ಸೌದಿಯಲ್ಲಿ ಭೀಕರ ಅಪಘಾತ, ಭಟ್ಕಳದ ಇಬ್ಬರು ಸಾವು

ಭಟ್ಕಳ,ಜನವರಿ,11: ಸೌದಿ ಅರೇಬಿಯಾ ಬಳಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಭಾನುವಾರ ಭಾರೀ ಅಪಘಾತ ಸಂಭವಿಸಿದ್ದು, ಭಟ್ಕಳ ಮೂಲದ ಇಬ್ಬರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲಾ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

ಭಟ್ಕಳದ ಉಮರ್ ಸ್ಟ್ರೀಟ್ ನಿವಾಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದ ಫಯ್ಯಾಝ್ ಗವಾಯಿ ಈತನ ಪುತ್ರಿ ಮರಿಯಮ್ ಫೀಝಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಚಾಲಕ ಯಾಸಿರ್ ಮನ್ನಾ (40), ಮಕ್ಕಳಾದ ಉಮರ್ ಗವಾಯಿ (4) ಫೈಹಾನ್ ಗವಾಯಿ(2), ಪತ್ನಿ ಫಾಯಿಝಾ (38), ಸಂಬಂಧಿ ಅನ್ಸಾರ್ ಶಿಂಗೇಟಿ (46) ಗಾಯಗೊಂಡಿದ್ದಾರೆ.[ಸಂಬಳವಿಲ್ಲದೆ ಸೌದಿ ಒಡೆಯರ ಒದೆ ತಿಂದ ಧಾರವಾಡದ ಮಹಿಳೆ]

Saudi arabia

ಫಯಾಜ್ ಗವಾಯಿ ತಮ್ಮ ಕುಟುಂಬ ಸಮೇತ ಶನಿವಾರ ಸಂಜೆ ಫಾರ್ಚುನರ್ ಕಾರಿನಲ್ಲಿ ಅಲ್ ಜುಬೇಲ್ ನಿಂದ ಪವಿತ್ರ ಉಮ್ರಾ ಯಾತ್ರೆ ನಿರ್ವಹಿಸಲು ಮಕ್ಕಾಗೆ ತೆರಳುತ್ತಿದ್ದರು. ರಾತ್ರಿ ಸುಮಾರು 1:40ಕ್ಕೆ ಅವರ ಕಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಸೌದಿ ಅರೇಬಿಯಾದ ತಾಯಿಫ್ ನಗರದಿಂದ ಸುಮಾರು 200ಕಿ.ಮೀ. ದೂರ 'ಝುಲ್ಮ್' ಎಂಬಲ್ಲಿ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.[ಕಲ್ಲು ತುಂಬಿಸುವವ ಮ್ಯಾನೇಜರ್ ಆದ ಹಿಂದಿನ ಯಶಸ್ಸಿನ ಕಥೆ]

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಭಟ್ಕಳ ಮುಸ್ಲಿಮ್ ಜಮಾಅತ್ ಜಿದ್ದಾ ಅವರ ನಿಯೋಗ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ತಾಯಿಫ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಮತ್ತೊಂದು ತಂಡವು 'ಝುಲ್ಮ್' ಪೊಲೀಸ್ ಠಾಣೆಗೆ ತೆರಳಿ ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣರಾದ ಕಾರು ಚಾಲಕನ ವಿರುದ್ಧ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದ್ದಾರೆ.[ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ]

ಭಟ್ಕಳದ ಮದೀನಾ ಕಾಲನಿಯ ಉಮರ್ ಸ್ಟ್ರೀಟ್ ನಿವಾಸಿಯಾಗಿರುವ ಮೃತ ಫಯ್ಯಾಝ್ ಕಳೆದ 22 ವರ್ಷಗಳಿಂದ ಸೌದಿ ಅರೇಬಿಯಾದ ಅಲ್-ಜುಬೇಲ್ ನಲ್ಲಿ ಸ್ವಂತ ಉದ್ಯೋಗ ಹೊಂದಿದ್ದು ರೆಡಿಮೇಡ್ ಡ್ರೆಸ್ ಅಂಗಡಿಯೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+