Bengaluru Vande Bharat: ಬೆಂಗಳೂರಿನಿಂದ ಕರ್ನಾಟಕದ ಪ್ರಮುಖ ನಗರಕ್ಕೆ ವಂದೇ ಭಾರತ್ ರೈಲು, ಬಿಗ್ ಅಪ್ಡೇಟ್ಸ್!
Bengaluru Vande Bharat: ಬೆಂಗಳೂರಿನಿಂದ ಕರ್ನಾಟಕದ ಪ್ರಮುಖ ನಗರವೊಂದಕ್ಕೆ ವಂದೇ ಭಾರತ್ ರೈಲು ಶೀಘ್ರ ಸಂಚರಿಸಲಿದೆ. ಈ ಸಂಬಂಧ ರಾಜ್ಯದ ಬಿಜೆಪಿ ಸಂಸದರಿಂದ ಮಹತ್ವದ ಅಪ್ಡೇಟ್ಸ್ ಸಿಕ್ಕಿದೆ. ಈ ಸಂಬಂಧ ಸಚಿವರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಚಾರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಈಗಾಗಲೇ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಮತ್ತೊಂದು ನಗರಕ್ಕೆ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ಸಂಬಂಧ ಈಗಾಗಲೇ ಘೋಷಿಸಲಾಗಿದೆಯಾದರೂ ಅಧಿಕೃತ ಚಾಲನೆ ಬಾಕಿ ಇದೆ. ಅದರ ಸಂಪೂರ್ಣ ಅಪ್ಡೇಟ್ಸ್ ನೋಡೋಣ.
ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಂಗಳೂರು - ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇರಿದಂತೆ ಕರ್ನಾಟಕದ ವಿವಿಧ ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ಮಾಡಿದ್ದಾರೆ.

ಬೆಳಗಾವಿ ಬಾರ್ ಅಸೋಸಿಯೇಷನ್ , ಬೆಳಗಾವಿ ತನ್ನ ಅಸ್ತಿತ್ವದ 150 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ 150 ( ನೂರ ಐವತ್ತು ವರ್ಷ) ನೇ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಅಧ್ಯಕ್ಷರು ಬೆಳಗಾವಿ ಬಾರ್ ಅಸೋಸಿಯೇಷನ್ ಇವರ ಮನವಿಯಂತೆ "ಮುಖ್ಯ ಅತಿಥಿ" ಗಳಾಗಿ ಆಗಮಿಸುವ ಕುರಿತು, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಇವರು ನವ-ದೆಹಲಿಯ ಸಂಸದ ಭವನದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.
150 ( ನೂರ ಐವತ್ತು ವರ್ಷ)ನೇ ವಾರ್ಷಿಕೋತ್ಸವ ಸಮಾರಂಭವು ತಾತ್ಕಾಲಿಕವಾಗಿ ದಿನಾಂಕ: 4ನೇ ಅಕ್ಟೋಬರ 2025 ರಂದು ಆಯೋಜಿತಗೊಂಡಿರುತ್ತದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ವಕೀಲರ ಸಮೂಹ ಭಾಗವಹಿಸಲಿದ್ದು, ಅದರಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಇದರಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಬಗ್ಗೆ ಒಪ್ಪಿಗೆ ಸೂಚಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.
ಮನವಿಯನ್ನು ಅವಲೋಕಿಸಿದ ನರೇಂದ್ರ ಮೋದಿ ಅವರು, ಈ ಪ್ರಸ್ತಾಪಿತ ಕಾರ್ಯಕ್ರಮದ ಬಗ್ಗೆ ಮಹಿತಿಯನ್ನು ಪಡೆದುಕೊಂಡು ಇದರಲ್ಲಿ ಭಾಗವಹಿಸುವ ಬಗ್ಗೆ ತಮ್ಮ ಭರವಸೆಯನ್ನು ನೀಡಿರುವುದರ ಕುರಿತು ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.
ಮುಂದುವರಿದು ಇದೇ ಸಂದರ್ಭದಲ್ಲಿ ಬೆಳಗಾವಿ - ಬೆಂಗಳೂರು - ಬೆಳಗಾವಿ ನಡುವೆ "ವಂದೇ ಭಾರತ" ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಅದರಂತೆ ರೈಲು ಶೀಘ್ರ ಪ್ರಸ್ತಾಪಿತ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಹಸಿರು ನಿಶಾಣೆ ತೋರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಇದೇ ಸಂದರ್ಭದಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಅಗತ್ಯ ಸೂಚನೆಯನ್ನು ಕೇಂದ್ರ ರೇಲ್ವೆ ಸಚಿವರಿಗೆ ನೀಡುವುದಾಗಿ ಸಹ ಅವರು ತಿಳಿಸಿರುವುದಾಗಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.
ಮೋದಿಗೆ ಬೆಳಗಾವಿ ಕುಂದಾ ಗಿಫ್ಟ್!
ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯ ಕುಂದಾ (ಸಿಹಿ)ವನ್ನೂ ಕೊಟ್ಟಿರುವುದು ವಿಶೇಷಚವಾಗಿದೆ.












Click it and Unblock the Notifications