ಬೆಂಗಳೂರು ದಕ್ಷಿಣ: ಬಿಜೆಪಿ ಭದ್ರ ಕೋಟೆಯನ್ನು ಬೇಧಿಸುವಲ್ಲಿ ಮತ್ತೆ ಕೈ ವಿಫಲ?
ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಎರಡನೇ ಬಾರಿ ಲೋಕಸಭೆ ಪ್ರವೇಶಿಸುವ ತೇಜಸ್ವಿ ಕನಸು ನನಸಾಗುವ ಹಂತಕ್ಕೆ ಬಂದು ನಿಲ್ಲುವಂತೆ ಕಾಣುತ್ತಿದೆ.
ಜಯನಗರ ವಿಧಾಸನಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೇಡ್ಡಿ ಅವರಿಗೆ ಈ ಬಾರಿ ಕಾಂಗ್ರೆಸ್ ಇವರಿಗೆ ಮಣೆ ಹಾಕಿದೆ. ಅಂದಹಾಗೆ ಈ ಕ್ಷೇತ್ರದಲ್ಲಿ ಗೆಲುವು ಸೌಮ್ಯಾ ರೆಡ್ಡಿ ಅವರಿಗೆ ಅನಿವಾರ್ಯ. ಅಲ್ಲದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪಣಕ್ಕೆ ತೊಟ್ಟು ಪ್ರಚಾರವನ್ನು ಮಾಡಿದ್ದರು. ಆದರೆ ಈ ಆರಂಭಿಕ ಮತಗಳ ಏಣಿಕೆಯಲ್ಲಿ ಸೌಮ್ಯ ರೆಡ್ಡಿ ಅವರಿಗೆ ಹಿನ್ನಡೆ ಆಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 181817 ಮತಗಳನ್ನು ಪಡೆದಿದ್ದರೆ, ಸೌಮ್ಯಾ 92419 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ತೇಜಸ್ವಿ ಮತ್ತೊಂದು ಟರ್ಮ್ ಸಂಸದರಾಗುವ ಹೊಸ್ತಿಲಲ್ಲಿ ನಿಂತಿದ್ದಾರೆ.












Click it and Unblock the Notifications