SWR: ಶಿವಮೊಗ್ಗದಿಂದ ವಿಶೇಷ ರೈಲು ಸೇವೆ: ಬೆಂಗಳೂರಿನಿಂದ ಸಂಚರಿಸುವ ವಿವಿಧ ರೈಲುಗಳ ಸೇವೆ ವಿಸ್ತರಣೆ
Indian Railways: ಸಾಲು ಸಾಲು ಹಬ್ಬಗಳು ಎದುರಾಗುತ್ತಿವೆ. ದಸರಾ, ದೀಪಾವಳಿ ಮತ್ತು ಛತ್ ಹಬ್ಬದಾಚರಣೆ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಿಂದ ವಿವಿಧೆಡೆ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಗಣೇಶ ಹಬ್ಬದ ವಿಶೇಷ ರೈಲುಗಳ ಸೇವೆ ಮುಂದುವರಿಯಲಿದೆ. ಮಲೆನಾಡಿನ ಶಿವಮೊಗ್ಗ-ತಿರುನಲ್ವೇಲಿ ನಡುವೆ ಹಬ್ಬದ ವಿಶೇಷ ರೈಲುಗಳ ಸೇವೆ ಒಗಿಸಲಾಗಿದೆ ಎಂದು ನೈಋತ್ಯ ರೈಲ್ವೆ SWR ಮಾಹಿತಿ ನೀಡಿದೆ. ಈ ರೈಲುಗಳ ಸೇವೆ ದಿನಾಂಕ, ವೇಳಾಪಟ್ಟಿ, ಮಾರ್ಗಗಳ ವಿವರ ಇಲ್ಲಿದೆ.
ವಿಶೇಷ ರೈಲುಗಳ ಸೇವೆ ವಿಸ್ತರಣೆ
* SMVT ಬೆಂಗಳೂರು-ದಾಸನಾಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03241) ಸೆಪ್ಟಂಬರ್ 19 ರಿಂದ ಡಿಸೆಂಬರ್ 27ರವರೆಗೆ ಎರಡು ವಾರಕ್ಕೊಮ್ಮೆ ತನ್ನ ಕಾರ್ಯಾಚರಣೆ ಮುಂದುವರಿಸಲಿದೆ.
* SMVT ಬೆಂಗಳೂರು ರೈಲು (ಸಂಖ್ಯೆ 03242) ಸೆಪ್ಟಂಬರ್ 21 ರಿಂದ ಡಿಸೆಂಬರ್ 29 ರವರೆಗೆ ಎರಡು ವಾರಕ್ಕೊಮ್ಮೆ ಚಲಿಸುವುದನ್ನು ಮುಂದುವರಿಸುತ್ತದೆ.
* ರೈಲು ಸಂಖ್ಯೆ 03247 ದಾನಾಪುರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟಂಬರ್ 18 ರಿಂದ ಡಿಸೆಂಬರ್ 25 ರವರೆಗೆ ವಿಸ್ತರಣೆ ಮಾಡಲಾಗಿದೆ.

* SMVT ಬೆಂಗಳೂರು-ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (03248) ಸೆಪ್ಟಂಬರ್ 20 ರಿಂದ ಡಿಸೆಂಬರ್ 27ರವರೆಗೆ ಸೇವೆ ಮುಂದುವರಿಸಲಿದೆ.
* SMVT ಬೆಂಗಳೂರು-ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು (06539) ಎರಡು ವಾರಕ್ಕೊಮ್ಮೆ ಅಕ್ಟೋಬರ್ 03 ರಿಂದ 31ರವರೆಗೆ ಸೇವೆ ನೀಡಲಿದೆ.
* ರೈಲು ಸಂಖ್ಯೆ 06540 ಬೀದರ್-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು 04.10.2025 ರಿಂದ 01.11.2025 ರವರೆಗೆ ವಿಸ್ತರಣೆ ಮಾಡಲಾಗಿದೆ.
* SMVT ಬೆಂಗಳೂರು-ಗೋಮತಿ ನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06529) ನವೆಂಬರ್ 10ರಿಂದ ಡಿಸೆಂಬರ್ 22ರವರೆಗೆ ಸೇವೆ ಮುಂದುವರಿಸಲಿದೆ.
* ಗೋಮತಿ ನಗರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06530) ನವೆಂಬರ್ 14 ರಿಂದ ಡಿಸೆಂಬರ್ 26 ರವರೆಗೆ ಕಾರ್ಯಾಚರಣೆ ಮುಂದುವರಿಸಲಿದೆ.
