ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್: ರಾಜ್ಯದ ಈ ಜಿಲ್ಲೆಗೆ ನಿಲುಗಡೆಗೆ ಆಗ್ರಹ, ಕೇಂದ್ರಕ್ಕೆ ಪತ್ರ ಸಾಧ್ಯತೆ
ಬೆಂಗಳೂರು, ಆಗಸ್ಟ್ 09: ಆಗಸ್ಟ್ 15ರಂದು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊಸದಾಗಿ ಕರ್ನಾಟಕದ ಮೂರನೇ 'ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು' (Vande Bharat Express) ರೈಲು ಆರಂಭವಾಗಲಿದೆ. ಈ ರೈಲನ್ನು ಕಲ್ಯಾಣ ಕರ್ನಾಟಕ ಭಾಗದ ಈ ಜಿಲ್ಲೆಗೆ ನಿಲುಗಡೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕೈಗಾರಿಕೆ ಅಭಿವೃದ್ಧಿ ಕುರಿತ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿದರು. ಬೆಂಗಳೂರು- ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ರೈಲನ್ನು ರಾಯಚೂರು ಜಿಲ್ಲೆಗೆ ನಿಲುಗಡೆ ನೀಡುವಂತೆ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆಯುವಂತೆ ಕೈಗಾರಿಕೋದ್ಯಮಿಗಳು ಸಚಿವರಿಗೆ ಮನವಿ ಮಾಡಿದರು.

ರಾಯಚೂರು ಮೂಲಕ ಸಂಚರಿಸಿದರೆ ಜಿಲ್ಲೆಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಂಘಗಳ ಮನವಿಯ ಸಕಾರಾತ್ಮಕವಾಗಿ ಸ್ಪಂದಿಸಿದ ಎಂಬಿ ಪಾಟೀಲ್ ಅವರು ಕೇಂದ್ರ ರೈಲ್ವೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಒಂದು ವೇಳೆ ರಾಜ್ಯ ಸರ್ಕಾರ ಭರವಸೆಯಂತೆ ನಡೆದುಕೊಂಡರೆ ರಾಯಚೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ ಸಹಿತ ಸಾಗಲಿದೆ.
ಕರ್ನಾಟಕದ 3ನೇ ವಂದೇ ಭಾರತ್ ರೈಲು
ಅಂತಾರಾಜ್ಯ ಮತ್ತು ಕರ್ನಾಟಕದ ಮೂರನೇ ರೈಲು ಇದಾಗಿದೆ. ಬೆಂಗಳೂರು ನಗರ ನೈಋತ್ಯ ರೈಲ್ವೆ ವಲಯದಿಂದ ಹೈದರಾಬಾದ್ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಸಂಪರ್ಕ ಸಾಧಿಸುತ್ತದೆ. ಬೆಳಗ್ಗೆ ಹೈದರಾಬಾದ್ ಹೊರಟರೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ನಂತರ ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ರೈಲು ಹೊರಟರೆ ರಾತ್ರಿ ಹೈದರಾಬಾದ್ ತಲುಪಲಿದೆ.
ಬೆಂಗಳೂರಿನಿಂದ ಸುಮಾರು 600 ಕಿಲೋ ಮೀಟರ್ ದೂರದ ನೆರೆ ರಾಜ್ಯದ ಹೈದರಾಬಾದ್ ನಗರವನ್ನು ವಂದೇ ಭಾರತದ ರೈಲಿನ ಮೊದಲ ಪ್ರಯಾಣ ಇದೇ ಆಗಸ್ಟ್ 15ರಂದು ಆರಂಭವಾಗಲಿದೆ. ಕರ್ನಾಟಕದ ಸೇಡಂ, ಕರ್ನೂಲ ಮಾರ್ಗವಾಗಿ ಹೈದರಾಬಾದ್ ತಲುಪಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ರಾಯಚೂರಲ್ಲಿ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ
ರಾಯಚೂರು ನಗರವು ಲಾಜಿಸ್ಟಿಕ್ ಹಬ್ ಆಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಹತ್ತಿರದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನೆಟ್ ವರ್ಕ್ ಇದ್ದು ಈ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸುವಂತೆ ಕೈಗಾರಿಕೋದ್ಯಮಿಗಳ ಮನವಿಗೆ ಸರ್ಕಾರ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲು ಮುಂದಾಗಿದೆ.
ರಾಯಚೂರಿಗೆ ಎರಡು ಜವಳಿ ಪಾರ್ಕ್?
ರಾಯಚೂರಿನಲ್ಲಿ 120 ಕ್ಕೂ ಅಧಿಕ ಜಿನ್ನಿಂಗ್ ಘಟಕಗಳು ಇದ್ದು, ಇದು ಏಶಿಯಾ ಎರಡನೇ ಬೃಹತ್ ಕಾಟನ್ ಮಾರುಕಟ್ಟೆಯಾಗಿದೆ. ಈಗಾಗಲೇ ಈ ಜಿಲ್ಲೆಗೆ ಜವಳಿ ಪಾರ್ಕ್ ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಅಗತ್ಯತೆ ಅನುಗುಣವಾಗಿ ಇಲ್ಲಿ ಇನ್ನೊಂದು ಜವಳಿ ಪಾರ್ಕ್ ಆಗಬೇಕಿದೆ. ಈ ಕುರಿತು ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುವ ಚಿಂತನೆಯಲ್ಲಿದ್ದೇವೆ. ಅದಕ್ಕೂ ಮುನ್ನ ಈ ಕುರಿತು ವರದಿ ಸಿದ್ಧಪಡಿಸುವಂತೆ ಸಚಿವರು ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಗೆ (KIADB) ಸೂಚನೆ ನೀಡಿದರು.












Click it and Unblock the Notifications