ಬಳ್ಳಾರಿ ಪ್ರಕರಣ: ಮಕ್ಕಳ ಬಾಲ್ಯ ಅತ್ಯಂತ ಸೂಕ್ಷ್ಮವಾದದ್ದು ಕೀಟಲೆ, ಏಕಾಂಗಿತನದ ಬಗ್ಗೆ ಇರಲಿ ಎಚ್ಚರ: ವಸುಧೇಂದ್ರ ಬರಹ
ಬಳ್ಳಾರಿಯ ವಸತಿ ಶಾಲೆಯಲ್ಲಿ ಈಚೆಗೆ ಸಹಪಾಠಿಗಳ ಮೇಲೆ ತೀವ್ರ ಹಲ್ಲೆ ಮಾಡಿ, ಒಬ್ಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ಎದುರಾಗಿದ್ದ ಸಮಸ್ಯೆಗಳ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ಹುಡುಗ ತೀವ್ರ ಕೀಟಲೆ / ಅಪಹಾಸ್ಯಕ್ಕೆ ಗುರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಆಪ್ತ ಸಮಾಲೋಚನೆ ವೇಳೆ ಬಾಲಕ ಈ ವಿಷಯವನ್ನು ವಿಚಾರಣಾ ತಂಡಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ ಈ ಹಾಸ್ಟೆಲ್‌ನಲ್ಲಿ ಎಲ್ಲರೂ ಅಂಧ್ರಪ್ರದೇಶದಿಂದ ವಿದ್ಯಾರ್ಥಿಗಳಾಗಿದ್ದರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಮಾತ್ರ ಕರ್ನಾಟಕದವನಾಗಿದ್ದ ಎಂದು ಹೇಳಲಾಗಿದೆ. ಮಕ್ಕಳ ಬಾಲ್ಯದ ಬಗ್ಗೆ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು ಆಗಿರುವ ವಸುಧೇಂದ್ರ ಅವರ ಬರಹ ಇಲ್ಲಿದೆ.
ಬಾಲ್ಯ ಅತ್ಯಂತ ಸೂಕ್ಷ್ಮವಾದದ್ದು. ಜೊತೆಗಾರರ ಕೀಟಲೆ ಮಕ್ಕಳನ್ನು ಎಂತಹ ದುರಂತಕ್ಕೂ ಮುನ್ನುಗ್ಗುವಂತೆ ಮಾಡುತ್ತದೆ. ಸರಿ-ತಪ್ಪುಗಳ ವಿವೇಚನೆ ಮಾಡುವ ವಿವೇಕವೂ ಆಗಿರುವುದಿಲ್ಲ. ಬಳ್ಳಾರಿಯಲ್ಲಿ ನಡೆದ ಘಟನೆ ನನ್ನನ್ನು ಆಘಾತಕ್ಕೆ ಈಡು ಮಾಡಿತ್ತು. ಅದರ ನಿಜಕಾರಣ ಅರಿತಾಗ ಇನ್ನಷ್ಟು ಮನಸ್ಸಿಗೆ ನೋವಾಗುತ್ತಿದೆ. ಇಡೀ ಹಾಸ್ಟೆಲ್‌ನಲ್ಲಿ ಏಕಾಂಗಿಯಾಗಿ, ಸಹವಾಸಿಗಳ ಲೇವಡಿಯನ್ನು ಅನುಭವಿಸುವುದು ನರಕಯಾತನೆ. ಆದರೆ ಅಂತಹ ಲೇವಡಿಗಳು ಈ ಮಟ್ಟದ ದುರಂತಕ್ಕೆ ಕಾರಣವಾಗುತ್ತವೆ ಎಂದು ಅರಿವಾದಾಗ ಭಯವಾಗುತ್ತದೆ.

ಮನುಷ್ಯ ಯಾವತ್ತೂ ಹೆದರುವುದು ತಾನು ಗುಂಪಿನಿಂದ ದೂರವಾಗುತ್ತಿರುವೆ ಎಂಬ ಭಾವ ಮೂಡಿದಾಗ. ಆದ್ದರಿಂದಲೇ 'ಉಚ್ಛಾಟನೆ', 'ಗಡೀಪಾರು' ಎಂಬ ಶಿಕ್ಷೆಗಳು ಮರಣದಂಡನೆಗಿಂತಲೂ ಭೀಕರವಾದವುಗಳು. ಇಂತಹ ಸ್ಥಿತಿ ಸಮುದಾಯದಲ್ಲಿ ಬರದಂತೆ ನೋಡಿಕೊಳ್ಳಬೇಕು. ಆ ಕಾರಣದಿಂದಲೇ ಬಸವಣ್ಣನವರ 'ಇವನಮ್ಮವ ಇವನಮ್ಮವ ಎನ್ನಿರಯ್ಯ' ಎನ್ನುವ ಮಾತು ಅಮೃತ ತತ್ತ್ವ. ಅಲ್ಪಸಂಖ್ಯಾತ ಸ್ಥಿತಿ ಕ್ರೂರವೆನ್ನಿಸುವುದು ಅದರ ಸಂಖ್ಯೆ ಅತ್ಯಂತ ಚಿಕ್ಕದಾದಾಗ. ಅದು ಏಕಾಂಗಿಯಾಗುವಷ್ಟು ಚಿಕ್ಕದಾದಾಗ ಎಂತಹ ಹೀನ ಕೃತ್ಯಕ್ಕೂ ನಮ್ಮನ್ನು ಪ್ರೇರೇಪಿಸುತ್ತದೆ. ಅದಕ್ಕೆ ವಿರುದ್ಧವಾಗಿ ನಮ್ಮ ಸಮುದಾಯದ ಸಂಖ್ಯೆ ದೊಡ್ಡದಾದಂತೆಲ್ಲಾ ಭಂಡ ಧೈರ್ಯ ಹೆಚ್ಚುತ್ತಾ ಹೋಗಿ, ನಮ್ಮ ಕುಚೇಷ್ಟೆಗಳೂ ಹೆಚ್ಚುತ್ತವೆ. ಆ ಕಾರಣದಿಂದಲೇ ವೈವಿಧ್ಯಮಯ ಬಹುತ್ವತೆಯುಳ್ಳ ಸಮುದಾಯ ಹೆಚ್ಚು ಸಹನಾಶೀಲವಾಗಿರುತ್ತದೆ.
