'ಬಿಜೆಪಿ ತಪ್ಪು ಹುಡುಕುವ ಬದಲು ರಾಹುಲ್ ಗಾಂಧಿ ಹುಡುಕಿ'
ಬೆಂಗಳೂರು, ಏ. 3 : ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯ ಮುಖ್ಯಾಂಶಗಳು
* 'ವಿರೋಧ ಪಕ್ಷ ಕಾಂಗ್ರೆಸ್‌ಗೆ ಕಾರ್ಯಕಾರಿಣಿ ಸಭೆಯಲ್ಲಿ ತಿರುಗೇಟು ನೀಡಿರುವ ಅಮಿತ್ ಶಾ, ಸರ್ಕಾರದ ತಪ್ಪುಗಳನ್ನು ಹುಡುಕುವ ಬದಲು ನಿಮ್ಮ ನಾಯಕ ರಾಹುಲ್ ಗಾಂಧಿಯನ್ನು ಹುಡುಕಿಕೊಂಡು ಬನ್ನಿ' ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.
* ಭೂಸ್ವಾಧೀನ ಕಾಯ್ದೆಯು ರೈತ ವಿರೋಧಿಯಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ದೇಶಾದ್ಯಂತ ಸಮಾವೇಶ ಆಯೋಜನೆ ಮಾಡಲು ನಿರ್ಧರಿಸಲಾಯಿತು. ಕಾರ್ಯಕಾರಿಣಿ ಸಭೆಯಲ್ಲಿಯೇ ಈ ಬಗ್ಗೆ ಅಮಿತ್ ಶಾ ಘೋಷಣೆ ಮಾಡಿದರು.

* ಮೇ ತಿಂಗಳಿನಿಂದ ಈ ಸಮಾವೇಶಗಳು ಆರಂಭವಾಗಲಿದ್ದು, ಮೇ.6ರಂದು ಮೊದಲ ಸಮಾವೇಶ ರಾಂಚಿಯಲ್ಲಿ ನಡೆಯಲಿದೆ. ಪ್ರತಿಪಕ್ಷಗಳು ಭೂ ಸ್ವಾಧೀನ ಕಾಯ್ದೆಯಲ್ಲಿನ ಅಂಶಗಳನ್ನು ತಿರುಚಿ ಹೇಳುತ್ತಿವೆ. ಆದ್ದರಿಂದ ಕಾರ್ಯಕರ್ತರು ಇದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಅಮಿತ್ ಶಾ ಹೇಳಿದರು.
* ಹೊಸದಾಗಿ ಬಿಜೆಪಿ ಸದಸ್ಯತ್ವ ಪಡೆದವರಿಗೆ ತರಬೇತಿ ನೀಡಿ ಕಾರ್ಯಕರ್ತರಾಗಿ ಬೆಳೆಸಬೇಕು ಎಂದು ಅಮಿತ್ ಶಾ ತಿಳಿಸಿದರು. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ತರಬೇತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಮಯ 12 ಗಂಟೆ : ಪಕ್ಷದ ಕಾರ್ಯಕಾರಿಣಿ ಸಭೆಯ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕ್ಯಾಪಿಟಲ್ ಹೋಟೆಲ್ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜವಡೇಕರ್ ಅವರು ಸದಸ್ವತ್ವ ಅಭಿಯಾನ ಚುರುಕು, ಬಿಹಾರ ವಿಧಾನಸಭೆ ಚುನಾವಣೆ, ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಸಮಯ 10.30 : ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಸುಮಾರು 330 ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಂದೇ ಮಾತರಂ ಗೀತೆಯನ್ನು ಹಾಡುವ ಮೂಲಕ ಕಾರ್ಯಕಾರಿಣಿಗೆ ಚಾಲನೆ ಸಿಕ್ಕಿತು. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವ ಅರುಣ್ ಜೇಟ್ಲಿ ವೇದಿಕೆಯಲ್ಲಿದ್ದಾರೆ. [ಚಿತ್ರಗಳಲ್ಲಿ : ಬಿಜೆಪಿ ಕಾರ್ಯಕಾರಿಣಿ ಸಭೆ]

ಸಂಜೆ ನಾಲ್ಕು ಗಂಟೆಯ ತನಕ ಮೊದಲ ದಿನದ ಕಾರ್ಯಕಾರಿಣಿ ಸಭೆ ನಡೆಯಲಿದ್ದು. ಅಮಿತ್ ಷಾ, ಪ್ರಧಾನಿ ಮೋದಿ, ಅರುಣ್ ಜೇಟ್ಲಿ ಭಾಷಣ ಮಾಡಲಿದ್ದಾರೆ. [ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ - ವರದಿಗಳು]
Day 2 of #BJPNationalExec has just begun a few minutes back.. pic.twitter.com/ja4Iy5bJbl
— BJP Karnataka (@bjpkarnataka) April 3, 2015 ಕಾರ್ಯಕಾರಿಣಿ ಸಭೆ ಬಳಿಕ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. [ಮೋದಿ ಸಮಾವೇಶ, ಸಂಚಾರ ಮಾರ್ಗ ಬದಲಾವಣೆ]













Click it and Unblock the Notifications