‘ವಂದೇ ಭಾರತ್’ ರೈಲು ಪ್ರಯಾಣಿಕರಿಗೆ ಶೀಘ್ರವೇ ಸಿಹಿಸುದ್ದಿ? ಅರಸೀಕೆರೆಯಲ್ಲೂ ನಿಲ್ಲುತ್ತಾ ರೈಲು?
ಭಾರತೀಯ ರೈಲ್ವೆ ಅಂದ್ರೆ ಶತಮಾನಗಳ ಇತಿಹಾಸ ಇದೆ, ಹೀಗಾಗಿಯೇ ಜಗತ್ತಿನ ಅತಿ ದೊಡ್ಡ ರೈಲ್ವೆ ಇಲಾಖೆಗಳ ಪೈಕಿ ಒಂದು ಎನಿಸಿಕೊಂಡಿದೆ ಭಾರತೀಯ ರೈಲ್ವೆ. ಹೀಗಿದ್ದಾಗ ಭಾರತ ತನ್ನ 'ವಂದೇ ಭಾರತ್' ರೈಲುಗಳ ಮೂಲಕ ಭಾರಿ ಗಮನ ಸೆಳೆದಿದೆ. ಅದರಲ್ಲೂ 'ವಂದೇ ಭಾರತ್' ರೈಲುಗಳಲ್ಲಿ ಪ್ರಯಾಣ ಮಾಡುವ ಖುಷಿಯೇ ಬೇರೆ. ಹೀಗಾಗಿಯೇ ಪ್ರಯಾಣಿಕರ ಪಾಲಿಗೆ 'ವಂದೇ ಭಾರತ್' ಬೆಸ್ಟ್ ರೈಲು ಆಗಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ!
ಹೌದು, ಭಾರತೀಯ ರೈಲ್ವೆ 2024ರಲ್ಲಿ ದೇಶದ 14 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ 60 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲು ಮುಂದಾಗಿದೆ. ಈ ಸಮಯದಲ್ಲೇ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ಬೆಂಗಳೂರು & ಧಾರವಾಡ ವಂದೇ ಭಾರತ್ ರೈಲಿನಲ್ಲಿ, ಅರಸೀಕೆರೆ ಮಾರ್ಗದಲ್ಲಿ ಸಂಚಾರ ಮಾಡುವ 'ವಂದೇ ಭಾರತ್' ರೈಲು ಪ್ರಯಾಣಿಕರಿಗೆ ಈ ಸುದ್ದಿ ಸಖತ್ ಖುಷಿಯನ್ನ ನೀಡಲಿದೆ. ಹಾಗಾದ್ರೆ ಏನದು ಗುಡ್ ನ್ಯೂಸ್? ಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಅರಸೀಕೆರೆ ನಿಲ್ದಾಣದಲ್ಲಿ ವಂದೇ ಭಾರತ್?
ಅಂದಹಾಗೆ ಬೆಂಗಳೂರು TO ಧಾರವಾಡದ ನಡುವೆ ಸಂಚರಿಸುವ 'ವಂದೇ ಭಾರತ್' ಎಕ್ಸ್‌ಪ್ರೆಸ್ ರೈಲನ್ನ ಅರಸಿಕೆರೆಯಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಶಾಸಕ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕೀಶೋರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 'ವಂದೇ ಭಾರತ್' ರೈಲು ಈಗ ದಾವಣಗೆರೆ & ಯಶವಂತಪುರ ಜಂಕ್ಷನ್‌ನಲ್ಲಿ ಮಾತ್ರ ನಿಲುಗಡೆ ಆಗುತ್ತಿದ್ದು. ಅರಸೀಕೆರೆಯಲ್ಲಿ ನಿಲುಗಡೆಗೆ ಅವಕಾಶ ನೀಡಿದ್ರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.
