ಬೇಡ್ತಿ-ವರದಾ ನದಿ ಜೋಡಣೆ: ಸಮಾವೇಶ, ಹೋರಾಟ ಬಗ್ಗೆ ವಿವರಿಸಿದ ಬಸವರಾಜ ಬೊಮ್ಮಾಯಿ
ಹಾವೇರಿ: ಬೇಡ್ತಿ ವರದಾ ನದಿ ಜೋಡಣೆ ಯೋಜನೆ ನಮ್ಮ ಬದುಕಿನ ಪ್ರಶ್ನೆ, ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ ನಮ್ಮ ಬದುಕಿಗಾಗಿ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದ ನಿಯೋಗವನ್ನು ಸಿಎಂ, ಡಿಸಿಎಂ ಬಳಿ ತೆಗೆದುಕೊಂಡು ಹೋಗಲಾಗುವುದು. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯಕ್ಕೂ ನಿಯೋಗ ತೆಗೆದುಕೊಂಡ ಹೋಗಿ ಒತ್ತಡ ಹಾಕಲಾಗುವುದು. ಈ ಯೋಜನೆ ಕುರಿತು ಮನವರಿಕೆ ಮಾಡುವ ಅವಶ್ಯಕತೆ ಇದೆ. ಡಿಪಿಆರ್ ನಲ್ಲಿ ಹಾವೇರಿ ಜಿಲ್ಲೆಯಲ್ಲಿ ನೀರು ಸಂಗ್ರಹಿಸುವ ಪ್ರತ್ಯೇಕ ವ್ಯವಸ್ಥೆ ಆಗಬೇಕು. ಅದನ್ನು ಸೇರಿಸುವಂತೆ ಈಗಾಗಲೇ ಬರೆದಿದ್ದೇನೆ ಅದನ್ನು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕರು, ಸಂಸದರು, ಸ್ವಾಮೀಜಿಗಳು ರೈತ ಸಂಘಟನೆ ಮುಖಂಡರು ಸಿಎಂ, ಡಿಸಿಎಂ ಭೇಟಿ ಮಾಡುವುದು, ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಸಚಿವರನ್ನು ಭೇಟಿ ಮಾಡಿ ಬೇಡ್ತಿ ವರದಾ ನದಿ ಜೋಡಣೆಯ ಕಾರ್ಯಗತ ಗೊಳಿಸಲು ಒತ್ತಡ ಹೇರಲಿದ್ದೇವೆ.
ಜಿಲ್ಲೆ ಪ್ರಮುಖ ತಾಲೂಕುಗಳಿಗೆ ನೀರಿನ ಅಗತ್ಯವಿದೆ
ಇದೇ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಪ್ರತಿ ಗ್ರಾಮದಲ್ಲೂ ಬೇಡ್ತಿ-ವರದಾ ನದಿ ನೀರು ಜೋಡಣೆ ಕುರಿತು ಜನ ಜಾಗೃತಿ ಸಭೆ ಹಮ್ಮಿಕೊಳ್ಳಲಿದ್ದೇವೆ. ತುಂಗಭದ್ರಾ ವರದಾ ನದಿ ಪಾತ್ರದಲ್ಲಿ ಇರುವುದರಿಂದ ಕುಡಿಯುವ ನೀರಿನ ದೃಷ್ಟಿಯಿಂದ ಅವಶ್ಯಕತೆಯಿದೆ. ಹಾವೇರಿ, ಹಾನಗಲ್ ಬ್ಯಾಡಗಿ, ಶಿಗ್ಗಾವಿ, ಸವಣೂರು ಬಂಕಾಪುರ ಎಲ್ಲ ಪಟ್ಟಣಗಳಿಗೂ ಕುಡಿಯುವ ನೀರು ಅವಶ್ಯಕತೆ ಇದೆ. ಇದನ್ನು ಗಮನಿಸಲು ತಜ್ಞರ ಸಮಿತಿ ಮತ್ತು ಲೀಗಲ್ ಟೀಂ ರಚಿಸುವುದು. ಹುಕ್ಕೇರಿ ಸದಾಶಿವ ಸ್ವಾಮೀಜಿ ಪರಮಪೂಜ್ಯರ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.
