Assembly Session: ಯತ್ನಾಳ್ ಕುಳಿತುಕೊಳ್ಳಪ್ಪ ನೀನು ವಿರೋಧ ಪಕ್ಷದ ನಾಯಕ ಆಗಲ್ಲ: ಸಿದ್ದರಾಮಯ್ಯ ಭವಿಷ್ಯ
ಬೆಂಗಳೂರು, ಜುಲೈ 12: ವಿಧಾನಮಂಡಲ ಅಧಿವೇಶದಲ್ಲಿ ಇಂದು ವಿರೋಧ ಪಕ್ಷದ ನಾಯಕರ ವಿಚಾರವಾಗಿ ಉಭಯಸದನದ ನಾಯಕರು ಚರ್ಚೆ ನಡೆಸುತ್ತಿದ್ದು, ಸದನದಲ್ಲಿ ಪದೇ ಪದೇ ಎದ್ದು ನಿಲ್ಲುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.
ಹೌದು, ಯತ್ನಾಳ್ ಅವರೇ ಯಾಕೆ ಎದ್ದು ಪದೇ ಪದೇ ಮಾತಾಡ್ತೀರಿ.ನೀವು ವಿಪಕ್ಷದ ಸ್ಥಾನದ ಒಬ್ಬ ಆಕಾಂಕ್ಷಿ ಎಂದು ಗೊತ್ತಿದೆ. ನನ್ನನ್ನು ವಿರೋಧ ಪಕ್ಷ ನಾಯಕನನ್ನಾಗಿ ಮಾಡೇ ಮಾಡುತ್ತಾರೆ ಎಂದು ಕೊಂಡಿದ್ದೀರಾ. ಆದರೆ, ನನಗಿರುವ ಮಾಹಿತಿ ಪ್ರಕಾರ ನಿಮ್ಮನ್ನ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ಆಗಲ್ಲ, ಆರಗ ಆಕಾಂಕ್ಷಿ ಅಲ್ಲ, ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ ಹಾಗೂ ಆರ್ ಅಶೋಕ್ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮಾತಿನ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದ್ರಿ, ಕುಮಾರಸ್ವಾಮಿ ಸಿಎಂ ಆದರು. ನಾನು ವಿಪಕ್ಷ ನಾಯಕ ಆಗಲ್ಲ ಅಂತ ಹೇಗೆ ಹೇಳ್ತೀರಿ
ಈಗಾಗಲೇ ನೀವು ವಿಪಕ್ಷ ನಾಯಕ ಸ್ಥಾನ ಕೂಡ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದೀರಾ..? ಎಂದು ಪ್ರಶ್ನಿಸಿದ ಅವರು, ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹಚ್ಕೊಳ್ಳಲ್ಲ. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದ್ದೀರಾ ಅಂತಾಯ್ತು ಎಂದರು.
ಇನ್ನೂ ಬಸವನಗೌಡ ಪಾಟೀಲ್ ಯತ್ನಾಳ ಮಾತಿಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಮಾತು ಮುಂದುವರಿಸಿ, ನನ್ನ ರಾಜಕೀಯ ಜೀವನದಲ್ಲಿ ಅಡ್ಜಸ್ಟಮೆಂಟ್ ರಾಜಕೀಯ ಮಾಡಿಲ್ಲ. ನೀನು ಎರಡ್ಮೂರು ಬಾರಿ ಶಾಸಕ ಆಗಿರಬೇಕು ಅಷ್ಟೇ. ನಾನು ದೇಶಪಾಂಡೆ, ಯಡಿಯೂರಪ್ಪ, ಬಿ ಆರ್ ಪಾಟೀಲ್ ಕಾಲದಲ್ಲಿ ಶಾಸಕ ಆಗಿದ್ದೇನೆ. ನನ್ನ ಜೀವನದಲ್ಲಿ ಅಡ್ಜಸ್ಟಮೆಂಟ್ ಗೊತ್ತಿಲ್ಲ. ಯಾರ ಜತೆಗಾದರೂ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿರೋದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಗ್ಯಾರಂಟಿ ಘೋಷಣೆಗಳ ಕುರಿತು ಮಾಜಿ ಮುಖ್ಯಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಅಕ್ಕಿ ಬದಲಿಗೆ ಕೊಡುವ ದುಡ್ಡು ಮನೆಗೆ ತೆಗೆದುಕೊಂಡು ಹೋದ್ರೆ ಸಮಸ್ಯೆ ಇಲ್ಲ
ಸಂಜೆ ದುಡ್ಡು ಕೊಡದಿದ್ರೆ ಮಹಿಳೆ ಮೇಲೆ ಗಲಾಟೆ ಮಾಡ್ತಿರುವುದನ್ನ ನೋಡಿದ್ದೇವೆ. ನೀವು ಹಸಿವು ಮುಕ್ತ ಮಾಡುತ್ತೇವೆ ಎಂದು ಹೇಳಿದೀರಾ. ಬೆಳಿಗ್ಗೆ ಎದ್ದ ತಕ್ಷಣ ಬಾರ್ ಒಪನ್ ಆಗುತ್ತಿವೆ.
ನೀವು ಹಣ ಕೊಡುವುದಕಿಂತಲೂ ಬೇರೆ ಅಗತ್ಯ ಆಹಾರ ವಸ್ತುಗಳನ್ನ ಕೊಡಿ. ಅದು ಆಗಸ್ಟ್ ತಿಂಗಳವರೆಗೂ ಆಗಲ್ಲ ಎಂದು ನಿಮ್ಮ ಸಚಿವರು ಹೇಳಿದ್ದಾರೆ. ಗ್ಯಾರಂಟಿ ಕಾರ್ಡ್‌ಗಳಿಗೆ ಸೈನ್ ಹಾಕಿ ಕೊಟ್ಟಿದೀರಾ. ಎಲ್ಲರಿಗೂ ಖಚಿತ ಉಚಿತ ನಿಶ್ಚಿತ ಎಂದು ಹೇಳಿದಿರಾ. ಆದರೆ ಮಂತ್ರಿಯೊಬ್ಬರು ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲು ಆಗಲ್ಲ ಎಂದು ಹೇಳಿದ್ದಾರೆ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದೀರಾ. ಈಗ ಸರಾಸರಿ ಲೆಕ್ಕ ಹಾಕುತ್ತಿದೀರಾ ಎಂದರು.

ಇನ್ನೂ ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸ್ತಿದೀರಿ ಅನ್ಕೊಳ್ಳಿ. ಒಂದು ವರ್ಷದಿಂದ ಬಳಸ್ತಿದ್ರೆ ಸರಾಸರಿ ಅಷ್ಟೇ ಬರುತ್ತೆ, ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ?ನೀವು ಪದೇ ಪದೇ ಮಾತಾಡಿದ್ರೆ ಸಂಸದೀಪಟು ಆಗಲ್ಲ, ನಿಮ್ಮನ್ನ ವಿಪಕ್ಷ ನಾಯಕನಾಗಿಯೂ ಮಾಡಲ್ಲ, ನನಗೆ ಇರುವ ಮಾಹಿತಿ ಪ್ರಕಾರ ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications