Vande Bharat Express: ಬೆಳಗಾವಿಗೆ ರೈಲು ವಿಸ್ತರಣೆ ಪ್ರಸ್ತಾವ ತಿರಸ್ಕಾರ, ಜಿಲ್ಲೆಯ ಜನರಿಗೆ ಮತ್ತೆ ನಿರಾಸೆ
ಬೆಂಗಳೂರು, ಜುಲೈ 23: ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕಿಸಲು ನೂತನ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನೈಋತ್ಯ ರೈಲ್ವೆ ವಲಯ ಕಾರ್ಯಾಚರಣೆ ನಡೆಸಿತು. ಅಂದಿನಿಂದಲೂ ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಣೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಇದೀಗ ಬೆಳಗಾವಿ ಜನರ ಮನವಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಹುಕ್ಕೇರಿ ಪ್ರಶ್ನೆ ಕೇಳಿದ್ದರು. ಅದಕ್ಕೆ ರಾಜ್ಯ ಮೂಲಸೌಕರ್ಯಾಭಿವೃದ್ಧಿ ಮತ್ತು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ನೀಡಿರುವ ಉತ್ತರ ಬೆಳಗಾವಿ ಜಿಲ್ಲೆ ಜನರಿಗೆ ನಿರಾಸೆ ಮೂಡಿಸಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಗೆ ವಿಸ್ತರಣೆ ಅಸಾಧ್ಯ ಎಂದು ತಿಳಿಸಿದ್ದಾರೆ. ಏಕೆಂದರೆ ಇಲ್ಲಿಗೆ ವಿಸ್ತರಣೆ ಮಾಡಲು ಮೂಲಭೂತ ಸೌಕರ್ಯಗಳ ಸೌಲಭ್ಯ ಸರಿಯಿಲ್ಲ. ಕೊರತೆ ಇದೆ ಎಂಬ ಕಾರಣಕ್ಕೆ ಇಲಾಖೆಯು ಈ ರೈಲು ವಿಸ್ತರಣೆಯ ಪ್ರಸ್ತಾವನೆ ತಿರಸ್ಕರಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆ ಬೆಳಗಾವಿಗೆ ವಿಸ್ತರಣೆ ಮಾಡಬೇಕು. ಪಡೆದ ಇಲಾಖೆ ಟ್ರಯಲ್ ರನ್ ಮಾಡಿದೆ. ಆದರೆ ಈಗ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಹೇಳಿದರು.
ಹೀಗೆ ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಪ್ರಕಾಶ್ ಹುಕ್ಕೇರಿ ಅವರು, ನಾವು ಇದನ್ನು ಒಪ್ಪುವುದಿಲ್ಲ. ಕೂಡಲೇ ಬೆಳಗಾವಿಗೆ ವಂದೇ ಭಾರತವನ್ನು ವಿಸ್ತರಿಸಲು ಕ್ರಮವಹಿಸಿಬೇಕು. ವಂದೇ ಭಾರತ್ ವಿಸ್ತರಣೆ ಮಾಡದೇ ಹೋದರೆ ರಾಜ್ಯ ಸರ್ಕಾರ ಯೋಜನೆಗೆ ಬಿಡುಗಡೆ ಮಾಡುವ ಹಣ ತಡೆಹಿಡಿಯಿರಿ ಎಂದು ಅವರು ಒತ್ತಾಯ ಮಾಡಿದರು.

ರೈಲ್ವೆ ಇಲಾಖೆ ಟ್ರಯಲ್ ರನ್ ಸಹ ಮಾಡಿದೆ
ಈ ಮಾತಿಗೆ ಉತ್ತರಿಸಿದ ಸಚಿವ ಎಂಬಿ ಪಾಟೀಲ್ ಅವರು, ಇಲಾಖೆಯಿಂದ ಮಾಹಿತಿ ಪಡೆದು ಉತ್ತರ ನೀಡಲಾಗಿದೆ. ರೈಲ್ವೆ ಇಲಾಖೆ ಟ್ರಯಲ್ ರನ್ ಮಾಡಿದೆ. ಟ್ರಯಲ್ ಮಾಡಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ವಿಸ್ತರಣೆ ಸಾಧ್ಯವಿಲ್ಲ ಸ್ಪಷ್ಟಪಡಿಸಿದೆ.
ಈ ವಿಚಾರ ಕುರಿತು ನಾವು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಮತ್ತೆ ಮನವಿ ಮಾಡುತ್ತೇವೆ. ಆರೋಗ್ಯ ಸಚಿವರು ನಮ್ಮ ರಾಜ್ಯದವರೇ ಆಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡುವ ಬಗ್ಗೆ ಮನವಿ ಮಾಡಲಾಗುವುದು ಎಂದು ಸಚಿವರು ಬೆಳಗಾವಿ ಜನರಿಗೆ ತಿಳಿಸಿದರು.
ದಾವಣಗೆರೆ ಮಾರ್ಗವಾಗಿ 'ವಿಬಿ' ರೈಲು ಸಂಚಾರ
ಸದ್ಯ ನಿತ್ಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಮಧ್ಯಾಹ್ನದ ಹೊತ್ತಿಗೆ ಧಾರವಾಡ ತಲುಪುತ್ತದೆ. ನಂತರ ಅಲ್ಲಿಂದ ಮಧ್ಯಾಹ್ನ ಹೊರಟು ರಾತ್ರಿ ಬೆಂಗಳೂರಿಗೆ ಮರಳುತ್ತದೆ. ಈ ರೈಲನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದಕ್ಕೆ ರೈಲು ಹೊರಡುವ ಮತ್ತು ತಲುಪುವ ಸಮಯದಲ್ಲಿನ ಸಮಸ್ಯೆಗಳು ಮುನ್ನೆಲೆಗೆ ಬಂದಿದ್ದವು.












Click it and Unblock the Notifications