ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ವಿಧೇಯಕ ಮಂಡಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಜೂನ್ 08 : ರಾಜ್ಯದಲ್ಲಿ ಜಿಎಸ್ ಟಿ ತೆರಿಗೆ ಜಾರಿಯಾದ ನಂತರ ಪೆಟ್ರೋಲ್, ಡೀಸಲ್, ವಿಮಾನ ಬಳಕೆಯ ಇಂಧನ, ಕಚ್ಛಾತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಮಾರಾಟ ತೆರಿಗೆ ವಿಧಿಸಲು ಅವಕಾಶ ನೀಡುವ ಕರ್ನಾಟಕ ಮಾರಾಟ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.
ಮಾರಾಟ ತೆರಿಗೆ ತಿದ್ದುಪಡಿ ವಿಧೇಯಕ ಮಾರಾಟ ತೆರಿಗೆ (ತಿದ್ದುಪಡಿ) ಮಸೂದೆಯಲ್ಲಿ ಪೆಟ್ರೋಲ್ ಮಾರಾಟ ತೆರಿಗೆಯನ್ನು ಶೇ.30 ರಿಂದ ಶೇ.35ಕ್ಕೆ ಏರಿಸಲು ಮತ್ತು ನಾಲ್ಕರಿಂದ ಐದು ಪ್ರತಿಶತದಷ್ಟು ಕಚ್ಚಾ ತೈಲವನ್ನು ಹೆಚ್ಚಿಸಲು ನಿರ್ದರಿಸಿದೆ.[ಮುಖ್ಯಮಂತ್ರಿಯಿಂದ ವಿಧಾನಸಭೆಯಲ್ಲಿ 'ಜಿಎಸ್‍ಟಿ' ವಿಧೇಯಕ ಮಂಡನೆ]

ಇದಲ್ಲದೆ ಕರ್ನಾಟಕ ಮಾರಾಟ ತೆರಿಗೆ ಕಾಯ್ದೆ 1957 ರ ಅಡಿಯಲ್ಲಿ ನೈಸರ್ಗಿಕ ಅನಿಲದ ಮೇಲಿನ ತೆರಿಗೆಯನ್ನು ಶೇ.14.5 ಹೆಚ್ಚಿಸಲು ಮುಂದಾಗಿದೆ.
ಇದೇ ಜುಲೈನಿಂದ ದೇಶದಾದ್ಯಂತ ಜಿಎಸ್‌ಟಿ ಜಾರಿಗೆ ಬರಲಿದೆ. ಅದಕ್ಕೂ ಮೊದಲು ರಾಜ್ಯಗಳು ಕೇಂದ್ರದ ಮಸೂದೆಗೆ ಒಪ್ಪಿಗೆ ನೀಡಬೇಕಿದೆ.












Click it and Unblock the Notifications