ಹಲವು ದಿನದಿಂದ ಪ್ರಯಾಣಿಕರ ಮನವಿ
ಈ ಕಾರಣಕ್ಕೆ ಹಲವು ದಿನಗಳಿಂದ 'ವಂದೇ ಭಾರತ್' ರೈಲನ್ನು ಅರಸೀಕೆರೆಯಲ್ಲೂ ಸ್ಟಾಪ್ ಮಾಡಿ, ಪ್ರಯಾಣಿಕರಿಗೆ ಅನುಕೂಲ ಆಗುತ್ತೆ ಎಂಬ ಬೇಡಿಕೆ ಕೇಳಿಬಂದಿತ್ತು. ಈಗ ಸಂಸದ ಪ್ರಜ್ವಲ್ ರೇವಣ್ಣ ಈ ಕುರಿತು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಾಗೇ ಪ್ರಜ್ವಲ್ ರೇವಣ್ಣ ಅವರ ತಂದೆ ಶಾಸಕ ಎಚ್.ಡಿ. ರೇವಣ್ಣ ಅವರು ಕೂಡ ಮನವಿ ಮಾಡಿದ್ದಾರೆ. ಈ ಮನವಿಯ ಜೊತೆಗೆ ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿನ ರೈಲು ನಿಲ್ದಾಣ ಅಭಿವೃದ್ಧಿ ಪಡಿಸಲು ಮನವಿ ಪತ್ರ ಸಲ್ಲಿಸಲಾಗಿದೆ.
ಪ್ರಜ್ವಲ್ ರೇವಣ್ಣ ಲೋಕಸಭೆ ಸ್ಪರ್ಧೆ
ರೈಲ್ವೆ ಅಧಿಕಾರಿಗಳ ಭೇಟಿ ನಂತರ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕುಟುಂಬದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದಕ್ಕೆ ಕುಮಾರಣ್ಣ ಅವರೆ ಉತ್ತರ ಕೊಡುತ್ತಾರೆ. ನಾನಂತು ಹಾಸನ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಸಂಸದನಾಗಿ ಕ್ಷೇತ್ರ ಅಭಿವೃದ್ಧಿ ಹಿನ್ನೆಲೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಜನ ನನ್ನ ಕೆಲಸ ಗುರುತಿಸಿದ್ದಾರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಿರುವುದು ಸಂತಸ ಮೂಡಿಸಿದೆ ಅಂದ್ರು ಸಂಸದ ಪ್ರಜ್ವಲ್.

ಶ್ರೀಘ್ರದಲ್ಲೇ ರಾಮ ಮಂದಿರ ಭೇಟಿ
ಅಲ್ಲದೆ ದೇಶದಲ್ಲಿ ಧರ್ಮ ಉಳಿಯಬೇಕು ಎನ್ನುವುದು ಸಾರ್ವಜನಿಕರ ಅಪೇಕ್ಷೆ. ಯಾವ ಹಬ್ಬ ಇಡೀ ಜಗತ್ತು ಒಗ್ಗಟ್ಟಾಗಿ ಆಚರಣೆ ಮಾಡಿರುವುದು ನೋಡಿಲ್ಲ. ಆದರೆ ಶ್ರೀರಾಮ ಪ್ರತಿಷ್ಠಾಪನೆ ದಿನ, ಎಲ್ಲ ಕಡೆ ಹಬ್ಬದ ವಾತಾವರಣ ಇತ್ತು. ಹಾಗಾಗಿ ರಾಮ ಮಂದಿರ ಉದ್ಘಾಟನೆ ಆಗಿದ್ದೂ ಬಹಳ ಸಂತೋಷದ ವಿಷಯ. ನಾನು ಶೀಘ್ರವೇ ಶ್ರೀರಾಮ ಮಂದಿರಕ್ಕೆ ಹೋಗಿ ಬರುತ್ತೇನೆಂದು ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಒಟ್ನಲ್ಲಿ ಈ ಮೂಲಕ 'ವಂದೇ ಭಾರತ್' ರೈಲು ಅರಸೀಕೆರೆಯಲ್ಲಿ ನಿಲುಗಡೆ ಆದರೆ ಸಾಕು ಎಂದು ಪ್ರಯಾಣಿಕರು ಕೇಳಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಇದರಿಂದ ಕಡೂರು, ಬೀರೂರು, ಹಾಸನ ಸುತ್ತಮುತ್ತಲ ಜಾಗಕ್ಕೆ ಹೋಗುವ ಜನರಿಗೂ ಅನುಕೂಲ ಆಗಲಿದೆ. ಹಾಗೇ ಇವರು ಕೂಡ ವಂದೇ ಭಾರತ್ ರೈಲಿನಲ್ಲಿ ಸಂಚಾರ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ಇದೀಗ ಸಂಸದರು ಹಾಗೂ ಸ್ಥಳೀಯ ಶಾಸಕರು ಮಾಡಿರುವ ಮನವಿಗೆ ರೈಲ್ವೆ ಇಲಾಖೆಯು ಯಾವ ರೀತಿ ಸ್ಪಂದಿಸುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications