ಸೆಂಕೆಡ್ ಲವ್ ಸ್ಟೋರಿ: ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯತಮೆ - ಮುಂದೆ ಆಗಿದ್ದೇನು?
ಬೆಂಗಳೂರು, ಡಿಸೆಂಬರ್ 21: ಅನೈತಿಕ ಸಂಬಂಧ ಅನುಮಾನ ವ್ಯಕ್ತಪಡಿಸಿದ ಕಾರಣಕ್ಕೆ ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು, ರಾಣಿ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ ಸಂಜಯ್ ಕಾನ್ ಸ್ಟೇಬಲ್ ಆಗಿದ್ದು, ಸಂಜಯ್ ತನ್ನ ಪ್ರಿಯತಮೆ ರಾಣಿ ಮನೆಗೆ ಹೋಗಿದ್ದಾಗ, ಅದೇ ಸಮಯಕ್ಕೆ ಯುವಕನೊಬ್ಬ ಕರೆ ಮಾಡಿದ್ದಾನೆ. ನಂತರ ಸಂಜಯ್ ಆಕೆಯ ಮೊಬೈಲ್ ತೆಗೆದು ನೋಡಿದಾಗ ಬೇರೆ ಯುವಕರ ಜೊತೆಗೂ ಮಾತನಾಡಿರುವುದು ಗೊತ್ತಾಗಿದೆ.ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಗಿದೆನಂತರ ರಾಣಿಯೊಂದಿಗೆ ಜಗಳವಾಡಿಕೊಂಡು ಹೊರಗೆ ಹೋಗಿದ್ದ ಸಂಜಯ್ ಪೆಟ್ರೋಲ್‌ನೊಂದಿಗೆ ಪ್ರತ್ಯಕ್ಷವಾಗಿದ್ದಾನೆ.

ರಾಣಿಯನ್ನ ಹೆದರಿಸುವ ಸಲುವಾಗಿ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ನಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ. ಅದಕ್ಕೆ ನೀನೇನು ಸಾಯೋದು ನಾನೇ ಸಾಯಿಸ್ತೀನಿ ಎಂದು ರಾಣಿ ಬೆಂಕಿ ಕಡ್ಡಿ ಗೀರಿದ್ದಾಳೆ. ಈ ವೇಳೆ ಬೆಂಕಿಯ ಸಣ್ಣ ಕಿಡಿ ಸಂಜಯ್‌ಗೆ ತಗುಲಿ ದೇಹಕ್ಕೆಲ್ಲಾ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿದಕ್ಕೆ ರಾಣಿ ಕೂಡಲೇ ಬೆಂಕಿ ಆರಿಸಿದ್ದಾರೆ. ಭಯಗೊಂಡು ಬಳಿ ಬೈಕ್ ನಲ್ಲಿ ಸಂಜಯ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿದ್ದಾಳೆ. ದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ ಸಂಜಯ್ ಸಾವನ್ನಪ್ಪಿದ್ದಾನೆ.












Click it and Unblock the Notifications