ಬೀದರ್-ಬೆಂಗಳೂರು ಸ್ಟಾರ್ ಏರ್ ವಿಮಾನ ತಿರುಪತಿಗೂ ಸಂಚರಲಿದೆ: ವಾರದಲ್ಲಿ ಎಷ್ಟು ದಿನ? ವೇಳಾಪಟ್ಟಿ ಏನು? ತಿಳಿಯಿರಿ

ಬೆಂಗಳೂರು, ಆಗಸ್ಟ್ 18: ಸರ್ಕಾರ ಶ್ರೀ ಬಾಲಾಜಿ ಭಕ್ತರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಕಲ್ಯಾಣ ಕರ್ನಾಟಕ ಬೀದರ್ ಜಿಲ್ಲೆಯಿಂದ ರಾಜಧಾನಿ ಬೆಂಗಳೂರಿಗೆ ಸಂಚಾರ ಸೇವೆ ನೀಡುತ್ತಿದ್ದ ಸ್ಟಾರ್ ಏರ್ (Star Air) ವಿಮಾನವು ಆಗಸ್ಟ್ 24ರಿಂದ ತಿರುಪತಿಗೆ ಹಾರಾಲಿದೆ. ಇದರಿಂದ ತಿರುಪತಿ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ.

ಬೀದರ್‌ನಿಂದ ಬೆಂಗಳೂರಿಗೆ ಹಾರುತ್ತಿದ್ದ ಸ್ಟಾರ್ ಏರ್‌ ವಿಮಾನ ಆಗಸ್ಟ್ 24ರಿಂದ ಪ್ರತಿ ವಾರದಲ್ಲಿ ಐದು ದಿನ ತಿರುಪತಿಗೆ ಹಾರಲಿದೆ. ಮುಂದಿನ ವಾರದಲ್ಲಿ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ತಿರುಪತಿಗೆ ತೆರಳುವವರಿಗೆ ಈ ವಿಮಾನ ಸೇವೆ ಒದಗಿಸಲಿದೆ ಎಂದು ಕೇಂದ್ರ ರಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದರು.

Bidar To Bengaluru Star Air Flight Service Extended To Tirupati, Devotees Happy, Know Flight Timings

ತಿರುಪತಿ ವಿಮಾನ ಹಾರಾಟ ಸಮಯ ಹೀಗಿದೆ

ಒಂದು ವಾರದಲ್ಲಿ ಈ ವಿಮಾನ ಐದು ಬಾರಿ ಬೀದರ್‌ ನಿಂದ ಬಿಟ್ಟು ವಯಾ ಬೆಂಗಳೂರು ಮಾರ್ಗವಾಗಿ ತಿರುಗಪತಿ ತೆರಳಲಿದೆ. ಪ್ರತಿ ಸೋಮವಾರ ಹಾಗೂ ಶುಕ್ರವಾರ ಬೀದರ್‌ನಿಂದ ಸಂಜೆ 5.30ಕ್ಕೆ ಹೊರಟು 6.45ಕ್ಕೆ ಬೆಂಗಳೂರಿಗೆ ಬರಲಿದೆ. ನಂತರ ಅಲ್ಲಿಂದ 7.10pm ಗೆ ಹೊರಟು 8pmಗೆ ತಿರುಪತಿಯಲ್ಲಿ ಲ್ಯಾಂಡ್ ಆಗಲಿದೆ. ಮತ್ತದೇ ರಾತ್ರಿ 8.25 ಗಂಟೆಗೆ ತಿರುಪತಿ ಬಿಟ್ಟು ಬೆಂಗಳೂರಿಗೆ ರಾತ್ರಿ 9.15ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಮತ್ತೆ ಮರುದಿನ ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಡು ಸಂಜೆ 4.10ಕ್ಕೆ ಬೀದರ್ ತಲುಪಲಿದೆ. ಇನ್ನೂ ಮೂರು ದಿನ ಗುರುವಾರ, ಶನಿವಾರ ಹಾಗೂ ಭಾನುವಾರ ಬೀದರ್‌ನಿಂದ ಸಂಜೆ 4.50ಕ್ಕೆ ಬಿಟ್ಟು ಸಂಜೆ 6.05ಕ್ಕೆ ಬೆಂಗಳೂರಿಗೆ ಬರಲಿದೆ.

Bidar To Bengaluru Star Air Flight Service Extended To Tirupati, Devotees Happy, Know Flight Timings

ಸಂಜೆ 6.30ಕ್ಕೆ ಬೆಂಗಳೂರಿನಿಂದ ವಿಮಾನವು ತೆರಳಲಿದ್ದು, ರಾತ್ರಿ 7.20 ಗಂಟೆಗೆ ತಿರುಪತಿ ತಲುಪಲಿದೆ. ಬಳಿಕ 25 ನಿಮಿಷಗಳ ನಂತರ (7.45) ತಿರುಪತಿಯಿಂದ ಹೊರಟು ಬೆಂಗಳೂರು (8.35ಕ್ಕೆ) ಬೆಂಗಳೂರು ಬಂದು ಸೇರಲಿದೆ. ಇದೇ ವಿಮಾನ ಮರುದಿನ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ತಿರುಪತಿಗೆ ವಿಮಾನ ಕಾರ್ಯಚರಣೆ ಬೇಡಿಕೆ ಬಹಳದಿನಗಳಿಂದ ಕೇಳಿ ಬಂದಿತ್ತು. ಇಂದು ಆ ಬೇಡಿಕೆ ಈಡೇರಿದೆ. ಸರ್ಕಾರ ಈ ನಿರ್ಣಯ ಬಾಲಾಜಿ ಭಕ್ತರಿಗೆ ಸಂತಸ ಮೂಡಿಸಿದೆ. ಕಲ್ಯಾಣ ಕರ್ನಾಟಕದ ಬೀದರ್‌ನಲ್ಲಿ ವಿಮಾನಯಾನ ಆರಂಭಕ್ಕೆ ಹಲವು ಸಮಸ್ಯೆಗಳು ಎದುರಾಗಿದ್ದವು. ಇದೀಗ ಎಲ್ಲವು ಅಂದುಕೊಂಡಂತೆ ಆಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಬೀದರ್ ರೈಲು ನಿಲ್ದಾಣ ನವೀಕರಣ/ಮೇಲ್ಮರ್ಜೆಗೆ 25 ಕೋಟಿ ಅನುದಾನ ಒದಗಿಸಲಾಗಿದೆ. ಸ್ಯದ ಅಭಿವೃದ್ಧಿ ಕೆಲಸ ಆರಂಭಗೊಂಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+