ಬಿಯರ್ vs ವಿಸ್ಕಿ ಯಾವುದು ಬೆಸ್ಟ್, ಮದ್ಯ ಪ್ರಿಯರ ಆಯ್ಕೆ ಏನು ?
Beer vs Whisky: ವಿಸ್ಕಿ ಅಥವಾ ಬಿಯರ್ ಯಾವುದು ಆರೋಗ್ಯ ಒಳ್ಳೆಯದು. ಮದ್ಯ ಪ್ರಿಯರಿಗೆ ಬಿಯರ್ vs ವಿಸ್ಕಿ ಎನ್ನುವ ವ್ಯತ್ಯಾಸವೇನು ಇಲ್ಲ. ಎರಡನ್ನೂ ಇಷ್ಟಪಡುವವರು ಇದ್ದಾರೆ. ಬಿಯರ್ ಕುಡಿದರೆ ದಪ್ಪ ಆಗುತ್ತೇವೆ. ವಿಸ್ಕಿ ಕುಡಿದರೆ ಕೊಬ್ಬಿನಾಂಶ ದೇಹದಲ್ಲಿ ಸೇರುವುದಿಲ್ಲ ಎನ್ನುವ ಪರಿಕಲ್ಪನೆ ಹಲವರಲ್ಲಿ ಇದೆ. ಅಪರೂಪಕ್ಕೊಮ್ಮೆ ಕುಡಿಯುವಾಗ ವಿಸ್ಕಿ ಅಥವಾ ಬಿಯರ್ ನಡುವೆ ಯಾವುದು ಬೆಸ್ಟ್. ಬಿಯರ್ ಅಥವಾ ವಿಸ್ಕಿ ಯಾವುದು ಹೆಚ್ಚಿನ ಲಾಭ ಹೊಂದಿದೆ. ಯಾವುದರಲ್ಲಿ ಯಾವ ಅಂಶ ಇದೆ ಎನ್ನುವ ಇಂಟ್ರಸ್ಟಿಂಗ್ ಮಾಹಿತಿ ಈ ಲೇಖನದಲ್ಲಿದೆ.
ಬಿಯರ್ vs ವಿಸ್ಕಿಯ ನಡುವೆ ಹಲವು ವ್ಯತ್ಯಾಸಗಳು ಇವೆ. ಸಾಮಾನ್ಯವಾಗಿ ಯಾರಾದರೂ ಕುಡಿಯುವುದಕ್ಕೆ ಮೊದಲು ಪ್ರಾರಂಭಿಸಿದರೆ ಅವರು ಬಿಯರ್‌ನಿಂದ ಶುರು ಮಾಡಿಕೊಳ್ಳತ್ತಾರೆ. ಬಿಯರ್ ಕುಡಿಯುವವರನ್ನು ಹೊಸ ಕುಡುಕರು ಅಂತಲೂ ಹೇಳಬಹುದು. ಆದರೆ ಹಲವರು ಹಾರ್ಡ್ ಡ್ರಿಂಕ್ಸ್‌ಗಿಂತಲೂ ಸಾಫ್ಟ್ ಡ್ರಿಂಕ್ಸ್‌ನಂತೆ ಬಿಯರ್ ಆಯ್ಕೆ ಮಾಡುವುದು ಇದೆ. ಮದ್ಯದಲ್ಲಿ ಇರುವ ಕ್ಯಾಲೋರಿಗಳು, ಸಕ್ಕರೆ ಅಂಶ ಹಾಗೂ ಆಲ್ಕೋಹಾಲ್‌ನಂತಹ ಅಂಶಗಳು ಪರಿಣಾಮ ಬೀರುತ್ತವೆ. ಕಾರ್ಬೋಹೈಡ್ರೇಟ್‌ಗಳು ಅಥವಾ ಸಕ್ಕರೆ ಅಂಶವಿಲ್ಲದೆ ಇರುವ ವಿಸ್ಕಿಯಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತದೆ. ಆದರೆ, ಅದೇ ಬಿಯರ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಬಿ ವಿಟಮಿನ್ ಅಂಶಗಳು ಇರುತ್ತವೆ.

ವಿಸ್ಕಿ vs ಬಿಯರ್ ನಡುವಿನ ವ್ಯತ್ಯಾಸವೇನು, ಯಾವುದು ಉತ್ತಮ?
ಹಾರ್ಡ್ ಲಿಕ್ಕರ್ ಇಲ್ಲವೇ ಡಿಸ್ಟಿಲ್ಡ್ ಸ್ಪಿರಿಟ್ ಆಗಿರುವ ವಿಸ್ಕಿಯನ್ನು ಧಾನ್ಯಗಳನ್ನು ಸಂಸ್ಕರಿಸುವ ಮೂಲಕ ತಯಾರಿಸಲಾಗುತ್ತದೆ. ಇದು ಬಿಯರ್‌ಗಿಂತ ಗಮನಾರ್ಹವಾಗಿ ಹೆಚ್ಚಿನ ಆಲ್ಕೋಹಾಲ್ ಅಂಶವನ್ನು ಒಳಗೊಂಡಿರುತ್ತದೆ. ವಿಸ್ಕಿಯನ್ನು ಸಾಮಾನ್ಯವಾಗಿ ನೀರು, ಮಾಲ್ಟ್, ಹಾಪ್ಸ್ ಹಾಗೂ ಯೀಸ್ಟ್‌ನಂತಹ ಪದಾರ್ಥಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ವಿಸ್ಕಿಯು ಹೆಚ್ಚಿನ ಕಿಕ್ ಕೊಡುತ್ತದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಆಲ್ಕೋಹಾಲ್ ಸಾಂದ್ರತೆ. ಬಿಯರ್ ಇಷ್ಟೊಂದು ಪರಿಣಾಮ ಬೀರಲ್ಲ. ಬಿಯರ್ ಅನ್ನು ಗೋಧಿ, ಬಾರ್ಲಿ ಮತ್ತು ಧಾನ್ಯಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.
