂಲಗಳ ಪ್ರಕಾರ ಪಕ್ಷ ತೊರೆದ ಲಕ್ಷ್ಮಣ ಸವದಿ ಅವರ ಬೆಳಗಾವಿ ವ್ಯಾಪ್ತಿಯಲ್ಲಿ ತುಸು ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಲವಾರು ಲಿಂಗಾಯತ ಉಪಪಂಗಡಗಳಿದ್ದ, ತೇರದಾಳ, ಜಮಖಂಡಿ ಮತ್ತು ಬಾಗಲಕೋಟೆ ಜಿಲ್ಲೆ ಸುತ್ತಮುತ್ತ ಕೆಲವು ಭಾಗಗಳಲ್ಲಿ ನೇಕಾರರು ಪ್ರಭಾವಶಾಲಿ ಸಮುದಾಯಗಳಾಗಿ ಗುರುತಿಸಿಕೊಂಡಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷ ತೊರೆದಿದ್ದಾರೆ. ಸಾದರ ಸಮುದಾಯವು ಹಾವೇರಿ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಪ್ರಭಾವಶಾಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+