12 ವರ್ಷದ ಬಾಲೆ ಮಗುವಿಗೆ ಜನ್ಮ ನೀಡಿದಳು!

ತುಮಕೂರು ತಾಲೂಕಿನ ನಂದಿಹಳ್ಳಿ ಗ್ರಾಮದ ಸದರಿ ಬಾಲಕಿ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಂದಹಾಗೆ ಇವಳು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ವೈದ್ಯರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದಂತೆ ಆಕೆಗೆ ಡೆಲಿವರಿ ಆಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಗರ್ಭಿಣಿಯಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪೋಷಕರು ವೈದ್ಯರ ಬಳಿ ತಿಳಿಸಿದ್ದಾರೆ. ಇನ್ನು, ಬಾಲಕಿಯನ್ನು ವಿಚಾರಿಸಿದಾಗ ತನ್ನ ಮಾವ ನವೀನ (23) ಇದಕ್ಕೆ ಕಾರಣ ಎಂದು ಆಕೆ ತಿಳಿಸಿದ್ದಾಳೆ.
ಈ ಮಧ್ಯೆ, 7ನೇ ತರಗತಿ ಬಾಲಕಿ ಮಗುವಿಗೆ ಜನ್ಮಕೊಟ್ಟ ಪ್ರಕರಣ ಜಟಿಲವಾಗಿದೆ. ಒಂದು ವೇಳೆ ಪ್ರಕರಣಕ್ಕೆ ಕಾರಣನಾದ ಸೋದರ ಮಾವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರೆ ಮಗು ಮತ್ತು ತಂದೆ ದೂರವಾಗುವುದರ ಜತೆಗೆ ಬಾಲಕಿಯೂ ಆಶ್ರಯ ವಂಚಿತಳಾಗುತ್ತಾಳೆ. ಮತ್ತೊಂದು ಕಡೆ, ಎರಡೂ ಕುಟುಂಬದವರು ಒಪ್ಪಿ ಮದುವೆಗೆ ಮುಂದಾದರೆ ಬಾಲ್ಯ ವಿವಾಹವಾಗುತ್ತದೆ.
ಅಂದಹಾಗೆ, ನಂದಿಹಳ್ಳಿಯ ಲೀಲಾವತಿ- ನರಸಿಂಹಯ್ಯ ದಂಪತಿಯ ಎರಡನೇ ಪುತ್ರಿಯೇ ವಿಚಿತ್ರ/ ದುರ್ಭರ ಪರಿಸ್ಥಿತಿ ಎದುರಿಸುತ್ತಿರುವ ಬಾಲಕಿ. ನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆರೋಪಿ, ಬಾಲಕಿಯ ಸೋದರ ಮಾವ (ತಾಯಿ ತಮ್ಮ) ನವೀನ್ ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.












Click it and Unblock the Notifications