Basavaraj Rayareddy profile: ಸೋಲಿಲ್ಲದ ಸರದಾರ ಬಸವರಾಜ ರಾಯರೆಡ್ಡಿ
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ. ಮಾಜಿ ಸಚಿವರೂ ಆಗಿದ್ದ ಅವರು ಲೋಕಸಭೆಯ ಸದಸ್ಯರೂ ಆಗಿ ಸಂಸತ್ತು ಪ್ರವೇಶಿಸಿದ್ದವರು. ಸಿದ್ದರಾಮಯ್ಯ ಬೆಂಬಲಿಗರಲ್ಲಿ ಅವರೂ ಒಬ್ಬರು. ಕಳೆದ ಐದು ಬಾರಿಯಿಂದಲೂ ಸತತವಾಗಿ ವಿಧಾನಸಭೆಗೆ ಅವರು ಆಯ್ಕೆಯಾಗುತ್ತಾ ಬಂದಿದ್ದಾರೆ.
ಸಪ್ಟೆಂಬರ್ 6, 1956 ರಂದು ಜನಿಸಿದ ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಇದಕ್ಕೂ ಮೊದಲು ಅವರು ಜೆಡಿಎಸ್‌ನಲ್ಲಿ ಇದ್ದರು. ಯಲಬುರ್ಗಾ ಶಾಸಕರಾಗಿರುವ ಇವರ ತಂದೆ ಬಸಲಿಂಗಪ್ಪ. ಬಿಎ ಎಎಲ್‌ಎಲ್‌ಬಿ ಪದವೀಧರರಾಗಿರುವ ರಾಯರೆಡ್ಡಿಯವರು ಧಾರವಾಡ ವಿಶ್ವೇಶ್ವರಯ್ಯ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದಾರೆ.

ರಾಯರೆಡ್ಡಿ ಅವರು ಕರ್ನಾಟಕ ವಿಧಾನಸಭೆಯ ಐದು ಅವಧಿಯ ಸದಸ್ಯರಾಗಿದ್ದಾರೆ ಮತ್ತು 11 ನೇ ಲೋಕಸಭೆಯ ಒಂದು ಅವಧಿಯ ಸದಸ್ಯರಾಗಿದ್ದಾರೆ. ಜೂನ್ 2016 ರಲ್ಲಿ ರಾಯರೆಡ್ಡಿ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಕ್ಯಾಬಿನೆಟ್ ಮಂತ್ರಿಯಾಗಿ ಸೇರ್ಪಡೆಗೊಂಡರು ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದರು.
ರಾಯರೆಡ್ಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನವರು ಮತ್ತು ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2000 ರ ಆರಂಭದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ್ದರು. ರಾಯರೆಡ್ಡಿ ಅವರು 1985 ರಲ್ಲಿ ಜನತಾ ದಳ ಟಿಕೆಟ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 5000 ಮತಗಳಿಂದ ಗೆದ್ದು ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.

1989 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಯರೆಡ್ಡಿ ಜನತಾ ದಳ ಟಿಕೆಟ್‌ನಲ್ಲಿ ನಿಂತು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 2000 ಮತಗಳಿಂದ ಗೆದ್ದರು. 1996 ರಲ್ಲಿ ಅವರು 11 ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಜನತಾ ದಳ ಟಿಕೆಟ್‌ನಲ್ಲಿ ಸಂಸದರಾಗಿ ಆಯ್ಕೆಯಾದರು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅನ್ವರಿ ಬಸವರಾಜ್ ಪಾಟೀಲ್ ಅವರನ್ನು ಸುಮಾರು 70,000 ಮತಗಳಿಂದ ಸೋಲಿಸಿದ್ದರು.
ರಾಯರೆಡ್ಡಿ ಅವರು 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದರು. ಆದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಈಶಣ್ಣ ಗುಳಗನ್ನವರ್ ವಿರುದ್ಧ ಸುಮಾರು 29,000 ಮತಗಳಿಂದ ಸೋತರು. 2018ರ ಚುನಾವಣೆಯಲ್ಲಿ ಬಿಜೆಪಿಯ ಆಚಾರ್ ಹಾಲಪ್ಪ ಬಸಪ್ಪ ಅವರನ್ನು 13,000 ಮತಗಳ ಅಂತರದಿಂದ ಸೋಲಿಸಿದ್ದರು.
ಅವರೇ ಹೇಳಿಕೊಂಡ ಪ್ರಕಾರ ಬಸವರಾಜ ರಾಯರೆಡ್ಡಿಯವರು ರೂ 3 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದು ರೂ 29 ಲಕ್ಷದ ನಗದು ಹಣವನ್ನಿರಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ರೂ 15 ಲಕ್ಷ ಡಿಪಾಸಿಟ್ ಇರಿಸಿದ್ದಾರೆ ಎಂಬ ವಿವರ ನೀಡಿದ್ದಾರೆ. ಎಲ್‌ಐಸಿ ಇನ್ಶೂರೆನ್ಸ್ ಅನ್ನು ಹೊಂದಿದ್ದು ಅದರ ಮೌಲ್ಯ ರೂ 23 ಲಕ್ಷವಾಗಿದೆ. 30 ಲಕ್ಷದ ರೂ ಚಿನ್ನಾಭರಣಗಳನ್ನು ಹೊಂದಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಇದೆಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 75 ಲಕ್ಷ ಎಂಬುದಾಗಿ ರಾಯರೆಡ್ಡಿ ಮಾಹಿತಿ ನೀಡಿದ್ದಾರೆ.
60 ಲಕ್ಷ ರೂ. ಬೆಲೆಯ ಕೃಷಿಭೂಮಿಯನ್ನು ಶಾಸಕರು ಹೊಂದಿದ್ದು, ರೂ 69 ಲಕ್ಷ ಬೆಲೆಯ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ರೂ 30 ಲಕ್ಷದ ವಾಣಿಜ್ಯ ಕಟ್ಟಡಗಳು ಶಾಸಕರ ಹೆಸರಿನಲ್ಲಿದೆ. ರೂ 70 ಲಕ್ಷ ಮೌಲ್ಯದ ನಿವೇಶನಗಳನ್ನು ಹೊಂದಿದ್ದಾರೆ. ಈ ಎಲ್ಲಾ ಆಸ್ತಿಪಾಸ್ತಿಗಳ ಪ್ರಸ್ತುತ ಬೆಲೆ ರೂ 2 ಕೋಟಿ ಎಂಬ ಮಾಹಿತಿ ಲಭ್ಯವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications