• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ನಾಯಕರೊಬ್ಬರ ಅಮಾನವೀಯ ಶವ ಸಂಸ್ಕಾರ ಮುನ್ನಲೆಗೆ ತಂದು ಆಖಾಡಕ್ಕಿಳಿದ ಡಿಕೆಶಿ

|
Google Oneindia Kannada News

ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಎರಡೂ ಪಕ್ಷಗಳಿಗೆ ಪ್ರಮುಖವಾಗಿರುವ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ.

ಜೆಡಿಎಸ್ ಪಕ್ಷ ಇಲ್ಲಿ ಅಷ್ಟೇನೂ ಪ್ರಬಲವಾಗಿಲ್ಲದಿರುವುದರಿಂದ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಈಗಾಗಲೇ, ಒಂದು ಸುತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದಾರೆ.

ಹುಬ್ಬಳ್ಳಿ-ಧಾ. ಪಾಲಿಕೆ ಚುನಾವಣೆ; ಬಿಜೆಪಿಯ ಪ್ರಣಾಳಿಕೆ ಹುಬ್ಬಳ್ಳಿ-ಧಾ. ಪಾಲಿಕೆ ಚುನಾವಣೆ; ಬಿಜೆಪಿಯ ಪ್ರಣಾಳಿಕೆ

ಮೂರು ಮಹಾನಗರಪಾಲಿಕೆಗೆ ಮುನ್ನ ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆಯನ್ನು ಮಾಡಿದ್ದಾರೆ. ಜನಾಶೀರ್ವಾದ ಯಾತ್ರೆಯ ಬದಲು ಕ್ಷಮೆಯಾಚನೆ ಯಾತ್ರೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಲೇವಡಿ ಮಾಡಿದ್ದಾರೆ.

ಈ ನಡುವೆ ಮೂರು ಪಾಲಿಕೆಯ ವ್ಯಾಪ್ತಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ, ಕೇಂದ್ರದ ಸಚಿವರೊಬ್ಬರ ನಿಧನ ಮತ್ತು ಅವರ ಶವಸಂಸ್ಕಾರವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಣಾಳಿಕೆಯಲ್ಲಿ ಉಚಿತ ಅಂತ್ಯಸಂಸ್ಕಾರ: ಕ್ಷಮೆಯಾಚಿಸಿದ ಗೋವಿಂದ ಕಾರಜೋಳಪ್ರಣಾಳಿಕೆಯಲ್ಲಿ ಉಚಿತ ಅಂತ್ಯಸಂಸ್ಕಾರ: ಕ್ಷಮೆಯಾಚಿಸಿದ ಗೋವಿಂದ ಕಾರಜೋಳ

 ಮೂರು ಮಹಾನಗರಪಾಲಿಕೆ ಚುನಾವಣೆಯ ದಿನಾಂಕ, ಚುನಾವಣಾ ಆಯೋಗ ಘೋಷಣೆ

ಮೂರು ಮಹಾನಗರಪಾಲಿಕೆ ಚುನಾವಣೆಯ ದಿನಾಂಕ, ಚುನಾವಣಾ ಆಯೋಗ ಘೋಷಣೆ

ಬಹುದಿನಗಳ ಹಿಂದೆಯೇ ಮಾಡಬೇಕಾಗಿದ್ದ ಮೂರು ಮಹಾನಗರಪಾಲಿಕೆ ಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ, ಕೊರೊನಾ ಮೂರನೇ ಅಲೆಯ ಎಚ್ಚರಿಕೆಯ ನಡುವೆ ಘೋಷಣೆ ಮಾಡಿತ್ತು. ಸೆಪ್ಟಂಬರ್ ಮೂರರಂದು ಚುನಾವಣೆ ಮತ್ತು ಸೆಪ್ಟಂಬರ್ ಆರರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಜನಪರ ಕಾರ್ಯದ ಆಶ್ವಾಸನೆಯನ್ನು ನೀಡಿದೆ.

 ಬಿಜೆಪಿ ನಾಯಕರ ಸಾವನ್ನು ಮುಂದಿಟ್ಟುಕೊಂಡು ಆಖಾಡಕ್ಕಿಳಿದ ಡಿಕೆಶಿ

ಬಿಜೆಪಿ ನಾಯಕರ ಸಾವನ್ನು ಮುಂದಿಟ್ಟುಕೊಂಡು ಆಖಾಡಕ್ಕಿಳಿದ ಡಿಕೆಶಿ

ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಕೋವಿಡ್ ನಿಂದಾಗಿ ನಿಧನ ಹೊಂದಿದ್ದ ಕೇಂದ್ರ ಸಚಿವ ಮತ್ತು ಬೆಳಗಾವಿಯ ಸಂಸದರೂ ಆಗಿದ್ದ ಸುರೇಶ್ ಅಂಗಡಿಯವರ ಹೆಸರನ್ನು ಉಲ್ಲೇಖಿಸಿದ್ದರು. "ಕೊರೊನಾದಿಂದ ಮೃತ ಪಟ್ಟ ಅಂಗಡಿಯವರ ಶವವನ್ನೂ ಅವರ ಸ್ವಂತ ಊರಿಗೆ ತರಲು ಆಗಲಿಲ್ಲ. ಸಚಿವರೂ ಎನ್ನದೇ ಕೇಂದ್ರ ಸರಕಾರ ಅವರ ಶವಸಂಸ್ಕಾರವನ್ನು ಅಮಾನವೀಯತೆಯಿಂದ ಮಾಡಿತು. ಇಂತಹ ಪಕ್ಷದವರಿಗೆ ಮತ ಹಾಕಬೇಕಾ"ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದರು.

 ಸುರೇಶ್ ಅಂಗಡಿಯವರ ಮೃತ ದೇಹ ಜಾರಿ ಗುಂಡಿಗೆ ಬಿದ್ದಿತ್ತು

ಸುರೇಶ್ ಅಂಗಡಿಯವರ ಮೃತ ದೇಹ ಜಾರಿ ಗುಂಡಿಗೆ ಬಿದ್ದಿತ್ತು

65ವರ್ಷದ ಸುರೇಶ್ ಅಂಗಡಿಯವರಿಗೆ ಕೊರೊನಾ ವೈರಸ್ ತಗಲಿ ಒಂದು ವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ, ಸೆಪ್ಟಂಬರ್ 24, 2020ರಂದು ನಿಧನ ಹೊಂದಿದ್ದರು. ಕೋವಿಡ್ ನಿಯಮದ ಪ್ರಕಾರ ಅವರ ಶವಸಂಸ್ಕಾರವನ್ನು ದೆಹಲಿಯಲ್ಲೇ ನಡೆಸಲಾಗಿತ್ತು. ಈ ವೇಳೆ ಅವರ ಮೃತ ದೇಹ ಜಾರಿ ಗುಂಡಿಗೆ ಬಿದ್ದಿತ್ತು. ಈ ವಿಚಾರವನ್ನು ಡಿಕೆಶಿಯವರು ಬೆಳಗಾವಿ ಪಾಲಿಕೆ ಚುನಾವಣೆಯ ವೇಳೆ ಪ್ರಸ್ತಾವಿಸಿದ್ದಾರೆ.

 ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡಿದೆ

ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡಿದೆ

ಎಲ್ಲಾ ಬಗೆಯ ತೆರಿಗೆಯನ್ನು ಶೇ. 50ರಷ್ಟು ಮನ್ನಾ, ಕಾರ್ಮಿಕರಿಗೆ ತಲಾ ಐದು ಸಾವಿರ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರದ ತನಿಖೆ.. ಹೀಗೆ, ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆಯನ್ನು ನೀಡಿದೆ. ಜೊತೆಗೆ, ಸುರೇಶ್ ಅಂಗಡಿಯವರ ನಿಧನವನ್ನೂ ಕಾಂಗ್ರೆಸ್ ಮುನ್ನಲೆಗೆ ತಂದಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಆ ಭಾಗದ ಪ್ರಮುಖ ನಾಯಕರು ಬೆಂಬಲವನ್ನು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡಿದೆ.

   ಈಗಿನ ಹೊಸ ಶಿಕ್ಷಣ ನೀತಿ ಸರಿಯಿಲ್ಲ ,ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿ ಬದಲಾಗಬಾರದು | Basavaraj Horatti
   English summary
   Belagavi Municipal Corporation Election: KPCC President DK Shivakumar talks about Suresh Angadi Cremation in delhi in his Press Conference. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X