ಮಕ್ಕಳಲ್ಲಿ ಕೊಲೆ ಮಾಡುವಷ್ಟು ದುರಾಲೋಚನೆ ಬರುತ್ತಿರುವುದು ಈ ಕಾಲದ ದುರಂತವೇ ಸರಿ. ಸದ್ಯದ ದೃಶ್ಯ ಮಾಧ್ಯಮಗಳು, ಮೊಬೈಲ್ - ಎಲ್ಲವೂ ಆ ಬಾಲಕನನ್ನು ಅಂತಹ ಮನಸ್ಥಿತಿಗೆ ದೂಡುವುದಕ್ಕೆ ಕಾರಣವಾಗಿರುತ್ತವೆ. ಆ ನಿಟ್ಟಿನಿಂದ ಮಕ್ಕಳಿಗೆ ಮೊಬೈಲ್ ನಿರಾಕರಿಸುವ ಸರಕಾರದ ನಿಲುವು ಸ್ವಾಗತಾರ್ಹವಾಗಿದೆ. ಒಂದು ಮಗು ಹಾಸ್ಟೆಲ್‌ನಲ್ಲಿ ಇಷ್ಟೆಲ್ಲಾ ಲೇವಡಿಗೆ ಗುರಿಯಾಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೆ ಎಂದು ಅಚ್ಚರಿಯಾಗುತ್ತದೆ. ಅವರು ಮಕ್ಕಳ ಪಾಲನೆಯಲ್ಲಿ ಜಾಗೃತರಾಗಿರಬೇಕಿತ್ತು. ಮಕ್ಕಳಿಗೆ ಆಪ್ತಸಮಾಲೋಚನೆ ಅತ್ಯಂತ ಅಗತ್ಯ. ಯಾರಾದರೂ ಆಪ್ತಸಮಾಲೋಚಕರು ಒಂದರ್ಧ ಗಂಟೆ ಈ ಮಗುವಿನ ಜೊತೆ ಸಮಯ ಕಳೆದಿದ್ದರೂ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ.
ಈ ಮಗುವಿನ ಮುಂದಿನ ದಿನಗಳ ಬಗ್ಗೆ ನೆನೆದರೆ ಭಯವಾಗುತ್ತದೆ. ಕೊಲೆಗಾರ ಎಂಬ ಕಳಂಕ ಸುತ್ತ ಮುತ್ತ ಹಬ್ಬಿಯೇ ಹಬ್ಬುತ್ತದೆ. ಇನ್ನೂ ಬಾಲಕನಾದ್ದರಿಂದ ಶಿಕ್ಷೆಯಾಗದೆ ಬಿಡುಗಡೆಯಾಗುತ್ತದೆ. ಆದರೆ ಈ ಕಳಂಕಕ್ಕಾಗಿ ಅವನು ಸಮಾಜವನ್ನು ಎದುರಿಸುವುದು ಸವಾಲುನ ಸಂಗತಿಯಾಗುತ್ತದೆ. ಅದೇ ರೀತಿ ತಮ್ಮ ಮಗುವನ್ನು ಕಳೆದುಕೊಂಡ ತಂದೆ - ತಾಯಿಯರ ಬಗ್ಗೆಯೂ ದುಃಖವಾಗುತ್ತದೆ. ಕ್ಷುಲ್ಲಕ ಕೀಟಲೆಯ ಕಾರಣದಿಂದ ತಮ್ಮ ಮಗುವಿನ ಜೀವವೇ ಬಲಿಯಾಯ್ತು ಎಂದು ಅವರು ಸಹಿಸುವುದಾದರೂ ಹೇಗೆ ? ಜೀವನಪೂರ್ತಿ ಈ ದುಃಖ ಅವರನ್ನು ಕಾಡುತ್ತದೆ.
ಬಳ್ಳಾರಿಯಂತಹ ಜಿಲ್ಲೆಯಲ್ಲಿ ಇಂತಹ ಘಟನೆಗಳನ್ನು ನಾವು ಕೇಳಿಯೇ ಇರಲಿಲ್ಲ. ಕೈಎತ್ತಿ ಹೊಡೆಯಲೂ ಅಂಜುತ್ತಿದ್ದ ಬಾಲ್ಯ ನಮ್ಮದಾಗಿತ್ತು. ಹಿರಿಯರು ತುಸು ಕಣ್ಣು ಬಿಟ್ಟರೂ ತೆಪ್ಪಗಾಗುತ್ತಿದ್ದೆವು. ಈಗ ಇದೆಂತಹ ಸ್ಥಿತಿ?
ವಸುಧೇಂದ್ರ - ಬರಹಗಾರ
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications