ಬ್ರದರ್ಸ್ ವಿರುದ್ಧ ಪ್ರಕರಣ ಹಿಂಪಡೆಯಲು ಪತ್ರ; ಶಾಂತಿ ಕದಡುವ ಪುಂಡಿರಿಗೆ ಡಿಕೆಶಿ ನೇರ ಬೆಂಬಲ: ಯತ್ನಾಳ್
ಬೆಂಗಳೂರು, ಅಕ್ಟೋಬರ್ 03: ಬ್ರದರ್ಸ್ ವಿರುದ್ದ ಪ್ರಕರಣಗಳನ್ನ ಹಿಂಪಡೆಯಲು ಪಾತ್ರ ಬರೆದಿರುವ ಡಿ.ಕೆ ಶಿವಕುಮಾರ್ ರಾಜ್ಯದ ಶಾಂತಿ ಕದಡುವ ಪುಂಡ ಪೋಕರಿಗಳಿಗೆ ನೇರ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಳೆ ಹುಬ್ಬಳ್ಳಿ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳಲ್ಲಿ ದಾಳಿ ಮಾಡಿದ ದಾಳಿಕೋರರ ವಿರುದ್ಧ ಗಲಭೆಕೋರರ ವಿರುದ್ದ ಪ್ರಕರಣಗಳನ್ನ ಹಿಂಪಡೆಯಲು ಸರ್ಕಾರ ಮುಂದಾಗಿರುವುದು ಇವರ ತುಷ್ಟಿಕರಣದ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡುವಂತೆ ಗೃಹ ಇಲಾಖೆಗೆ 'ಪ್ರಭಾವಿ' ಸಚಿವರೊಬ್ಬರು ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 1000 ಜನ ಸೇರಿ ಪೊಲೀಸ್ ಠಾಣೆಗೆ ಕಲ್ಲೆಸೆದಿದ್ದು ಮನ್ನಿಸಲಾಗದ ಅಪರಾಧ ಎಂದು ಈಗಾಗಲೇ ನ್ಯಾಯಾಲಯ ತೀರ್ಪು ನೀಡಿದೆ. ಇವರ ಜಾಮೀನು ಅರ್ಜಿಯನ್ನು ಘನತೆವೆತ್ತ ಕರ್ನಾಟಕ ಉಚ್ಚನ್ಯಾಯಾಲಯವೂ ಸಹ ತಿರಸ್ಕರಿಸಿದೆ.
ಹಳೆ ಹುಬ್ಬಳ್ಳಿ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳಲ್ಲಿ ದಾಳಿ ಮಾಡಿದ ದಾಳಿಕೋರರ ವಿರುದ್ಧ ಗಲಭೆಕೋರರ ವಿರುದ್ದ ಪ್ರಕರಣಗಳನ್ನ ಹಿಂಪಡೆಯಲು ಸರ್ಕಾರ ಮುಂದಾಗಿರುವುದು ಇವರ ತುಷ್ಟಿಕರಣದ ನೀತಿಗೆ ಹಿಡಿದ ಕನ್ನಡಿಯಾಗಿದೆ.
— Basanagouda R Patil (Yatnal) (@BasanagoudaBJP) October 3, 2023
ಬ್ರದರ್ಸ್ ವಿರುದ್ದ ಪ್ರಕರಣಗಳನ್ನ ಹಿಂಪಡೆಯಲು ಪಾತ್ರ ಬರೆದಿರುವ ಡಿ.ಕೆ ಶಿವಕುಮಾರ್ ರಾಜ್ಯದ ಶಾಂತಿ ಕದಡುವ ಪುಂಡ… pic.twitter.com/A6hLML3FfO
ಶಾಂತಿ ಸೌಹಾರದಂತೆ ಹಾಳು ಮಾಡುವ ನಿಟ್ಟಿನಲ್ಲಿ ಅಂದು ಪೊಲೀಸ್ ಠಾಣೆಗೆ ಕಲ್ಲೆಸೆದವರ ಮುಖಗಳನ್ನು ಸಿ.ಸಿ. ಕ್ಯಾಮೆರದಿಂದ ಪಡೆಯಬಹುದು ಹಾಗೂ ಅವರ ಚಹರೆಯನ್ನು ಅದರಿಂದ ಖಾತರಿ ಪಡೆಸಬಹುದು ಎಂದು ದ್ವಿಸದಸ್ಯ ಪೀಠ ಹೇಳಿತ್ತು. ಮುಂದುವರೆದು, ಅಲ್ಲಿ ನೆರೆದಿದ್ದ ಉದ್ರಿಕ್ತರ ಗುಂಪನ್ನು ಅವರ ಮೊಬೈಲ್ ರೆಕಾರ್ಡ್ಸ್ (ಟವರ್ ಲೊಕೇಶನ್) ಮೂಲಕ ಸಹ ಖಾತರಿಗೊಳ್ಳಿಸಬಹುದು, ಹಾಗಾಗಿ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಹಾಳುಗೆಡವಿದ ಉದ್ರಿಕ್ತರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತು ಹಿಡಿದಿತ್ತು.
ಇಂದು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹುಬ್ಬಳ್ಳಿ ಗಲಾಟೆ ಪ್ರಕರಣವನ್ನು ಕೈ ಬಿಡಲು
— Basanagouda R Patil (Yatnal) (@BasanagoudaBJP) October 3, 2023
ಸರ್ಕಾರದ ಸಚಿವರೊಬ್ಬರು ಪ್ರಯತ್ನಿಸುತ್ತಿರುವುದು ಅಧಿಕಾರದ ದುರ್ಬಳಕೆ ಹಾಗೂ ಅಪರಾಧಗಳನ್ನು legitimize ಮಾಡುವ ಪ್ರಯತ್ನ ಎಂದರೆ ತಪ್ಪಾಗುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡಿದ ಪಟ್ಟಭದ್ರ ಹಿತಾಸಕ್ತಿಗಳನ್ನು ಜೈಲಿಗಟ್ಟಿ, ಸರ್ಕಾರಕ್ಕಾದ…
ಇಂದು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹುಬ್ಬಳ್ಳಿ ಗಲಾಟೆ ಪ್ರಕರಣವನ್ನು ಕೈ ಬಿಡಲು ಸರ್ಕಾರದ ಸಚಿವರೊಬ್ಬರು ಪ್ರಯತ್ನಿಸುತ್ತಿರುವುದು ಅಧಿಕಾರದ ದುರ್ಬಳಕೆ ಹಾಗೂ ಅಪರಾಧಗಳನ್ನು legitimize ಮಾಡುವ ಪ್ರಯತ್ನ ಎಂದರೆ ತಪ್ಪಾಗುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡಿದ ಪಟ್ಟಭದ್ರ ಹಿತಾಸಕ್ತಿಗಳನ್ನು ಜೈಲಿಗಟ್ಟಿ, ಸರ್ಕಾರಕ್ಕಾದ ನಷ್ಟವನ್ನು ಅವರಿಂದ ಭರಿಸುವ ಕ್ರಮ ಜರುಗಿಸುವುದನ್ನು ಬಿಟ್ಟು, ಅವರಿಗೆ 'ಶ್ರೀ ರಕ್ಷೆ' ನೀಡುತ್ತಿರುವುದು ಸರ್ಕಾರ ಗಲಭೆಕೋರರ ಪರ ಇದೆ ಎಂದು ಸಾಬೀತಾಗುತ್ತದೆ.
ಇನ್ನೂ ಈ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದು, ಸ್ವತಃ ಕಾಂಗ್ರೆಸ್ ಶಾಸಕರೇ ದಿನಕ್ಕೊಬ್ಬರಂತೆ ಬೀದಿಗಿಳಿದು ಅಸಮಾಧಾನ ಹೊರ ಹಾಕುವ ಮಟ್ಟಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ. ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ತಾಳಮೇಳವಿಲ್ಲದೆ ಹಳಿ ತಪ್ಪಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ಸಿನ ಕಾಗವಾಡ ಶಾಸಕ ರಾಜು ಕಾಗೆ ಹೇಳಿರುವುದು ವಾಸ್ತವಿಕ ಸತ್ಯ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎನ್ನುವುದೇ ಮರೆಯಾಗಿದ್ದು ತುಘಲಕ್ ದರ್ಬಾರ್ ಮಿತಿಮೀರಿದೆ ಎಂದು ಕಿಡಿಕಾರಿದರು.












Click it and Unblock the Notifications