ವಿಸ್ಕಿ ಹಾಗೂ ಇತರ ಸ್ಪಿರಿಟ್ (ಮದ್ಯಗಳ) ಪ್ರಯೋಜನವೆಂದರೆ ಶೂನ್ಯ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಬಿಯರ್ ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುತ್ತದೆ. ನೀವು ತಿಂಗಳುಗಳ ಕಾಲ ನಿರಂತರವಾಗಿ ಬಿಯರ್ ಸೇವನೆ ಮಾಡಿದರೆ, ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬಿಯರ್ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿನ ಫೀನಾಲಿಕ್ ಎನ್ನುವ ಅಂಶ ಇದಕ್ಕೆ ಕಾರಣ. ಬಿಯರ್ ಅನ್ನು ಬಾರ್ಲಿ ಮಾಲ್ಟ್‌ನಿಂದ ತಯಾರಿಸಲಾಗುತ್ತದೆ. ವಿಸ್ಕಿ ಮತ್ತು ಬಿಯರ್ ಎರಡೂ ಎಥೆನಾಲ್ ಅಂಶವನ್ನು ಒಳಗೊಂಡಿದೆ. ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದ ಲಾಭಗಳಿದೆಯಾದರೂ. ಇದರಿಂದ ಆರೋಗ್ಯದ ಮೇಲೆ ಅಲ್ಪ ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತೆ ಇಲ್ಲ.
ವಿಸ್ಕಿಯಲ್ಲಿ ಹೆಚ್ಚಿನ ಆಲ್ಕೋಹಾಲ್ ಅಂಶ ಇರುವ ಕಾರಣದಿಂದ ಅದು ಬಿಯರ್ ಗಿಂತ ವೇಗವಾಗಿ ಕಿಕ್ ಹೇರುವುದಕ್ಕೆ ಕಾರಣವಾಗಬಹುದು. ವಿಸ್ಕಿ ಹಾಗೂ ಇನ್ನಿತರ ಮದ್ಯ ಸೇವನೆಯಿಂದಾಗಿ ಹ್ಯಾಂಗೊವರ್ ಅವಾ ಕಿಕ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಸ್ಕಿ ಸೇವನೆ ಮಾಡಿದ ನಂತರ ಅಥವಾ ಮರುದಿನ ತಲೆನೋವು, ವಾಕರಿಕೆ ಹಾಗೂ ಆಯಾಸ ಅನುಭವವಾಗುವ ಸಾಧ್ಯತೆಯೂ ಇದೆ.
ವಿಸ್ಕಿಗಿಂತ ಬಿಯರ್ ಬೆಟರ್ ?
ಇನ್ನು ವಿಸ್ಕಿ ಮದ್ಯವು ಬಿಯರ್‌ಗಿಂತಲೂ ಉತ್ತಮ ಎನ್ನುವ ಭಾವನೆ ಹಲವರಲ್ಲಿ ಇದೆ. ಆದರೆ ಬಿಯರ್ ಹಾಗೂ ವಿಸ್ಕಿ ಎರಡೂ ಸಹ ಆರೋಗ್ಯದ ಮೇಲೆ ಸಮಾನ ಪ್ರಮಾಣದಲ್ಲಿ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇದೆ. ನಿರಂತರವಾಗಿ ಬಿಯರ್ ಸೇವನೆ ಮಾಡುವುದರಿಂದಾಗಿ ನಿಮ್ಮ ದೇಹದ ತೂಕ ಹೆಚ್ಚಾಗಿ ಕೊಬ್ಬಿನ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ವಿಸ್ಕಿ ಸೇವನೆಯಿಂದ ಲಿವರ್ ಹಾಗೂ ದೇಹದ ಇತರ ಭಾಗಗಳಿಗೆ ಹಾನಿಯಾಗುವ ಸಾಧ್ಯತೆಯೂ ಇದೆ.
ಬಿಯರ್ ನಿಂದ ವಿಸ್ಕಿ ವರೆಗೆ: ಬಹುತೇಕ ಮದ್ಯ ಪ್ರಿಯರು ಬಿಯರ್‌ನಿಂದ ಪ್ರಾರಂಭ ಮಾಡಿ ವಿಸ್ಕಿಗೆ ಬಂದು ನಿಲ್ಲುತ್ತಾರೆ. ಬಿಯರ್ ತಾನೆ ಸಾಫ್ಟ್ ಡ್ರಿಂಕ್ಸ್ ಎಂದು ಪ್ರಾರಂಭವಾಗುವ ಕುಡಿತ ಕ್ರಮೇಣವಾಗಿ ವಿಸ್ಕಿ, ಬ್ರಾಂದಿ ಹಾಗೂ ರಂ ವರೆಗೆ ಬಂದು ನಿಲ್ಲುತ್ತದೆ. ಒಂದರ್ಥದಲ್ಲಿ ಎಲ್ಲಾ ಮದ್ಯಗಳೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ.
ಗಮನಿಸಿ: ಮದ್ಯ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ. ಎರಡೂ ಮದ್ಯಗಳ ನಡುವಿನ ವ್ಯತ್ಯಾಸ ಹಾಗೂ ಪರಿಣಾಮ ತಿಳಿಸುವುದಷ್ಟೇ ಇದರ ಉದ್ದೇಶ.












Click it and Unblock the Notifications