ಶಿವಮೊಗ್ಗದಿಂದ ಹಬ್ಬಕ್ಕೆ ವಿಶೇಷ ರೈಲು ಸಂಚಾರ
ಕರ್ನಾಟಕದ ಮಲೆನಾಡಿನ ಪ್ರಮುಖ ಜಿಲ್ಲೆ ಶಿವಮೊಗ್ಗದಿಂದ ತಿರುನಲ್ವೇಲಿವರೆಗೆ ದುರ್ಗಾಪೂಜೆ, ದೀಪಾವಳಿ, ಛತ್ ಹಬ್ಬಗಳ ಪ್ರಯುಕ್ತ ವಿಶೇಷ ರೈಲುಗಳು ಸಂಚಾರ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟು 08 ಟ್ರಿಪ್‌ಗಳ ಸೇವೆ ಪ್ರಯಾಣಿಕರಿಗೆ ಲಭ್ಯವಾಗುತ್ತದೆ.
ತಿರುನಲ್ವೇಲಿ-ಶಿವಮೊಗ್ಗ ಟೌನ್ (06103) ವಿಶೇಷ ರೈಲು 07.09.2025 ರಿಂದ 26.10.2025 ರವರೆಗೆ ಪ್ರತಿ ಭಾನುವಾರ ತಿರುನಲ್ವೇಲೆಯಿಂದ ಸಂಚರಿಸುತ್ತದೆ. ಅಲ್ಲಿಂದ 15:40 ಗಂಟೆಗೆ ಹೊರಟು ಸೋಮವಾರ 13:00 ಗಂಟೆಗೆ ಶಿವಮೊಗ್ಗ ಪಟ್ಟಣಕ್ಕೆ ಆಗಮಿಸಲಿದೆ. ಮರಳಿ ಅದೇ ದಿಕ್ಕಿನಲ್ಲಿ, ಶಿವಮೊಗ್ಗ ಟೌನ್ ತಿರುನಲ್ವೇಲಿ ಫೆಸ್ಟಿವಲ್ ವಿಶೇಷ ರೈಲು (06104) 08.09.2025 ರಿಂದ 27.10.2025 ರವರೆಗೆ ಸಂಚರಿಸಲಿದೆ. ಪ್ರತಿ ಸೋಮವಾರ ಮಧ್ಯಾಹ್ನ 14:20 ಕ್ಕೆ ಶಿವಮೊಗ್ಗದಿಂದ ಹೊರಟು ಮಂಗಳವಾರ 10:45 ಗಂಟೆಗೆ ತಿರುನಲ್ವೇಲಿಗೆ ಸೇರುತ್ತದೆ.
ಶಿವಮೊಗ್ಗದಿಂದ ತಿರುನೆಲ್ವೇಲಿಗೆ ವಿಶೇಷ ರೈಲು
— B Y Raghavendra (@BYRBJP) September 3, 2025
ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಮತ್ತು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ ಒಂದು ಹೊಸ ರೈಲನ್ನು ಬಿಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರ ಮುಂದೆ ಒಂದು ಹೊಸದಾಗಿ ರೈಲನ್ನು ಮಂಜೂರು ಮಾಡುವಂತೆ ಕೋರಿಕೆ… pic.twitter.com/aSqkQCq2wR
ರೈಲು ನಿಲುಗಡೆ ನಿಲ್ದಾಣಗಳ ವಿವರ
ಈ ರೈಲು ಚೇರ್ನಮಹಾದೇವಿ, ಕಲ್ಲಿಡೈ ಕುರಿಚಿ, ಅಂಬಾಸಮುದ್ರಂ, ಕಿಲಾ ಕದಯಂ, ಪಾವುರ್ಛತ್ರಂ, ತೆಂಕಶಿ, ಕಡಯನಲ್ಲೂರು, ಶಂಕರಕೋವಿಲ್, ರಾಜಪಾಳ್ಯಂ, ಶ್ರೀವಿಲ್ಲಿಪುತ್ತೂರು, ಶಿವಕಾಶಿ, ತಿರುತ್ತಂಗಲ್, ವಿರುದುನಗರ, ಮಧುರೈ, ಕೊಡೈಕ್ಕನಲ್ ರಸ್ತೆ, ದಿಂಡಿಗಲ್, ಕರೂರ್, ನಾಮಕ್ಕಲ್, ಸೇಲಂ, ಕುಪ್ಪಂ, ಬಂಗಾರಪೇಟೆ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳು ಎರಡೂ ದಿಕ್ಕಿನಲ್ಲಿ ನಿಲುಗಡೆ ನೀಡುತ್ತದೆ.
ಈ ವಿಶೇಷ ರೈಲು 18 ಕೋಚ್ ಹೊಂದಿದೆ. ಅದರಲ್ಲಿ 1 ಎಸಿ-2 ಟೈರ್, 2 ಎಸಿ-3 ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್‌ಗಳು ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಸೇರಿವೆ. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ಭಾರತೀಯ ರೈಲ್ವೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇಲ್ಲವೇ ಸಹಾಯವಾಣಿ 139ಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications