ದೇವೇಗೌಡರ ಸೊಸೆ ಭವಾನಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ!

Posted By:
Subscribe to Oneindia Kannada

ಹಾಸನ, ಫೆ. 06: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ, ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಶನಿವಾರ ಅಧಿಕೃತವಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಶನಿವಾರ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಶನಿವಾರ ಬೆಳಗ್ಗೆಯಿಂದಲೇ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. [ಭವಾನಿ ರೇವಣ್ಣಗೆ ಟಿಕೆಟ್ ಕೊಡಿ ದೇವೇಗೌಡ್ರೆ]

Bhavani Revanna officially entered Active politics Contesting ZP Elections 2016

ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಅವರ ಪತಿ, ಮಾಜಿ ಸಚಿವ ಎಚ್ ಡಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ನೂರಾರು ಬೆಂಬಲಿಗರೊಂದಿಗೆ ಹೊಳೆನರಸೀಪುರ ತಾಲೂಕು ಚುನಾವಣಾಧಿಕಾರಿ, ತಹಸೀಲ್ದಾರ್ ರೇಣುಕುಮಾರ್ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು. [ಕೊನೆಗಾಲದಲ್ಲಿ ಕರುಣಾನಿಧಿ ಸ್ಥಿತಿ ಬೇಡ : ದೇವೇಗೌಡ]

1987ರಲ್ಲಿ ಎಚ್.ಡಿ.ರೇವಣ್ಣ ಸಹ ಹಳೇಕೋಟೆ ಕ್ಷೇತ್ರದಿಂದಲೇ ಜಿಲ್ಲಾ ಪರಿಷತ್​ಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. [ಮತದಾನಕ್ಕಾಗಿ ಫೆ.13, 20ರಂದು ಸರ್ಕಾರಿ ರಜೆ]

ಈಗ ಪತ್ನಿ ಭವಾನಿ ಅವರು ಕೂಡಾ ಇಲ್ಲಿಂದಲೇ ತಮ್ಮ ರಾಜಕೀಯ ಬದುಕು ಆರಂಭಿಸುತ್ತಿದ್ದಾರೆ. ದಂಪತಿಯ ಪುತ್ರ ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಜೆಡಿಎಸ್ ಯುವ ಸಂಘಟನೆಯ ಮುಖ್ಯಸ್ಥರಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bhavani Revanna officially enters active politics. Bhavani Revanna, wife of Janta Dal (Secular) leader H.D. Revanna and daughter-in-law of the former Prime Minister H.D. Deve Gowda, filed nomination on Saturday (Feb 06) the Hassan Zilla Panchayat election from Halekote constituency.
Please Wait while comments are loading...