ಬಯಲು ಸಿಮೆಯ ಜಿಲ್ಲೆಗಳ ಸಹಕಾರ ಪಡೆಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಭಾಗದ ಶಾಸಕರು ಮತ್ತು ಸಂಸತ್ ಸದಸ್ಯರ ಬೆಂಬಲ ಪಡೆದು ದೊಡ್ಡ ಜನಾಂದೋಲನ ಮಾಡುತ್ತೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ನಮ್ಮ ಬದುಕುವ ಹಕ್ಕಿಗಾಗಿ ಹೋರಾಟ ಯಾರ ವಿರುದ್ಧವೂ ಅಲ್ಲ. ಅಗತ್ಯ ಬಿದ್ದರೆ ಹಾವೇರಿಯಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರ ಡಿಪಿಆರ್‌ಗೆ ಒಪ್ಪಿಗೆ ನೀಡಿದೆ
ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದೆ. ಈಗ ಡಿಪಿಆರ್ ಮಾಡಲು ಎಂಒಯು ಸೈನ್ ಆಗಿದೆ. ಅವರು ವಿರೋಧ ಮಾಡುತ್ತಾರೆಂದು ನಾವು ವಿರೋಧ ಮಾಡುತ್ತಿಲ್ಲ ಇದು ನಮ್ಮ ಬದುಕಿನ ಪ್ರಶ್ನೆ ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ ನಮ್ಮ ಬದುಕಿಗಾಗಿ ಹೋರಾಟ. ಸುಮಾರು ಇಪ್ಪತೈದು ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಡಿಪಿಆರ್ ಆಗುವುದರೊಳಗೆ ಹೆಚ್ಚು ಜನರ ಜಾಗೃತಿ ಮಾಡಲು ಸಾಧ್ಯ ವಿದೆಯೋ ಅಷ್ಟು ಜಾಗೃತಿ ಮೂಡಿಸಲಿದ್ದೇವೆ.
ಇದು ಅಂತಾರಾಜ್ಯ ಸಮಸ್ಯೆಯಲ್ಲ
ಬೇಡ್ತಿ- ವರದಾ- ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ ಹೊರತು, ಇದು ಅಂತಾರಾಜ್ಯ ನದಿ ಸಮಸ್ಯೆ ಅಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ನೆರೆಯ ರಾಜ್ಯಗಳ ಜೊತೆಗೆ ನದಿ ವಿವಾದ ಇದೆ. ನದಿ ನಮ್ಮೂರಲ್ಲಿ ಹುಟ್ಟಿದೆ ನಾವು ಕೊಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಹರಿಯುವ ನದಿ, ನಿಸರ್ಗದ ಸ್ವತ್ತು. ಅದು ತನ್ನದೇ ಆದ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ.
ಸದರಿ ಯೋಜನೆಯಡಿ ಎರಡು ಕಡೆಯಿಂದ ನೀರು ತೆಗೆದಾಗ ಡ್ಯಾಮ್ ಬದಲು ಬ್ಯಾರೆಜ್ ಕಟ್ಟುತ್ತೇವೆ. ನದಿ ಪಾತ್ರದ ಹೊರಗಡೆಯಿಂದ ನದಿ ನೀರನ್ನು ಲಿಪ್ಟ್ ಮಾಡುವ ವ್ಯವಸ್ಥೆ ಮಾಡುತ್ತೇವೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಡಿಪಿಆರ್ ಅಂಶಗಳ ಕುರಿತು ತಜ್ಞರು ತೀರ್ಮಾನ ಮಾಡುತ್ತಾರೆ. ನಾವು ನದಿ ಪಾತ್ರದ ಜನರನ್ನು ಕಡೆಗಣಿಸುತ್ತಿಲ್ಲ. ಹಾಗೆ ನೋಡಿದರೆ ಕೃಷ್ಣಾ ,ತುಂಗಾ ಮೇಲ್ದಂಡೆ ಯೋಜನೆ ಆಗುತ್ತಿರಲಿಲ್ಲ. ಬ್ಯಾಡಗಿ, ಹಾನಗಲ್, ಶಿಗ್ಗಾವಿ ಸವಣೂರಲ್ಲಿ ಏತ ನಿರಾವರಿ ವರದಾ ನದಿಯಿಂದ ಮಾಡಿದ್ದೇವೆ. ನಿಮ್ಮೂರಿನ ಮುಂದಿನ ಭವಿಷ್ಯ ತೀರ್ಮಾನ ಮಾಡುವುದು ಬೇಡ್ತಿ ವರದಾ ನದಿ ಜೋಡಣೆಯಿಂದ ಎಂದು ಹೇಳಿದರು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications