ಪ್ರಧಾನಿ ಮೇಲೆ ಸಿದ್ದರಾಮಯ್ಯ ಟೀಕೆಗೆ ಅಭಿವೃದ್ಧಿ ಲೆಕ್ಕ ಕೊಟ್ಟ ಬೊಮ್ಮಾಯಿ
ಬೆಂಗಳೂರು, ಜನವರಿ 17: ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿ ಅಧೊಗತಿಗೆ ತೆಗೆದುಕೊಂಡು ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಪ್ರಧಾನಿ ವಿರುದ್ಧ ಮಾತನಾಡಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬುಧವಾರ ಟ್ವೀಟ್ ಮಾಡಿದ ಬೊಮ್ಮಾಯಿ ಅವರು, ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನ, ಅಭಿವೃದ್ಧಿ ಬಗ್ಗೆ ಲೆಕ್ಕ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರು ದಿವಸಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ ಮಾಡುವ ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ.

ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಟ ದೇಶಭಕ್ತ, ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿ ಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ದಿವಸಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ ಮಾಡುವ ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ಶ್ರೀ @narendramodi ಅವರು ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿ ಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ @siddaramaiah ತಮ್ಮ ಗಾಢ… https://t.co/1vDDGZjM2u
— Basavaraj S Bommai (@BSBommai) January 17, 2024
ತೆರಿಗೆ, ಅನುದಾನ ಹಂಚಿಕೆ ಲೆಕ್ಕ ಕೊಟ್ಟ ಬೊಮ್ಮಾಯಿ
ಯುಪಿಎ 2004-2014ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದಿತ್ತು. ಪ್ರಧಾನಿ ಮೋದಿಯವರು ಅವಧಿಯಲ್ಲಿ 2014-2023 ಡಿಸೆಂಬರ್ ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂ. ಬಂದಿದ್ದು, ಈ ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದು ವಿವರಿಸಿದರು.

ಮೇ ತಿಂಗಳಲ್ಲಿ 360, ಕೋಟಿ ರೂ. ಬಿಡುಗಡೆ ಆಗಿದ್ದು, ಈಗ ಮತ್ತೆ 348 ಕೋಟಿ ರೂ. ಬಿಡುಗಡೆಗೆ ತೀರ್ಮಾನಿಸಿದೆ. ಇಷ್ಟಾದರೂ ಕೂಡ ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ? ಎಂದು ಪ್ರಶ್ನೆ ಮಾಡಿದರು.












Click it and Unblock the Notifications